ನವದೆಹಲಿ: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತ ಸೂಪರ್ ಪವರ್ ಆಗಬೇಕೆಂಬ ನಿಟ್ಟಿನಲ್ಲಿ ಆಯೋಜನೆಗೊಂಡಿರುವ ಜಾಗತಿಕ ಎಐ ಶೃಂಗಕ್ಕೆ ದೆಹಲಿಯಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಎಐ ಇಂಪ್ಯಾಕ್ಟ್ ಶೃಂಗ ಮತ್ತು ಎಐ ಇಂಪ್ಯಾಕ್ಟ್ ಎಕ್ಸ್‌ಪೋವನ್ನು (India AI Impact Expo 2026) ಉದ್ಘಾಟಿಸಿದರು.
ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 500 ಅಧಿವೇಶನ ನಡೆಯಲಿದ್ದು 3 ಸಾವಿರ ಭಾಷಣಕಾರರು ಭಾಗಿಯಾಗಲಿದ್ದಾರೆ. ಜಾಗತಿಕ ತಂತ್ರಜ್ಞಾನ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಭಾಗಿಯಾಗಿವೆ.
ಗೂಗಲ್ ಸಿಇಒ ಸುಂದರ್ ಪಿಚೈ, ಒಪನ್ ಎಐನ ಸ್ಯಾಮ್ ಆಲ್ಟ್‌ಮನ್, ಡೀಪ್‌ಮೈಂಡ್ ಟೆಕ್ನಾಲಜೀಸ್ ಸಿಇಒ ಡೆಮಿಸ್ ಹಸಾಬಿಸ್, ಆ್ಯಂಥ್ರೋಪಿಕ್ ಸಿಇಒ ಡೆರಿಯೋ ಅಮೋಡೈ, ಮೈಕ್ರೋಸಾಫ್ಟ್ ಅಧ್ಯಕ್ಷ ಬ್ರ್ಯಾಡ್ ಸ್ಮಿತ್ ಸೇರಿ ವಿಶ್ವದ ಪ್ರಮುಖ ಟೆಕ್ ದಿಗ್ಗಜ ಕಂಪನಿಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಎಕ್ಸ್‌ಪೋ ಅಂತರರಾಷ್ಟ್ರೀಯ ಪ್ರತಿನಿಧಿಗಳು ಸೇರಿದಂತೆ 2.5 ಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.
PM Modi Explores Jio’s AI Vision at India AI Impact Expo
At the India AI Impact Summit 2026, Shri Akash M. Ambani, Chairman of Reliance Jio Infocomm Limited (RJIL) showcased Jio’s expansive AI ecosystem to Prime Minister Shri Narendra Modi. During the walk through of Hon’ble PM,… pic.twitter.com/NYj4CddWkL
— Reliance Industries Limited (@RIL_Updates) February 16, 2026
ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ ಸೇರಿದಂತೆ ಹಲವು ಜಾಗತಿಕ ನಾಯಕರು AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. 45ಕ್ಕೂ ಹೆಚ್ಚು ದೇಶಗಳ ಸಚಿವರ ನಿಯೋಗಗಳು ಶೃಂಗಸಭೆಯಲ್ಲಿ ಭಾಗವಹಿಸಲಿವೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ (UN Secretary General) ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಹ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಆಸ್ಟ್ರೇಲಿಯಾ, ಜಪಾನ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್‌ಲ್ಯಾಂಡ್ಸ್, ಸ್ವಿಟ್ಜರ್‌ಲ್ಯಾಂಡ್, ಸೆರ್ಬಿಯಾ, ಎಸ್ಟೋನಿಯಾ, ತಜಿಕಿಸ್ತಾನ್ ಮತ್ತು ಆಫ್ರಿಕನ್ ರಾಷ್ಟ್ರಗಳ ಭಾಗವಹಿಸಿವೆ.

