ಹುಟ್ಟುಹಬ್ಬಗಳು ಬಂದು ಹೋಗಿವೆ, ಆದ್ರೆ ನಿನ್ನೆ ದಿನ ಭಾವನಾತ್ಮಕವಾಗಿತ್ತು: ಮೋದಿ

Public TV
1 Min Read

ನವದೆಹಲಿ: ಹುಟ್ಟುಹಬ್ಬಗಳು ಬಂದು ಹೋಗುತ್ತವೆ, ನಾನು ಇವುಗಳಿಂದ ದೂರ ಇರಲು ಬಯಸುತ್ತೇನೆ. ಆದರೆ ನನ್ನ ಇಡೀ ಜೀವನದಲ್ಲಿ ನಿನ್ನೆಯ ದಿನ ಮಾತ್ರ ಅತ್ಯಂತ ಭಾವನಾತ್ಮಕವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ.

ಇಂದು ಗೋವಾದ ಆರೋಗ್ಯ ಕಾರ್ಯಕರ್ತರು ಮತ್ತು ಲಸಿಕೆ ಫಲಾನುಭವಿಗಳನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ವೇಳೆ ಮೋದಿ ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರ ಸೇವೆಯನ್ನು ಶ್ಲಾಘಿಸಿದರು. ಇದನ್ನೂ ಓದಿ: ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೆ ಮೋದಿ ಚಿಂತನೆ ನಡೆಸಿದ್ದಾರೆ: ಅಪ್ಪಚ್ಚು ರಂಜನ್

ಕಳೆದೊಂದು ವರ್ಷದಿಂದ ವೈದ್ಯಕೀಯ ಸಿಬ್ಬಂದಿ ವಾರಿಯರ್‍ಗಳಾಗಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೀರಿ. ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದೀರಿ. ಈಗ ವ್ಯಾಕ್ಸಿನ್ ಹಂಚಿಕೆಯಲ್ಲೂ ವಿಶ್ವ ದಾಖಲೆ ಮಾಡುವ ಮೂಲಕ ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಅಭಿನಂದಿಸಿದರು.

ವ್ಯಾಕ್ಸಿನ್ ಪಡೆದ ಬಳಿಕ ಕೆಲವು ಜನರಿಗೆ ಅಡ್ಡಪರಿಣಾಮ ಕಾಣಿಸಿಕೊಳ್ಳುತ್ತಿತ್ತು. ಆದರೆ 2.5 ಕೋಟಿ ಜನರು ವ್ಯಾಕ್ಸಿನ್ ಪಡೆದ ಬಳಿಕ ಕೆಲವು ರಾಜಕೀಯ ಪಕ್ಷಗಳಿಗೆ ಜ್ವರ ಬಂದ ಅನುಭವವಾಗಿದೆ ಎಂದು ಹೆಸರು ಉಲ್ಲೇಖಿಸದೇ ವಿಪಕ್ಷಗಳಿಗೆ ತಿವಿಯುವ ಪ್ರಯತ್ನ ಮೋದಿ ಮಾಡಿದರು. ಇದನ್ನೂ ಓದಿ: ವ್ಯಾಕ್ಸಿನ್‌ ಭಾರತ ಮಹಾನ್‌ – 9 ಗಂಟೆಯಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಲಸಿಕೆ!

ನಿನ್ನೆ ಇಡೀ ದೇಶವೇ ಕೋವಿನ್ ಡ್ಯಾಶ್ ಬೋರ್ಡ್ ನೋಡಿದೆ. ಪ್ರತಿ ಸೆಕೆಂಡಿಗೆ 434 ಜನರು, ಪ್ರತಿ ನಿಮಿಷಕ್ಕೆ 26000 ಜನರು, ಪ್ರತಿ ಗಂಟೆಗೆ 15.62 ಲಕ್ಷ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟು ನಿನ್ನೆ 2,50,10,390 ಲಸಿಕೆ ನೀಡಲಾಗಿದೆ ಎಂದು ಮೋದಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *