ಖ್ಯಾತನಟ ಸುರೇಶ್ ಗೋಪಿ ಪುತ್ರಿಯ ಮದುವೆಯಲ್ಲಿ ಪ್ರಧಾನಿ ಮೋದಿ

Public TV
1 Min Read

ಲಯಾಳಂ ಖ್ಯಾತ ನಟ, ರಾಜ್ಯಸಭಾ ಮಾಜಿ ಸಂಸದ ಸುರೇಶ್ ಗೋಪಿ (Suresh Gopi) ಅವರ ಪುತ್ರಿ ಭಾಗ್ಯ ಸುರೇಶ್ (Bhagya Suresh) -ಶ್ರೇಯಸ್ ಮೋಹನ್ ವಿವಾಹಕ್ಕೆ (Marriage) ಪ್ರಧಾನಿ ನರೇಂದ್ರ ಮೋದಿ (Narendra Modi) ಸಾಕ್ಷಿಯಾಗಿದ್ದಾರೆ.

ಅತ್ಯಂತ ಮಾದರಿಯಾಗಿ ನಡೆದ ಮದುವೆಯಲ್ಲಿ ಪಾಳ್ಗೊಂಡಿದ್ದ ಮೋದಿ, ವಧುವರರಿಗೆ ಶುಭ ಕೋರಿದರು. ಇದೇ ವೇಳೆ ದೇವಸ್ಥಾನದಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಳಿದ ಜೋಡಿಗೂ ಮೋದಿ ಶುಭ ಹಾರೈಸಿದರು.

ಗುರುವಾಯೂರ್ ಶ್ರೀಕೃಷ್ಣ ದೇಗುಲದಲ್ಲಿ ನಡೆದ ವಿವಾಹಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರಾದ ಮೋಹನ್ ಲಾಲ್, ಮಮ್ಮುಟ್ಟಿ, ದಿಲೀಪ್, ಬಿಜು ಮೆನನ್, ಜಯರಾಂ, ಪಾರ್ವತಿ, ಖುಷ್ಬೂ, ಶಾಜಿ ಕೈಲಾಸ್, ಹರಿಹರನ್, ರಚನಾ ನಾರಾಯಣನ್ ಕುಟ್ಟಿ, ಸರಯೂ ಭಾಗಿ ಮೊದಲಾದವರು ಆಗಮಿಸಿದ್ದರು.

ಸುರೇಶ್ ಗೋಪಿ ಮಲಯಾಳಂ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ನಟ, ಅಲ್ಲದೇ ಮಾದರಿಯ ಬದುಕನ್ನು ನಡೆಸಿದವರು. ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

 

ಸಮಾಜಸೇವೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ತಮ್ಮ ಬದುಕಿನಂತೆಯೇ ಮಗಳ ಮದುವೆಯೂ ಸರಳವಾಗಿ ಇರಲಿ ಎನ್ನುವುದು ಅವರ ಉದ್ದೇಶವಾಗಿತ್ತು.

Share This Article