ಇಂದು ರಾಷ್ಟ್ರಪತಿಗಳಿಂದ ಮೈಸೂರು ದಸರಾ ಉದ್ಘಾಟನೆ – ಏನೇನು ಕಾರ್ಯಕ್ರಮ ನಡೆಯಲಿದೆ?

Public TV
2 Min Read

ಮೈಸೂರು: ಕಳೆದ ಎರಡು ವರ್ಷದಿಂದ ಕೊರೊನಾ ಮಹಾಮಾರಿಯಿಂದ ಮಂಕಾಗಿದ್ದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ಜರುಗಲಿದೆ. ಇಂದಿನಿಂದ 9 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ನವರಾತ್ರಿ ವೈಭವ ಆರಂಭವಾಗಲಿದೆ.

ವೈಭಪೂರಿತ ದಸರಾ ಮಹೋತ್ಸವಕ್ಕೆ ಇಂದು ರಾಷ್ಟ್ರಪತಿ ದ್ರೌಪತಿ ಮುರ್ಮ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ 10ಕ್ಕೆ ರಾಷ್ಟ್ರಪತಿ ಮುರ್ಮು, ತಾಯಿ ಚಾಮುಂಡಿ ಉತ್ಸವ ಮೂರ್ತಿಗೆ ಪುಷ್ಪರ್ಚಾನೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಚಾಲನೆ ನೀಡಲಿದ್ದು, ರಾಜ್ಯಪಾಲರು, ಸಿಎಂ, ಕೇಂದ್ರ ಸಚಿವರು ಸಾಥ್ ನೀಡಲಿದ್ದಾರೆ.

ಇತ್ತ ಅಂಬಾವಿಲಾಸ ಅರಮನೆಯಲ್ಲಿ ಇಂದಿನಿಂದ ಖಾಸಗಿ ದರ್ಬಾರ್ ನಡೆಯಲಿದ್ದು, ಗತಕಾಲದ ವೈಭವ ಮರುಕಳಿಸಲಿದೆ. ದಸರಾ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಗಿರುವ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೆ ಭರದ ಸಿದ್ಧತೆ ಸಾಗಿದೆ. ಇಂದಿನಿಂದ ಅಕ್ಟೋಬರ್ 5ರವರೆಗೆ ನಗರದ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನದ ಏರ್ಪಡಿಸಲಾಗಿದೆ.

ದಸರಾ ತಯಾರಿಯನ್ನು ಸಿಎಂ ಬೊಮ್ಮಾಯಿ ವೀಕ್ಷಿಸಿದ್ದು, ರಾತ್ರಿ ಸಿಟಿ ರೌಂಡ್ಸ್ ಮಾಡುವ ಮೂಲಕ ವಿದ್ಯುತ್ ದೀಪಾಲಂಕಾರವನ್ನು ನೋಡಿ ಆನಂದಿಸಿದ್ದಾರೆ.  ಇದನ್ನೂ ಓದಿ: ಕೊಹ್ಲಿ ಜೊತೆ ಸೂರ್ಯನ ಅಬ್ಬರ – ವಿಶ್ವಚಾಂಪಿಯನ್ನರಿಗೆ ಸೋಲು, ಭಾರತಕ್ಕೆ T20 ಸರಣಿ

ರಾಷ್ಟ್ರಪತಿಗಳ ದಸರಾ ಕಾರ್ಯಕ್ರಮ ವಿವರ
ಬೆಳಗ್ಗೆ 9:00 – ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
ಬೆಳಗ್ಗೆ 9.30 – ಚಾಮುಂಡಿಬೆಟ್ಟಕ್ಕೆ ಭೇಟಿ, ವಿಶೇಷ ಪೂಜೆ
ಬೆಳಗ್ಗೆ 10:00 – ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮೂಲಕ ದಸರೆಗೆ ಚಾಲನೆ
ಬೆಳಗ್ಗೆ 10:45 – ಚಾಮುಂಡಿ ಬೆಟ್ಟದಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ
ಬೆಳಗ್ಗೆ 11:15 – ಮೈಸೂರಿನಿಂದ ಹುಬ್ಬಳ್ಳಿಗೆ ಪ್ರಯಾಣ

ಇಂದಿನ ಕಾರ್ಯಕ್ರಮಗಳು ಏನು?
– ಬೆಳಗ್ಗೆ 9:45 ರಿಂದ 10.05ರ ಶುಭ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆ
– ಮಧ್ಯಾಹ್ನ 12:00 – ಕೈಗಾರಿಕಾ ದಸರಾ ಉದ್ಘಾಟಿಸಲಿರುವ ಸಚಿವ ನಿರಾಣಿ ಸ್ಥಳ: ವಿಜ್ಞಾನ ಭವನ
– ಮಧ್ಯಾಹ್ನ 12:30 – ಶಿವರಾಜ್‍ಕುಮಾರ್ ಅವರಿಂದ ಚಲನಚಿತ್ರೋತ್ಸವ ಉದ್ಘಾಟನೆ ಸ್ಥಳ: ಕಲಾಮಂದಿರ
– ಮಧ್ಯಾಹ್ನ 12.30 – ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿರುವ ಸಚಿವ ಮುನಿರತ್ನ ಸ್ಥಳ: ಕುಪ್ಪಣ್ಣ ಪಾರ್ಕ್
– ಮಧ್ಯಾಹ್ನ 1.00 – ಸಚಿವ ಎಸ್‍ಟಿಎಸ್ ಅವರಿಂದ ಆಹಾರ ಮೇಳ ಉದ್ಘಾಟನೆ ಸ್ಥಳ: ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ

– ಮಧ್ಯಾಹ್ನ 3:30 – ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ, ಸ್ಥಳ: ದೇವರಾಜ ಅರಸು ಕ್ರೀಡಾಂಗಣ
– ಸಂಜೆ 4- ವಸ್ತು ಪ್ರದರ್ಶನ ಉದ್ಘಾಟಿಸಲಿರುವ ಸಚಿವ ಆನಂದ್ ಸಿಂಗ್
– ಸಂಜೆ 5 – ಯೋಗ ದಸರಾ, ನೃತ್ಯರೂಪಕ, ಸ್ಥಳ: ಓವೆಲ್ ಮೈದಾನ
– ಸಂಜೆ 5:30 – ಅರಮನೆಯಲ್ಲಿ ಸಚಿವ ಎಸ್‍ಟಿ. ಸೋಮಶೇಖರ್ ಅವರಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ ಉದ್ಘಾಟನೆ

– ಸಂಜೆ 5:30 – ರಾಜ್ಯಮಟ್ಟದ ಶಿಲ್ಪ ಚಿತ್ರಕಲೆ ಪ್ರದರ್ಶನ ಉದ್ಘಾಟಿಸಲಿರುವ ಸಚಿವ ಸುನೀಲ್ ಕುಮಾರ್, ಸ್ಥಳ: ಕಲಾಮಂದಿರ
– ಸಂಜೆ 6 – ಅರಮನೆ ವೇದಿಕೆ ಕಾರ್ಯಕ್ರಮ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ, ಉದ್ಘಾಟನೆ ಸಿಎಂ ಬೊಮ್ಮಾಯಿ
– ಸಂಜೆ 6:30 – ವಿದ್ಯುತ್ ದೀಪಾಲಂಕಾರ ಉದ್ಘಾಟಿಸಲಿರುವ ಸಚಿವ ಸುನೀಲ್ ಕುಮಾರ್, ಸ್ಥಳ: ಸೈಯಾಜಿರಾವ್ ರಸ್ತೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *