ಜಿಬಿಎ ಚುನಾವಣೆಗೆ ಭರ್ಜರಿ ಸಿದ್ಧತೆ – 369 ಕ್ಷೇತಕ್ಕೆ 900 ಕಾಂಗ್ರೆಸ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

2 Min Read

ಬೆಂಗಳೂರು: ಒಂದು ಕಡೆ ಮತದಾರರ ಪಟ್ಟಿ ಲೋಪದೋಷ ಪರಿಷ್ಕರಣೆಗೆ ಕಾಂಗ್ರೆಸ್ (Congress) ಒತ್ತಾಯ ಮಾಡುತ್ತಿದೆ. ಮತ್ತೊಂದು ಕಡೆ ಜಿಬಿಎ ಚುನಾವಣೆಗೆ  (GBA Election) ಕಾಂಗ್ರೆಸ್‌ನಲ್ಲಿ ದಾಖಲೆ ಅರ್ಜಿ ಸಲ್ಲಿಕೆ ಆಗಿದೆ. ಅರ್ಜಿ ಸಲ್ಲಿಕೆಗೆ ಇದ್ದ ಸಮಯ ಕೂಡ ಮುಕ್ತಾಯ ಆಗಿದೆ.

ಜೂನ್ 30ರ ಒಳಗಡೆ ಜಿಬಿಎ ಚುನಾವಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶ ಮಾಡಿದೆ. ಸಹಜವಾಗಿ ಈಗ ಆಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದೆ. ಈಗಾಗಲೇ ಎಲ್ಲಾ ಪಕ್ಷಗಳು ಜಿಬಿಎ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್‌ನಲ್ಲಂತೂ ಜಿಬಿಎ ಚುನಾವಣೆಗೆ ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದ್ದು ನೂರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಿಜೆಪಿ ವಿರುದ್ಧ 40% ಕಮೀಷನ್‌ ಜಾಹೀರಾತು – ರಾಹುಲ್‌ಗೆ ರಿಲೀಫ್‌, ವಿಚಾರಣೆಯೇ ರದ್ದು

369 ವಾರ್ಡ್‌ಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಏರಿಕೆ ಆಗುತ್ತಿದೆ. 1,600 ಮಂದಿ ಅರ್ಜಿಯನ್ನ ಸ್ವೀಕಾರ ಮಾಡಿದ್ದಾರೆ. 1,600 ಮಂದಿಯಲ್ಲಿ 369 ವಾರ್ಡ್‌ಗೆ 900 ಆಕಾಂಕ್ಷಿಗಳು ಚುನಾವಣೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಟಿಕೆಟ್ ಹಂಚಿಕೆ ವೇಳೆ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: 16.8 ಲಕ್ಷ ಮೌಲ್ಯದ 120 ಗ್ರಾಂ ಚಿನ್ನದ ಗಟ್ಟಿ ಕಳ್ಳತನ – ಇಬ್ಬರು ಅರೆಸ್ಟ್

ಇನ್ನೂ ಅರ್ಜಿ ಸಲ್ಲಿಕೆ ಒಂದು ಕಡೆ ರಾಜ್ಯ ಕಾಂಗ್ರೆಸ್ ಮತದಾರರ ಪಟ್ಟಿಯಲ್ಲಿ ಇರುವ ಲೋಪದೋಷಗಳನ್ನ ಸರಿಪಡಿಸಿ ಅಂತಾ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಚುನಾವಣಾ ಆಯೋಗಕ್ಕೆ ಭೇಟಿ ಕೊಟ್ಟು ಲೋಪದೋಷ ಸರಿಪಡಿಸಿ ಅಂದಿದ್ದಾರೆ. ಪ್ರಮುಖವಾಗಿ ಒಂದೇ ಕುಟುಂಬದವರು ಬೇರೆ ಬೇರೆ ವಾರ್ಡ್‌ಗಳಲ್ಲಿ ಮತದಾನ ಮಾಡುವ ರೀತಿ ಮತದಾರರ ಪಟ್ಟಿ ಇದೆ, ಇದು ಮತಗಳು ವಿಭಜನೆ ಆಗುತ್ತದೆ. ಒಂದೇ ಕುಟುಂಬದ ಮತದಾನ ಚದುರುವಿಕೆ ಮಾಡಿದ ಬಿಎಲ್‌ಓಗಳನ್ನ ಅಮಾನತು ಮಾಡೋದಕ್ಕೂ ಮನವಿ ಮಾಡಿದೆ. ಈ ರೀತಿ ಲೋಪದೋಷಗಳು ಇದ್ದರೆ ಸರಿಪಡಿಸುವುದಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೈಕ್ ಗ್ಯಾರೇಜ್‌ಗೆ ಬೆಂಕಿ- 8ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಭಸ್ಮ

ಒಟ್ನಲ್ಲಿ ಒಂದು ಕಡೆ ಮತದಾರರ ಪಟ್ಟಿ ಲೋಪದೋಷಗಳ ಆತಂಕ, ಮತ್ತೊಂದು ಕಡೆ ಕಾಂಗ್ರೆಸ್‌ನಲ್ಲಿ ಜಿಬಿಎ ಎಲೆಕ್ಷನ್ ಟಿಕೆಟ್‌ಗಾಗಿ ಪೈಪೋಟಿ ಈ ಬಾರಿಯ ಜಿಬಿಎ ಎಲೆಕ್ಷನ್ ಕಾಳಗ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಪಿಲ್, ಸುನಿಲ್ ಗವಾಸ್ಕರ್ ಸೇರಿ 14 ಕ್ರಿಕೆಟ್ ದಿಗ್ಗಜರಿಂದ ಪಾಕ್‌ಗೆ ಪತ್ರ – ಇಮ್ರಾನ್‌ಗೆ ವೈದ್ಯಕೀಯ ಸೇವೆ ನೀಡುವಂತೆ ಮನವಿ

Share This Article