ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಮೇಲೆ ಕೈದಿಗಳಿಂದ ಹಲ್ಲೆ – ಕೇಸ್‌ ದಾಖಲು

1 Min Read

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ (Parappana Agrahara jail) ಅಸಿಸ್ಟೆಂಟ್ ಜೈಲರ್ ಮೇಲೆ ಕೈದಿಗಳು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಶಿಕ್ಷಾ ಬಂಧಿಗಳಾದ ಆನಂದ (1489) ಮತ್ತು ಅಬ್ದುಲ್ ಘನಿ (18589) ಹಲ್ಲೆ ಸಿಬ್ಬಂದಿ ಮೇಲೆ ನಡೆಸಿದ್ದಾರೆ. ಇಬ್ಬರು ಸೇರಿ ಅನಾವಶ್ಯಕವಾಗಿ ಶಿಕ್ಷಾ ಬಂಧಿ ಕಚೇರಿಗೆ ನುಗ್ಗಲು ಯತ್ನಿಸಿದ್ದರು. ಇದನ್ನು ಅಸಿಸ್ಟೆಂಟ್ ಜೈಲರ್ ತಡೆಯಲು ಮುಂದಾದಾಗ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ 6 ಬಾರಿ ದಾಳಿ – 67 ಮೊಬೈಲ್‌, ಸಿಮ್ ಕಾರ್ಡ್ ಪತ್ತೆ

ಈ ಸಂಬಂಧ ಪ್ರಭಾರ ಅಧೀಕ್ಷಕರು ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರ್ತವ್ಯ ನಿರ್ವಹಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಸಿಬ್ಬಂದಿಯ ರಕ್ಷಣಾ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಜ.7 ರಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಜ.17 ರಂದು ಪರಪ್ಪನ ಅಗ್ರಹಾರ ಠಾಣೆಗೆ ದೂರು ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿಗರೇಟ್‌ ಪ್ಯಾಕ್‌, ಮಾದಕ ವಸ್ತು ಪತ್ತೆ – ಪರಪ್ಪನ ಅಗ್ರಹಾರ ಜೈಲು ವಾರ್ಡರ್ ಅರೆಸ್ಟ್

Share This Article