ಯುದ್ಧ ವಿಮಾನದಲ್ಲಿ ಮೊದಲ ಬಾರಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು

Public TV
1 Min Read

ದಿಸ್ಪುರ್: ರಾಷ್ಟ್ರಪತಿ (President) ದ್ರೌಪದಿ ಮುರ್ಮು (Droupadi Murmu) ಅವರು ಶನಿವಾರ ಮೊದಲ ಬಾರಿಗೆ ಯುದ್ಧ ವಿಮಾನ ಸುಖೋಯ್ 30 ಎಂಕೆಐನಲ್ಲಿ (Sukhoi 30 MKI) ಹಾರಾಟ ನಡೆಸಿದ್ದಾರೆ.

ಶನಿವಾರ ಅಸ್ಸಾಂನ (Assam) ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಮುರ್ಮು ಯುದ್ಧ ವಿಮಾನವನ್ನು ಏರಿದ್ದಾರೆ. ಈ ಮೂಲಕ ಮುರ್ಮು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ 2ನೇ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ. ಹಾರಾಟದ ಬಳಿಕ ರಾಷ್ಟ್ರಪತಿ ಸುರಕ್ಷಿತವಾಗಿ ನಿಲ್ದಾಣದಲ್ಲಿ ಇಳಿದಿದ್ದಾರೆ.

ಸುಖೋಯ್-30 ಎಂಕೆಐ ಟ್ವಿನ್ ಸೀಟರ್ ಮಲ್ಟಿರೋಲ್ ಫೈಟರ್ ಜೆಟ್ ಆಗಿದ್ದು, ಇದನ್ನು ರಷ್ಯಾದ ಸುಖೋಯ್ ಅಭಿವೃದ್ಧಿಪಡಿಸಿದೆ. ಮಾತ್ರವಲ್ಲದೇ ಇದನ್ನು ಭಾರತದ ಏರೋಸ್ಪೇಸ್ ದೈತ್ಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಹೆಚ್‌ಎಎಲ್) ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ. ಇದನ್ನೂ ಓದಿ: ಬೇರೆ ರಾಜ್ಯಗಳಲ್ಲಿ ನಂದಿನಿ ಮಾರಾಟ ನಾವೂ ಮಾಡಿದ್ದೇವೆ; ಇದ್ರಲ್ಲಿ ರಾಜಕಾರಣ ಸಲ್ಲದು: ಬೊಮ್ಮಾಯಿ

2009ರಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಏಪ್ರಿಲ್ 6ರಂದು ಅಸ್ಸಾಂಗೆ ತೆರಳಿದ್ದು, 3 ದಿನಗಳ ಪ್ರವಾಸದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಭವಿಷ್ಯವೇ ಬದಲಿಸಿದ ಒಂದೇ ಒಂದು ಮತ!

Share This Article