ರಾಜ್ಯದಲ್ಲೂ ಬಿಹಾರ ಮಾಡೆಲ್‌ – ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಿದ್ಧತೆ

Public TV
2 Min Read

ಬೆಂಗಳೂರು: ಬಿಹಾರದ (Bihar) ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯಲಿದೆ. ಅದರಂತೆ ರಾಜ್ಯದ ಎಲ್ಲ ಮತದಾರರು ಎಸ್‌ಐಆರ್‌ಗೆ ಒಳಪಡಲಿದ್ದಾರೆ ಎಂದು ತಿಳಿಸಲಾಗಿದೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗ (Karnataka Election Commission) ಮಾಹಿತಿ ನೀಡಿದ್ದು, ಕೇಂದ್ರ ಚುನಾವಣಾ ಆಯೋಗದಿಂದ ನೋಟಿಫಿಕೇಷನ್ ಜಾರಿಯಾದ ತಕ್ಷಣ ರಾಜ್ಯದ ಎಲ್ಲಾ ಮತದಾರರು ʻಸರ್‌ʼ ಅಭಿಯಾನಕ್ಕೆ ಒಳಪಡಲಿದ್ದಾರೆ.

ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿ (Voter List), ಮತಗಟ್ಟೆಗಳು ಬದಲಾಗಲಿವೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶ‌ನದಂತೆ ರಾಜ್ಯದಲ್ಲಿ ಎಸ್ ಐಆರ್‌ಗೆ ಸಿದ್ಧತೆ ಮಾಡಿಕೊಳ್ತಿರೋ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಪೂರ್ಣಗೊಂಡಿದೆ. ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ಸೆಪ್ಟೆಂಬರ್ 25ರ ಒಳಗಡೆ ಪೂರ್ಣ ಆಗಲಿದೆ. 2025ರಲ್ಲಿ 5.40 ಕೋಟಿ ಮತದಾರರು ಮತದಾರರ ಪಟ್ಟಿಯಲ್ಲಿ ಇದ್ದಾರೆ. 2002 ರಲ್ಲಿ 3.40 ಕೋಟಿ ಮತದಾರರ ಪಟ್ಟಿಯಲ್ಲಿ ಇದ್ದವರು. 2002ರಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆಗಿದ್ರೆ ಡಿಜಿಟಲ್ ಸ್ವರೂಪಕ್ಕೆ ತಂದಿಲ್ಲ. ಪ್ರಸ್ತುತ ʻಸರ್‌ʼ ಅಡಿ ಆದ್ರೆ ಡಿಜಿಟಲ್ ಸ್ವರೂಪಕ್ಕೆ ತರಲಿದ್ದೇವೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಮಾಹಿತಿ ನೀಡಿದ್ದಾರೆ.‌

ನೋಟಿಫಿಕೇಷನ್ ಆದ ತಕ್ಷಣವೇ ʻಸರ್‌ʼ
ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆ ಬಂದ ಬಳಿಕ ಎಸ್‌ಐಆರ್ ಪ್ರಕ್ರಿಯೆ ಶುರುವಾಗಲಿದೆ. ಇದನ್ನೂ ಓದಿ: ಸಾಫ್ಟ್‌ವೇರ್‌ ಬಳಸಿ ಆಳಂದದಲ್ಲಿ 6018 ಮತದಾರರು ಡಿಲೀಟ್: ರಾಹುಲ್‌ ಗಾಂಧಿ ಬಾಂಬ್‌

ಎಸ್‌ಐಆರ್ ಪ್ರಕ್ರಿಯೆ ಯಾಕೆ ?
ನಕಲಿ ಮತದಾನ ತಡೆಗಟ್ಟುವುದಕ್ಕೆ ಹಾಗೂ ಯಾರೊಬ್ಬರೂ ಮತದಾನ ಹಕ್ಕಿನಿಂದ ವಂಚಿತರಾಗಬಾರದು ಅನ್ನೋ ಉದ್ದೇಶದಿಂದ ಸರ್‌ ಅಭಿಯಾನ ನಡೆಸಲಾಗುತ್ತಿದೆ. ಬೂತ್ ಮಟ್ಟದಲ್ಲಿ, ಶಿಬಿರಗಳನ್ನ ಆಯೋಜನೆ ಮಾಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ನಡೆಯಲಿದೆ. ಇದನ್ನೂ ಓದಿ: ರಾಹುಲ್‌ ಆರೋಪಿಸಿದಂತೆ ಆನ್‌ಲೈನಿನಲ್ಲಿ ಮತ ಅಳಿಸಲು ಸಾಧ್ಯವಿಲ್ಲ: ಚುನಾವಣಾ ಆಯೋಗ

ಎಸ್‌ಐಆರ್ ಪ್ರಕ್ರಿಯೆ ಹೇಗಿರಲಿದೆ?
1. ಬಿಎಲ್‌ಓಗಳು ಮನೆ ಮನೆಗೆ ಭೇಟಿ ಕೊಡ್ತಾರೆ.
2. ಕ್ಯೂಆರ್‌ ಕೋಡ್ ಮಾದರಿಯ ಆಧಾರಿತ ಅರ್ಜಿ 2 ಪ್ರತಿಯಲ್ಲಿ ಮಾಹಿತಿ ಸಂಗ್ರಹ.
3. ಅಧಿಕಾರಿ ಸಹಿ ಮಾಡಿದ ಒಂದು ಪ್ರತಿ ಮತದಾರರಿಗೆ ಸಲ್ಲಿಕೆ.
4. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಮೂರು ಭಾರಿ ಮನೆಗೆ ಭೇಟಿ ನೀಡಲಿದ್ದಾರೆ.
5. ಸಂಪರ್ಕಕ್ಕಾಗಿ ‌ಪಕ್ಕದ ಮನೆಯವರ ಸಹಾಯ ಪಡೆಯಲಿದ್ದಾರೆ.

ಮತದಾರರು ಏನು ಮಾಡಬೇಕು ?
1. ಗುರುತಿನ ಚೀಟಿಯಲ್ಲಿ ಪೋಟೋ ಸರಿ ಇಲ್ಲದಿದ್ದರೆ ಸ್ಪಷ್ಟವಾದ ಫೋಟೋ ನೀಡಬೇಕು
2. ಚುನಾವಣಾ ಆಯೋಗ ಕೇಳುವ ದಾಖಲೆಗಳನ್ನ ನೀಡಬೇಕು
3. ಮನೆಯಲ್ಲಿ ಲಭ್ಯವಿಲ್ಲದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

ʻಸರ್‌ʼ ಅಭಿಯಾನ ವೇಳೆ ಚುನಾವಣಾ ಆಯೋಗ ಕೈಗೊಳ್ಳುವ ಕ್ರಮಗಳೇನು?
1. ಎರಡು ಕಡೆ ಹೆಸರು ಇದ್ದರೆ ಫೋಟೊ ಸ್ಕ್ಯಾನಿಂಗ್‌ ಸಿಸ್ಟಮ್‌ ಮೂಲಕ ಪತ್ತೆ ಹಚ್ಚಿ ಕ್ರಮ
2. ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲು
3. ಪರಿಷ್ಕರಣೆ ನಂತರವೂ ಹೆಸರು ಸೇರದಿದ್ದರೆ ಬಿಎಲ್‌ಒಗಳು ಸಹಿ ಮಾಡಿ ನೀಡಿರುವ ನಮೂನೆ ಮೂಲಕ ಪ್ರಶ್ನಿಸಬಹುದು

ಪಕ್ಷಗಳ ಸಂಬಂಧ
1. ವಿಶೇಷ ಪರಿಷ್ಕರಣೆ ಕುರಿತು ಈಗಾಗಲೇ ರಾಜಕೀಯ ಪಕ್ಷಗಳ ಸಭೆ ನಡೆಸಿ, ವಿವರ ನೀಡಿಕೆ
2. ಪ್ರತಿ ಬೂತ್‌ಗೆ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ಪಕ್ಷಗಳ ಮುಖಂಡರಿಗೆ ಸೂಚನೆ. ಇದನ್ನೂ ಓದಿ: EC ಮೊಬೈಲ್‌ ಸಂಖ್ಯೆ, ಐಪಿ ವಿಳಾಸ ನೀಡಿದ್ರೂ ಕರ್ನಾಟಕದ ಸಿಐಡಿ ಏನು ಮಾಡುತ್ತಿದೆ: ಅನುರಾಗ್‌ ಠಾಕೂರ್‌ ಪ್ರಶ್ನೆ

Share This Article