ಜೈ ಹಿಂದ್ – ಗಣರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗಣರಾಜ್ಯೋತ್ಸವದ ನಿಮತ್ತ ದೇಶದ ಜನರಿಗೆ ಶುಭ ಕೋರಿದ್ದಾರೆ. ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್ ಎಂದು ಶುಭ ಹಾರೈಸಿದ್ದಾರೆ.

ಗಣರಾಜ್ಯೋತ್ಸವದಂದು ದೇಶಕ್ಕೆ ಶುಭ ಹಾರೈಸಿರುವ ಗೃಹ ಸಚಿವ ಅಮಿತ್ ಶಾ, ಭಾರತದ ಹೆಮ್ಮೆ, ಏಕತೆ ಮತ್ತು ಸಮಗ್ರತೆಯನ್ನು ಅಖಂಡವಾಗಿಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಎಲ್ಲಾ ಸೈನಿಕರಿಗೂ ನಾನು ನಮಸ್ಕರಿಸುತ್ತೇನೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ.

ಈ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮವು 75 ವರ್ಷಗಳ ಸ್ವಾತಂತ್ರ್ಯದ ನಿಮಿತ್ತ ಕೇಂದ್ರದ ಆಜಾದಿ ಕಾ ಅಮೃತ್ ಮಹೋತ್ಸವವಾಗಿ ಆಚರಿಸುತ್ತಿದೆ. 75 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ದೇಶವು ಸಾಕ್ಷಿಯಾಗಲಿದೆ.

ಈ ಬಾರಿ ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವದ ಪರೇಡ್‍ನಲ್ಲಿ 16 ಕವಾಯತು ತಂಡಗಳು, 17 ಮಿಲಿಟರಿ ಬ್ಯಾಂಡ್‍ಗಳು ಮತ್ತು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಇಲಾಖೆಗಳು ಹಾಗೂ ಸಶಸ್ತ್ರ ಪಡೆಗಳ 25 ಸ್ಥಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಭಾರತದ ಸೇನೆ ಶಕ್ತಿ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ: ಗಣರಾಜ್ಯೋತ್ಸವದ ನಿಮಿತ್ತ ಗೂಗಲ್ ಡೂಡಲ್‍ನಿಂದ ವಿಶೇಷ ಗೌರವ

ಕೋವಿಡ್ ಭೀತಿಯಿಂದ, ದೆಹಲಿ ಪೊಲೀಸರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾಗೂ ಎರಡೂ ಡೋಸ್‍ಗಳ ಲಸಿಕೆ ಪಡೆಯದ ಜನರಿಗೆ ಈ ವರ್ಷದ ಗಣರಾಜ್ಯೋತ್ಸವ ಪರೇಡ್‍ಗೆ ಹಾಜರಾಗಲು ನಿಬರ್ಂಧಿಸಿದ್ದಾರೆ. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ

Share This Article
Leave a Comment

Leave a Reply

Your email address will not be published. Required fields are marked *