ಎರಡನೇ & 4ನೇ ಶನಿವಾರ ರಜೆ ಕೊಡಿ – ಪ್ರಾಥಮಿಕ ಶಿಕ್ಷಕರಿಂದ ಸಿಎಂಗೆ ಮನವಿ

2 Min Read

ಬೆಂಗಳೂರು: ಶಾಲಾ ಶಿಕ್ಷಕರಿಗೂ ಎರಡನೇ ಮತ್ತು 4ನೇ ಶನಿವಾರ ರಜೆ ಕೊಡಬೇಕು ಅಂತ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಿಎಂ ಸಿದ್ದರಾಮಯ್ಯಗೆ (Siddaramaiah) ಮನವಿ ಮಾಡಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ, ಧನ್ಯತಾ ಸಮರ್ಪಣೆ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಸಂಘದಿಂದ ಹಲವು ಮನವಿ ಮಾಡಲಾಯಿತು. ಇದನ್ನೂ ಓದಿ: ಮೊದಲ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿ – 96.87% ಹಾಜರಾತಿ ದಾಖಲು

NPS ರದ್ದು ಮಾಡಿ OPS ಜಾರಿ ಮಾಡಬೇಕು. ಹಿಂದುಳಿದ ನೌಕರರ ವಾರ್ಷಿಕ ಆದಾಯದ ಮಿತಿ 8 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಬೇಕು. ಸರ್ಕಾರಿ ಕಚೇರಿಗಳಿಗೆ‌ ನೀಡುವ 2 ಮತ್ತು 4 ನೇ ಶನಿವಾರ ರಜೆ ಶಿಕ್ಷಕರಿಗೂ ಕೊಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯಿಂದ ಪ್ರೌಢಶಾಲಾ ಸಹ ಶಿಕ್ಷಕ ವೃಂದ ಗ್ರೇಡ್ 1 ಹುದ್ದೆಗೆ ಬಡ್ತಿ ನೀಡಬೇಕು ಅಂತ ಮನವಿ ಮಾಡಿದ್ರು.

ಪದವಿ ಹೊಂದಿದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡಬೇಕು. ಆರ್ಥಿಕ ಸೌಲಭ್ಯ ಒದಗಿಸಬೇಕು. ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ಪದ್ದತಿ ರದ್ದು ಮಾಡಬೇಕು. ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರಿಗೆ ಬಡ್ತಿ ನೀಡಬೇಕು. 50 ಮಕ್ಕಳು ಇರೋ ಶಾಲೆಗಳಿಗೆ ಮುಖ್ಯ ಗುರುಗಳ ಹುದ್ದೆ 150 ಕ್ಕಿಂತ ಜಾಸ್ತಿ ಇರೋ ಮಕ್ಕಳ ಶಾಲೆಗಳಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆ ಮಂಜೂರು ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ LKG-UKG ಪ್ರಾರಂಭ ಮಾಡಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಏಕರೂಪದ ಶಾಲಾ ಬ್ಯಾಗ್ ಸರ್ಕಾರ ನೀಡುವ ಮೂಲಕ ಎಲ್ಲಾ ವಸ್ತುಗಳನ್ನು ಒಳಗೊಂಡ ‘ಕರ್ನಾಟಕ ವಿದ್ಯಾಕಿಟ್’ ವಿತರಣೆ ಮಾಡಬೇಕು. ಶಾಲೆಗಳಿಗೆ ನೀಡುವ ಮೊಟ್ಟೆ ದರ ಹೆಚ್ಚಳ ಮಾಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಅಧ್ಯಯನಕ್ಕಾಗಿ ಸರ್ಕಾರದಿಂದ ‘ವಿದೇಶಿ ಪ್ರವಾಸ’ ಕಳುಹಿಸಬೇಕು. ಶಿಕ್ಷಕರಿಗೆ ಪಾಠ ಮಾಡೋದು ಬಿಟ್ಟು ಬೇರೆ ಕೆಲಸ ಜಾಸ್ತಿ ಇದೆ. ಶಿಕ್ಷಕರಿಗೆ ಬೇರೆ ಕೆಲಸ ಮಾಡುವ ವ್ಯವಸ್ಥೆ ಕೈ ಬಿಡಬೇಕು. ಶಿಕ್ಷಕರ ರಕ್ಷಣೆಗೆ ವಿಶೇಷ ಕಾನೂನು ಮಾಡಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಕುಸ್ತಿಯ ಗುದ್ದಾಟ ಬಜೆಟ್ ನಂತರ ಅಂತಿಮ ಘಟ್ಟಕ್ಕೆ ತಲುಪಲಿದೆ: ಬೊಮ್ಮಾಯಿ

ಸಂಘಕ್ಕೆ ಬೆಂಗಳೂರಿನ ಗಾಂಧಿ ನಗರದಲ್ಲಿ ಒಂದು ನಿವೇಶನ ನೀಡಬೇಕು‌. ಶಿಕ್ಷಕರಿಗೆ KAMS ಹಾಜರಾತಿಯಿಂದ ವಿನಾಯಿತಿ ಕೊಡಬೇಕು. ಶಿಕ್ಷಕರ ಖಾಲಿ ಹುದ್ದೆ ಭರ್ತಿ ಮಾಡಬೇಕು ಅಂತ ಮನವಿ ಮಾಡಿದ್ರು. ಸಿದ್ದರಾಮಯ್ಯ ಮಾತಾಡಿ NPS- OPS ಬಗ್ಗೆ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡ್ತೀವಿ ಅಂದರು. ನ್ಯಾಯಯುತ ಬೇಡಿಕೆ ಈಡೇರಿಸೋ ಭರವಸೆ ಕೊಟ್ರು. ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಸಂಘಕ್ಕೆ ನಿವೇಶನ ನೀಡುವ ಭರವಸೆ ಕೊಟ್ಟರು.

Share This Article