ಸೋಲೂರಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

Public TV
2 Min Read

ಆನೇಕಲ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸತತ್(ಸಸ್ಟೇನಬಲ್ ಆಲ್ಟರ್ನೇಟಿವ್ ಟುವರ್ಡ್ಸ್ ಅಫೋರ್ಡಬಲ್ ಟ್ರಾನ್ಸ್ ಪೊರ್ಟೇಶನ್ ) ಯೋಜನೆಯಡಿಯಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು ಮಾಡುವ ಘಟಕ ಸ್ಥಾಪನೆಗೊಂಡಿದ್ದು, ಇಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಘಟಕಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸೋಲೂರು ಗ್ರಾಮದಲ್ಲಿರುವ ಹೈಕಾನ್ ರೆನೆವಾಬ್ಲೆ ಪ್ರೈವೆಟ್ ಲಿಮಿಟೆಡ್ ಘಟಕವು ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲಿನಿಂದ ಬಯೋ ಗ್ಯಾಸ್ ತಯಾರು ಮಾಡುವ ಘಟಕವಾಗಿದೆ. ಕೇಂದ್ರ ಸರ್ಕಾರವು ಕಳೆದ ಮೂರು ವರ್ಷದ ಹಿಂದೆ ಸತತ್ ಎಂಬ ಯೋಜನೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸಿದ್ದು, ಗ್ಯಾಸ್ ತಯಾರು ಮಾಡಿದಾಗ ಅದನ್ನು ಇಂಡಿಯನ್ ಆಯಿಲ್ ಹಾಗೂ ಗೇಲ್ ಕಂಪನಿಗಳು ಪಡೆದುಕೊಂಡು ಗ್ರಾಹಕರಿಗೆ ತಲುಪಿಸಲಿದೆ. ಇದನ್ನೂ ಓದಿ:  ಉಡುಪಿಯಲ್ಲಿ ಹಟ್ಟಿಗೆ ನುಗ್ಗಿ ಗೋವು ಕಳ್ಳತನ- ಪೊಲೀಸ್ ಠಾಣೆ ಮುಂದೆ ಪ್ರತಿಭಟನಾ ಭಜನೆ

ಹೈಕಾನ್ ರೆನೆವಾಬ್ಲೆ ಪ್ರೈವೆಟ್ ಲಿಮಿಟೆಡ್ ಘಟಕದ ಮುಖ್ಯಸ್ಥ ಶಶಿಕಾಂತ್ ಮತ್ತು ಅವರ ತಂಡ ಈ ಅದ್ಭುತವಾದ ಯೋಜನೆಗೆ ಕೈಜೋಡಿಸಿದ್ದಾರೆಂದು ಗಿರಿರಾಜ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದರು.

ಹೈಕಾನ್ ರೆನೆವಾಬ್ಲೆ ಪ್ರೈವೆಟ್ ಲಿಮಿಟೆಡ್ ಘಟಕದ ನಿರ್ದೇಶಕ ಶಶಿಕಾಂತ್ ಹೆಗಡೆ ಈ ಕುರಿತು ಮಾತನಾಡಿದ್ದು, ಕೇಂದ್ರ ಸರ್ಕಾರದ ಸತತ್ ಯೋಜನೆ ಅಡಿಯಲ್ಲಿ ಹುಲ್ಲಿನಿಂದ ಗ್ಯಾಸ್ ತಯಾರು ಮಾಡುವ ಪ್ರಯೋಗವನ್ನು ಮಾಡಿದ್ದು, ಯಶಸ್ವಿಯಾಗಿದೆ. ಇದನ್ನೂ ಓದಿ:  ಮಲೆಮಹದೇಶ್ವರ ಬೆಟ್ಟ 5 ವರ್ಷಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ: ಬೊಮ್ಮಾಯಿ

ಇಂಡಿಯನ್ ಗ್ಯಾಸ್ ಕಂಪನಿಯ ಜೊತೆ ಹತ್ತು ವರ್ಷಗಳ ಕಾಂಟ್ರಾಕ್ಟ್ ಆಗಿದ್ದು ಸಪ್ಲೈ ಸಹ ಪ್ರಾರಂಭವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದಲೂ ಸಬ್ಸಿಡಿ ದೊರೆಯುತ್ತಿದೆ ಎಂದರು.

ಭಾರತದಲ್ಲಿ ಮೊದಲಿನಿಂದಲೂ ಗೊಬ್ಬರದಿಂದ ಗ್ಯಾಸ್ ತಯಾರು ಮಾಡುತ್ತಿದ್ದರೂ ಈಗ ಹೈಕಾನ್ ಕಂಪನಿಯು ಭಾರತದಲ್ಲಿಯೇ ಪ್ರಥಮ ಬಾರಿಗೆ ಹುಲ್ಲಿನಿಂದ ಗ್ಯಾಸ್ ತಯಾರು ಮಾಡುವುದನ್ನು ಪರಿಚಯಿಸಿದೆ. ಸಾಮಾನ್ಯ ರೈತನು ಸಹ ಹುಲ್ಲನ್ನು ಬೆಳೆದು ಈ ರೀತಿ ಗ್ಯಾಸ್ ತಯಾರು ಮಾಡುವ ಘಟಕಗಳನ್ನು ಮಾಡಿಕೊಂಡು ಕಂಪನಿಗಳಿಗೆ, ಮನೆಗಳಿಗೆ ಸೇರಿದಂತೆ ಗ್ಯಾಸ್ ಅವಶ್ಯಕತೆ ಇರುವ ಕಡೆಗಳಿಗೆ ಉತ್ಪಾದನೆ ಮಾಡಬಹುದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ರಾಜ್ಯದ ಹಲವೆಡೆ ನಾಲ್ಕು ದಿನ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ಈ ಮೂಲಕ ಗ್ಯಾಸ್ ಅನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದು ಕಡಿಮೆಯಾಗಿ, ನಮ್ಮಲ್ಲಿಯೇ ಉತ್ಪಾದನೆ ಹೆಚ್ಚಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಪರಿಚಯಿಸಿದೆ. ಇದರಿಂದ ಸಾಕಷ್ಟು ಜನಕ್ಕೆ ಇದರಿಂದ ಕೆಲಸವು ದೊರೆತಂತಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *