ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) 79ನೇ ಸ್ವಾತಂತ್ರ‍್ಯೋತ್ಸವ (Independence Day) ಆಚರಣೆಗೆ ಸಿದ್ಧಗೊಳ್ಳತ್ತಿದ್ದು, ಮಾಣಿಕ್ ಷಾ ಮೈದಾನ ಸಜ್ಜುಗೊಂಡಿದೆ. ಇದೇ ಮೊದಲ ಬಾರಿಗೆ ಮಾಣಿಕ್ ಷಾ ಪರೇಡ್ ವೀಕ್ಷಣೆಗೆ ಸಿಲಿಕಾನ್ ಸಿಟಿ ಜನರಿಗೆ ಸುವರ್ಣಾವಕಾಶ ಸಿಗುತ್ತಿದೆ.
ಈ ಬಾರಿಯ ರಾಜ್ಯಮಟ್ಟದ ಸ್ವಾತಂತ್ರ‍್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮಾಣಿಕ್ ಷಾ ಮೈದಾನ (Manekshaw Parade Ground) ಸಜ್ಜುಗೊಂಡಿದೆ. ಬಿಬಿಎಂಪಿ, ಬೆಂಗಳೂರು ಪೋಲಿಸ್ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಡಿದ್ದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವರ್ಷ ಅಂದಾಜು ಎಂಟು ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಆ.14ರಿಂದ ವೈದ್ಯಕೀಯ ಪ್ರವೇಶ ಆರಂಭ- ಕೆಇಎ
ಈ ಕುರಿತು ಇಂದು ಮಾಣಿಕ್ ಷಾ ಗ್ರೌಂಡ್‌ನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ, ಮಹೇಶ್ವರ್ ರಾವ್, ಪೋಲಿಸ್ ಕಮೀಷನರ್ ಸೀಮಂತ್ ಕುಮಾರ್ ಹಾಗೂ ಬೆಂಗಳೂರು ನಗರ ಡಿಸಿ ಜಗದೀಶ್ ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಬಿಬಿಎಂಪಿ ಕಮೀಷನರ್ ಮಹೇಶ್ವರ್ ರಾವ್, ಮಳೆ ಬಂದರೆ ತೊಂದರೆಯಾಗದಂತೆ ಶಾಮಿಯಾನ, ವೇದಿಕೆಯ ನಿರ್ಮಾಣ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರ‍್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು. ಈ ವರ್ಷ ಪ್ರಪ್ರಥಮ ಬಾರಿಗೆ ಎರಡು ಸಾವಿರ ಜನರಿಗೆ ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ. ಈ ಪಾಸ್ ಅನ್ನು ಸೇವಾಸಿಂಧು ಪೋರ್ಟಲ್ ಮೂಲಕ ಪಡೆದು, ಗೇಟ್ ನಂಬರ್ 5ರ ಮೂಲಕ ಎಂಟ್ರಿ ಕೊಡಬಹುದು ಎಂದರು. ಇದನ್ನೂ ಓದಿ: ಯುಪಿ| ಅಂಗವಿಕಲ ಮಹಿಳೆ ಮೇಲೆ ಗ್ಯಾಂಗ್ ರೇಪ್; 24 ಗಂಟೆಯೊಳಗೆ ಆರೋಪಿಗಳ ಕಾಲಿಗೆ ಗುಂಡೇಟು
ಇನ್ನೂ ಬೆಂಗಳೂರು ನಗರ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಮಾತನಾಡಿ, ಸಿಟಿ ಪೋಲಿಸ್ ವತಿಯಿಂದ ವಿಶೇಷವಾಗಿ ಸಿಸಿಟಿವಿ, ಡಾಗ್ ಸ್ವ್ಕಾಡ್ ಸೇರಿದಂತೆ ಎಲ್ಲಾ ಸೆಕ್ಟರ್‌ನಿಂದಲೂ ಬಿಗಿ ಬಂದೋಬಸ್ತ್ ಮಾಡಿದ್ದೇವೆ. ಪಾರ್ಕಿಂಗ್ ಜಾಗ ಕಡಿಮೆಯಿದೆ. ಜನರು ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸಿ. ಕೆಲವೊಂದು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇ-ಪಾಸ್ ತೆಗೆದುಕೊಂಡವರು ಬೆಳಗ್ಗೆ 8:30ರ ಒಳಗೆ ಎಂಟ್ರಿಯಾಗಬೇಕು. ತಡವಾಗಿ ಬರಬಾರದು. ಮೈದಾನದಲ್ಲಿ ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮೈದಾನದ ಸುತ್ತ ಭದ್ರತೆ ಮತ್ತು ಸುರಕ್ಷತೆಗಾಗಿ ಈಗಾಗಲೇ ಸಿಸಿ ಕ್ಯಾಮೆರಾ ವ್ಯವಸ್ಥೆಯಿದ್ದು, ಈ ಸಮಾರಂಭಕ್ಕಾಗಿ 100 ಸಿಸಿಟಿವಿಗಳನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ ಸೇರಿದಂತೆ ವಿವಿಧ ಪೋಲಿಸ್ ಇಲಾಖೆಯ 35 ತುಕಡಿಗಳಲ್ಲಿ 1,150 ಮಂದಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್
ವಾಹನ ನಿಲುಗಡೆ ನಿಷೇಧಿಸಿರುವ ರಸ್ತೆಗಳು:
* ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ.
* ಕಬ್ಬನ್ ರಸ್ತೆ, ಸಿ.ಟಿ.ಓ ವೃತ್ತದಿಂದ ಕೆ.ಆರ್.ರಸ್ತೆ & ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ.
* ಎಂ.ಜಿ.ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ.
ಇನ್ನೂ ಸಿಗರೇಟ್, ಬೆಂಕಿ ಪಟ್ಟಣ, ಕರಪತ್ರಗಳು, ಬಣ್ಣದ ದ್ರಾವಣ, ವೀಡಿಯೋ ಮತ್ತು ಸ್ಟಿಲ್ ಕ್ಯಾಮೆರಾಗಳು, ನೀರಿನ ಬಾಟಲ್‌ಗಳು ಹಾಗೂ ಕ್ಯಾನ್‌ಗಳು, ಶಸ್ತ್ರಾಸ್ತ್ರಗಳು ಹರಿತವಾದ ವಸ್ತು ಹಾಗೂ ಚಾಕು ಚೂರಿ, ಕಪ್ಪು ಕರವಸ್ತ್ರಗಳು, ತಿಂಡಿ ತಿನಿಸು ಮದ್ಯದ ಬಾಟಲ್/ ಮಾದಕ ವಸ್ತುಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ತರುವ ಹಾಗಿಲ್ಲ. ಇದನ್ನೂ ಓದಿ: ತೆಲಂಗಾಣ | ಬೇಕರಿಯಿಂದ ಖರೀದಿಸಿದ ಪಪ್ಸ್‌ನಲ್ಲಿ ಹಾವು ಪತ್ತೆ
ಇನ್ನೂ ಈ ಬಗ್ಗೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ಈ ಬಾರಿ ವಿಶೇಷವಾಗಿ ಸರ್ಕಾರದ ಪಂಚ ಗ್ಯಾರಂಟಿ ಬಗ್ಗೆ ಪ್ರದರ್ಶನವನ್ನು ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ. ಪೋಲಿಸ್ ಬ್ಯಾಂಡ್‌ಗಳ ಪ್ರದರ್ಶನ ಸೇರಿದಂತೆ ಮೂರು ಕಾರ್ಯಕ್ರಮಗಳು ಇರಲಿವೆ. ಇ-ಪಾಸ್ ಅನ್ನು ಸೇವಾಸಿಂಧೂ ಪೋರ್ಟಲ್‌ನಲ್ಲಿ ಕೇವಲ 100 ಜನ ತೆಗೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತೆಗೆದುಕೊಳ್ಳಬೇಕು. ಉಳಿದ ಪಾಸ್‌ಗಳನ್ನು ಫಿಜಿಕಲ್ ಆಗಿ ಎಸಿ, ಡಿಜಿ ಆಫೀಸ್ ಮೂಲಕ ಪಡೆಯಬಹುದು ಎಂದರು. ಒಟ್ಟಿನಲ್ಲಿ ಈ ಬಾರಿಯ ಸ್ವಾತಂತ್ರ‍್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದ ಹೆಸರು ಹಾಳು ಮಾಡೋಕೆ ನೋಡಿದವರು ಯಾರು ಅಂತ ಗೊತ್ತಾಗ್ಬೇಕು: ಬೇಳೂರು ಗೋಪಾಲಕೃಷ್ಣ