28 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ಮೋದಿ ಶಂಕು – ವಿಕಾಸವಾದದ ಮಂತ್ರ ಪಠಿಸಿದ ನಮೋ

Public TV
1 Min Read

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸನಿಹದಲ್ಲಿ ರಾಜಕೀಯದ ಬಗ್ಗೆ ಒಂದು ಶಬ್ಧವೂ ಮಾತನಾಡದೇ, ವಿಪಕ್ಷಗಳನ್ನು ಟೀಕಿಸದೇ ವಿಕಾಸವಾದದ ಮಂತ್ರ ಪಠಿಸಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ದೆಹಲಿಯಿಂದ ಬೆಂಗಳೂರಿಗೆ ಧಾವಿಸಿದ ಪ್ರಧಾನಿ ಮೋದಿ, ನಾಲ್ಕು ಗಂಟೆಗಳ ಅವಧಿಯಲ್ಲಿ ಮೂರು ಕಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು 28 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ರು. ಕೊಮ್ಮಘಟ್ಟದ ಸಮಾರಂಭದಲ್ಲಿ ಪ್ರಧಾನಿ ಮೋದಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನೂ ಓದಿ: ಪ್ರೋಟೋಕಾಲ್ ಉಲ್ಲಂಘಿಸಿದ, ಕಾಲಿಗೆ ನಮಸ್ಕರಿಸಲು ಮುಂದಾದವ್ರಿಗೆ ಮೋದಿ ಕ್ಲಾಸ್

ರಾಜ್ಯಕ್ಕೆ ಮೋದಿ ಗಿಫ್ಟ್
15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ. 148 ಕಿ.ಮೀ ಉದ್ದದ ರೈಲ್ವೆ ಯೋಜನೆ. ನೆರೆಯ ಪಟ್ಟಣಗಳಿಗೆ ಸಂಪರ್ಕ. 314 ಕೋಟಿ ರೂ. ವೆಚ್ಚದಲ್ಲಿ ಬೈಯಪ್ಪನಹಳ್ಳಿಯಲ್ಲಿ ಎಸಿ ರೈಲ್ವೇ ನಿಲ್ದಾಣ. ಸರ್ ಎಂ.ವಿ ರೈಲ್ವೆ ಟರ್ಮಿನಲ್ – ದಕ್ಷಿಣ ಭಾರತದ ಮೊದಲ ಏರ್‌ಪೋರ್ಟ್‌ ಮಾದರಿ ರೈಲ್ವೇ ನಿಲ್ದಾಣ. 470 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ದಂಡು ನಿಲ್ದಾಣ ಅಭಿವೃದ್ಧಿ. 400 ಕೋಟಿ ರೂ ವೆಚ್ಚದಲ್ಲಿ ಯಶವಂತಪುರ ರೈಲ್ವೇ ಜಂಕ್ಷನ್ ಅಭಿವೃದ್ಧಿ. 1,287 ಕೋಟಿ ರೂ. ಕೊಂಕಣ್ ರೈಲ್ವೇ ಮಾರ್ಗದ ಶೇ.100ರಷ್ಟು ವಿದ್ಯುದೀಕರಣ (ಇಂಧನ ವೆಚ್ಚದಲ್ಲಿ 70% ಉಳಿತಾಯ). 1,800 ಕೋಟಿ ವೆಚ್ಚದ ಯಲಹಂಕ-ಪೆನುಕೊಂಡ, ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಲೋಕಾರ್ಪಣೆ. ಇದನ್ನೂ ಓದಿ: ಮೋದಿ ನನ್ನ ತಾಯಿಯನ್ನು ನೆನಪಿಸಿಕೊಂಡರು ಎಂದು ಕಣ್ಣೀರಿಟ್ಟ ರಾಮದಾಸ್ – ಇದು ಕೌಟುಂಬಿಕ ಸಂಬಂಧ

ರಾ.ಹೆ.73ರಲ್ಲಿ ಪುಂಜಾಲಕಟ್ಟೆ – ಚಾರ್ಮಾಡಿ ಘಾಟ್ ಹೆದ್ದಾರಿ ಅಗಲೀಕರಣ. ಮಲ್ಟಿಮಾಡೆಲ್ ಲಾಜಿಸ್ಟಿಕ್ ಪಾರ್ಕ್‍ಗೆ ಶಂಕು. 4,600 ಕೋಟಿ ರೂ. ವೆಚ್ಚದ 150 ತಂತ್ರಜ್ಞಾನ ಹಬ್ ಲೋಕಾರ್ಪಣೆ ಮೂಲಕ ಮೋದಿ ಮೊದಲ ದಿನದ ಪ್ರವಾಸದಲ್ಲಿ ರಾಜ್ಯಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *