ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ

Public TV
1 Min Read

ನವದೆಹಲಿ: ದೀಪಗಳ ಹಬ್ಬ ದೀಪಾವಳಿ (Deepavali) ಮುನ್ನ ದಿನ (ಭಾನುವಾರ) ಪ್ರಧಾನಿ ನರೇಂದ್ರ ಮೋದಿ (Narendra Modi) ಅಯೋಧ್ಯೆ (Ayodhya) ಗೆ ಭೇಟಿ ನೀಡಲಿದ್ದು, ಶ್ರೀರಾಮನ ದರ್ಶನ ಪಡೆದು ಅಂದು ನಡೆಯಲಿರುವ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಾಮ ಮಂದಿರ (Rama Mandir)ದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಅವರು, ನಿರ್ಮಾಣ ಹಂತದಲ್ಲಿರುವ ಭವ್ಯ ಶ್ರೀರಾಮ ಮಂದಿರದ ಕಾಮಗಾರಿಯನ್ನು ಪರಿಶೀಲಿಸುವ ನಿರೀಕ್ಷೆಯಿದೆ. ಬಳಿಕ ಅವರು ತಾತ್ಕಾಲಿಕ ಪ್ರವಾಸದ ವೇಳಾಪಟ್ಟಿಯಂತೆ, ರಾಮ್ ಲೀಲಾದಲ್ಲಿ ರಾಮ್ ಮತ್ತು ಇತರರ ಪಾತ್ರವನ್ನು ಬರೆಯುವವರನ್ನು ಸ್ವಾಗತಿಸಲು ರಾಮ್ ಕಥಾ ಪಾರ್ಕ್‍ಗೆ ಭೇಟಿ ನೀಡಬಹುದು. ಇದನ್ನೂ ಓದಿ: ಉಗ್ರರನ್ನು ಮಟ್ಟ ಹಾಕಲು ಉತ್ತರ ಭಾರತದ ಹಲವೆಡೆ NIA ರೇಡ್

ನರೇಂದ್ರ ಮೋದಿ ಆಗಮನ ಹಿನ್ನಲೆ ರಾಮಮಂದಿರ ನಿರ್ಮಾಣ ಸಮಿತಿಯ (ಆರ್‍ಎಂಸಿಸಿ) ಎರಡು ದಿನಗಳ ಪರಿಶೀಲನಾ ಸಭೆ ನಡೆಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಸದಸ್ಯರು ರಾಮಮಂದಿರದ ಸುಮಾರು 50 ಪ್ರತಿಶತದಷ್ಟು ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದನ್ನು ಪ್ರಧಾನಮಂತ್ರಿಗಳಿಗೆ ವಿವರಿಸಲಿದ್ದಾರೆ. ಇದನ್ನೂ ಓದಿ: ತಾಯಿ ಸನ್‍ಸ್ಕ್ರೀನ್ ಕಳಿಸಿದ್ರು, ನಾನು ಬಳಸಲ್ಲ: ರಾಹುಲ್ ಗಾಂಧಿ

ಅದೇ ದಿನ ಸಂಜೆ ಅವರು ಸರಯು ನದಿ (Sarayu River) ತಟದಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೀಪೋತ್ಸವ ಕಾರ್ಯಕ್ರಮಕ್ಕೂ ಚಾಲನೆ ನೀಡದಿದ್ದಾರೆ. ಈ ವೇಳೆ ಹಸಿರು ಡಿಜಿಟಲ್ ಪಟಾಕಿಗಳನ್ನು ಸಿಡಿಸಲು ಯೋಜಿಸಲಾಗಿದೆ. ಭಾನುವಾರದಿಂದ ಪ್ರಾರಂಭವಾಗುವ ಮೂರು ದಿನಗಳ ದೀಪೋತ್ಸವ ಆಚರಣೆಯಲ್ಲಿ, ರಷ್ಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ಫಿಜಿ ಕಲಾವಿದರಿಂದ ರಾಮಲೀಲಾ ಪ್ರದರ್ಶನಗಳು ನಡೆಯಲಿವೆ. ಈ ಬಾರಿ ಹೊಸ ದಾಖಲೆಯನ್ನು ಸೃಷ್ಟಿಸಲು ನಿರ್ಧರಿಸಲಾಗಿದ್ದು, 17 ಲಕ್ಷ ದೀಪಗಳು ಬೆಳಗಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *