ಪಾವಗಡದಲ್ಲಿ ಭೀಕರ ಅಪಘಾತ- ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಶವಗಳು..!

By
2 Min Read

ತುಮಕೂರು: ಪಾವಗಡದ ತಿರುವಿನಲ್ಲಿ ನಡೆದ ಖಾಸಗಿ ಬಸ್‍ನ ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದು, ರಸ್ತೆಯಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಇಂದು ಬೆಳಗ್ಗೆ ಖಾಸಗಿ ಬಸ್ ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಹೋಗುತ್ತಿತ್ತು. ಬಸ್‍ನ ಟಾಪ್‍ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಕುಳಿತಿದ್ದರು. ಆದರೆ ಬಸ್ ಓವರ್ ಲೋಡ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಕೆರೆ ಏರಿ ಮೇಲೆ ಬಸ್ ಉರುಳಿದೆ. ಇದರಿಂದಾಗಿ 8 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.

ವೈ.ಎನ್ ಹೋಸಕೋಟೆಯ ಕಲ್ಯಾಣ (18), ಬೆಸ್ತರಹಳ್ಳಿ ನಿವಾಸದ ಶಹನವಾಜ್ (20), ಸೂಲನಾಯಕನಹಳ್ಳಿಯ ಅಮೂಲ್ಯ (17), ಅಜಿತ್ (28) ಮೃತರು. ಮೃತರೆಲ್ಲರೂ ತಿರುಮಣಿ, ಪಳವಳ್ಳಿ, ವೈ ಎನ್ ಹೊಸಕೋಟೆ ಮೂಲದವರಾಗಿದ್ದಾರೆ. ಮೃತದೇಹ ಎಲ್ಲೆಂದರಲ್ಲಿ ಬಿದ್ದಿದೆ. ಬಸ್‍ನಲ್ಲಿದ್ದ ಕೆಲವು ಪ್ರಯಾಣಿಕರು ಬಸ್ ಅಡಿಗೆ ಬಿದ್ದಿದ್ದರೇ, ಇನ್ನೂ ಕೆಲವರು ಕೆರೆಗೆ ಬಿದ್ದಿದ್ದಾರೆ. ಕೆರೆಯಲ್ಲಿ ಬಿದ್ದ ಪ್ರಯಾಣಿಕರು ಮೇಲೆ ಬರುತ್ತಿದ್ದಾರೆ. ಈಗಾಗಲೇ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾತನಾಡಿ, 8 ಜನರು ಸಾವನ್ನಪ್ಪಿದ್ದಾರೆ. 4 ಮೃತ ದೇಹಗಳ ರವಾನೆ ಆಗಿದೆ. ಸಾಕಷ್ಟು ಜನರಿಗೆ ಗಂಭೀರ ಗಾಯ ಆಗಿದೆ. ಅತಿಯಾದ ಸ್ಪೀಡ್‍ನಿಂದ ಘಟನೆ ಆಗಿದೆ. ಸ್ಥಳೀಯವಾಗಿ ಎಲ್ಲಾ ತುರ್ತು ಆರೋಗ್ಯ ಸೇವೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

50ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದು, ಬಸ್‍ನ ಟಾಪ್‍ನಲ್ಲಿ ಕುತಿದ್ದವರೇ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಕೆರೆ ಕಟ್ಟೆ ಮೇಲೆ ಬಸ್ ಉರುಳಿದೆ ಎಂದು ಪಬ್ಲಿಕ್ ಟಿವಿಗೆ ತುಮಕೂರು ಎಸ್ಪಿ ರಾಹುಲ್ ಸ್ಪಷ್ಟನೆ ನೀಡಿದ್ದಾರೆ. ಬಸ್‍ನಲ್ಲಿದ್ದ ಕೆಲವರ ಸ್ಥಿತಿ ಗಂಭೀರವಾಗಿದೆ. ಗಂಭೀರ ಗಾಯಗೊಂಡವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ತಾಲೂಕಾ ಆಸ್ಪತ್ರೆಗೆ ಭೇಟಿ ಕೊಟ್ಟ ಪಾವಗಡ ಶಾಸಕ ವೆಂಕಟರಮಣಪ್ಪ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ: 8 ಮಂದಿ ಸಾವು

ಈ ಬಗ್ಗೆ ಗಾಯಳು ಮಾತನಾಡಿ, ಪ್ರಯಾಣಿಕರು ಟಾಪ್‍ನಲ್ಲಿ ಕೂತು ಬರುತ್ತಿದ್ದರು. ಬಸ್ ವೇಗವಾಗಿ ಬರುತ್ತಿತ್ತು. ಟರ್ನಿಂಗ್‍ನಲ್ಲಿ ಬಸ್ ಕಂಟ್ರೋಲ್‍ಗೆ ಬರಲಿಲ್ಲ. ಟಾಪ್‍ನಲ್ಲಿ ಎಷ್ಟು ಜನ ಇದ್ರು ನೋಡಲಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಬ್ಬ ಮಾತನಾಡಿ, ಬಸ್‍ನಲ್ಲಿ ಸುಮಾರು 70-100 ಜನ ಇದ್ದರು. ಟಾಪ್‍ನಲ್ಲಿ 50 ಜನ ಇದ್ದರು. ಆ ಬಸ್‍ನಲ್ಲಿ ಇದ್ದವರು ಎಲ್ಲರೂ ಕಾಲೇಜು ವಿದ್ಯಾರ್ಥಿಗಳು. ವೈ.ಎನ್. ಹೊಸಕೋಟೆ ಕಡೆಯಿಂದ ಪಾವಗಡಕ್ಕೆ ಬರುವ ಬಸ್ ಅದು. ತುಂಬಾ ಸ್ಪೀಡ್ ಬರ್ತಾರೆ. ಡೋರ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳೇ ಇರ್ತಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ: ಪ್ರತಾಪ್ ಸಿಂಹ

ತುಮಕೂರು ಎಸ್ಪಿ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ ಚರ್ಚೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ರಕ್ಷಣಾ ವ್ಯವಸ್ಥೆ ಮಾಡಲು ಸಚಿವರು ಸೂಚನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *