ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ಮೋದಿ ಭೇಟಿ- ಶನಿವಾರದ ಕಾರ್ಯಕ್ರಮಗಳೇನು?

Public TV
2 Min Read

ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೂ (Ayodhya Ram Mandir) ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಹಲವು ಕಾರ್ಯಕ್ರಮಗಳ ಉದ್ಘಾಟನೆಗಾಗಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

2024ರ ಜನವರಿ 22 ರಂದು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸುಮಾರು 11,100 ಕೋಟಿಯ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಮೋದಿ (Narendra Modi) ಅಯೋಧ್ಯೆಗೆ ಆಗಮಿಸುತ್ತಿದ್ದಾರೆ.

ನಾಳೆಯ ಕಾರ್ಯಕ್ರಮಗಳೇನು..?: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ 10:45 ಕ್ಕೆ ಅಯೋಧ್ಯೆಗೆ ಆಗಮಿಸಲಿದ್ದು, ಮಧ್ಯಾಹ್ನ 2:15 ದೆಹಲಿಗೆ ನಿರ್ಗಮಿಸಲಿದ್ದಾರೆ. ಈ ನಡುವೆ ಅಯೋಧ್ಯೆಯಲ್ಲಿ ಪ್ರಧಾನಿಯವರು ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: Ayodhya Ram Mandir: ನೂತನ ವಿಮಾನ ನಿಲ್ದಾಣಕ್ಕೆ ʼಮಹರ್ಷಿ ವಾಲ್ಮೀಕಿʼ ಹೆಸರಿಡಲು ನಿರ್ಧಾರ

ಅಯೋಧೆಗೆ ಆಗಮಿಸಲಿರುವ ಮೋದಿಯವರು ಮೊದಲು ಅಂದರೆ ಬೆಳಗ್ಗೆ 11:15ಕ್ಕೆ ರೈಲ್ವೆ ನಿಲ್ದಾಣ (Railway Station) ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ 2 ಹೊಸ ಅಮೃತ್ ಭಾರತ್ ರೈಲುಗಳು ಮತ್ತು 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಅಯೋಧ್ಯೆ (Ayodhya) ನಗರದಲ್ಲಿ 4 ಹೊಸ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ಅಯೋಧ್ಯೆಯಲ್ಲಿ ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಅಡಿಗಲ್ಲು ಹಾಕಲಿದ್ದಾರೆ. ಇನ್ನು 12:15 ಕ್ಕೆ ವಿಮಾನ ನಿಲ್ದಾಣದ (Ayodhya Airport) ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯ ಬಳಿಕ ರೋಡ್ ಶೋ ನಡೆಸಲಿದ್ದಾರೆ. ವಿಮಾನ ನಿಲ್ದಾಣದಿಂದ ಅಯೋಧ್ಯೆ ನಗರದೊಳಗೆ ಒಟ್ಟು 15 ಕಿಮೀ ರೋಡ್ ಶೋ (Road Show) ನಡೆಯಲಿದೆ. ಬಳಿ ಅವರು ದೆಹಲಿಗೆ ವಾಪಸ್ಸಾಗಲಿದ್ದಾರೆ.

ಬಿಗಿ ಭದ್ರತೆ: ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಖಾಕಿ ಕಣ್ಗಾವಲು ಇರಿಸಿದೆ. 5000 ಕ್ಕಿಂತ‌ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಎನ್‌ಎಸ್‌ಜಿ, ಸಿಆರ್‌ಪಿಎಫ್, ರ‍್ಯಾಪಿಡ್ ಆಕ್ಷನ್ ಫೋರ್ಸ್ ಸೇರಿ ಉತ್ತರ ಪ್ರದೇಶ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಇದನ್ನೂ ಓದಿ: ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

17 ಪೊಲೀಸ್ ವರಿಷ್ಠಾಧಿಕಾರಿಗಳು, 40 ಹೆಚ್ಚುವರಿ ಎಸ್‌ಪಿಗಳು ಮತ್ತು 82 ವೃತ್ತ ಅಧಿಕಾರಿಗಳು 90 ಇನ್ಸ್‌ಪೆಕ್ಟರ್‌ಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗುತ್ತದೆ. ಇನ್ನು ಟ್ರಾಫಿಕ್ ನಿಯಂತ್ರಣಕ್ಕೆ 75 ಸಿಬ್ಬಂದಿಯನ್ನು ಒಳಗೊಂಡ ಟ್ರಾಫಿಕ್ ಪೊಲೀಸರ ಪ್ರತ್ಯೇಕ ತಂಡವನ್ನು ನಿಯೋಜನೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article