ಚೌಕಿದಾರ್ ಜಾಲಿ ಹಾಡಿಗೆ ಕುಣಿದ ಪೃಥ್ವಿ ಅಂಬಾರ್, ಸಾಥ್‌ ಕೊಟ್ಟ ಸಾಯಿ ಕುಮಾರ್

Public TV
2 Min Read

ಥಾವರ ಸಿನಿಮಾ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈಗ ‘ಚೌಕಿದಾರ್’ ಚಿತ್ರದ (Chowkidar Movie) ಜೊತೆ ಮತ್ತೆ ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರೇಕ್ಷಕರ ವಲಯದಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ಇದೀಗ ಚೌಕಿದಾರ್ ಅಂಗಳದಿಂದ ಮತ್ತೊಂದು ಗೀತೆ ಬಿಡುಗಡೆಯಾಗಿದೆ.

ಚೌಕಿದಾರ್ ಸಿನಿಮಾದ ಜಾಲಿ ಹಾಡು ರಿಲೀಸ್ ಆಗಿದೆ. ನಾಯಕ ಓ ಮೈ ಬ್ರೋ ಎಂದು ಕುಣಿಯುವ ಹಾಡು ಇದಾಗಿದೆ. ಇದೇ ಸಮಯದಲ್ಲಿ ಅವನಿಗೆ ಅವನ ತಂದೆ ಸಾಥ್ ಕೊಟ್ಟಿದ್ದಾರೆ. ತಂದೆ ಪಾತ್ರ ನಿರ್ವಹಿಸಿರುವ ಸಾಯಿ ಕುಮಾರ್ ಭರ್ಜರಿಯಾಗಿ ಹೆಜ್ಜೆ ಹಾಕಿರುವುದು ವಿಶೇಷ. ಮುರುಳಿ ಮಾಸ್ಟರ್ ಹಾಡನ್ನು ಕೋರಿಯೋಗ್ರಫಿ ಮಾಡಿದ್ದಾರೆ. ನಾಯಕ ಪೃಥ್ವಿ ಅಂಬಾರ್ (Prithvi Ambar) ಹಾಗೂ ಸಾಯಿಕುಮಾರ್ (Sai Kumar) ಡ್ಯಾನ್ಸ್ ಜುಗಲ್ ಬಂದಿ ಹವಾ ಕ್ರಿಯೇಟ್ ಮಾಡುತ್ತಿದೆ. ಇದನ್ನೂ ಓದಿ: ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್‌

ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ಚೌಕಿದಾರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಹಾಡಿನಲ್ಲಿ ಅವರ ಮುಗ್ದತೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಓ ಮೈ ಬ್ರೋ ಪ್ಯಾಥೋ ಗೀತೆಗೆ ಖ್ಯಾತ ಗಾಯಕ ಕೈಲಾಸ್ ಖೇರ್ ಕಂಠ ಕುಣಿಸಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಹಾಡಿನ ಕಿಕ್ ಹೆಚ್ಚಿಸಿದೆ.

ಚಿತ್ರದಲ್ಲಿ ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ದಿಯಾ ಚಿತ್ರ ಖ್ಯಾತಿಯ ನಟ ಪೃಥ್ವಿ ಅಂಬಾರ್ ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ರಗಡ್ ರೋಲ್ ಮೂಲಕ ಪ್ರೇಕ್ಷಕರಿಗೆ ಎಂಟರ್ಟೈನ್ಮೆಂಟ್ ಕೊಡಲು ಸಜ್ಜಾಗಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಡೈಲಾಗ್ ಕಿಂಗ್ ಸಾಯಿ ಕುಮಾರ್ ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸುಧಾರಾಣಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸಿದ್ದಾರೆ.

ಚೌಕಿದಾರ್ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಚಿನ್ ಬಸ್ರೂರು ಸಂಗೀತ, ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯವಿದೆ. ‘ಚೌಕಿದಾರ್’ ಬಹು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಇದನ್ನೂ ಓದಿ: `ಶೋಧ’ಕ್ಕಾಗಿ ಪವನ್ ಕುಮಾರ್ ಜೊತೆ ಒಂದಾದ ಸಿರಿ ರವಿಕುಮಾರ್

Share This Article