ʻನೀವು ಮದ್ವೆ ಆಗ್ಲಿಲ್ಲ ಅಂತ ಮ್ಯಾಕ್ಸಿ ಚೆನ್ನಾಗಿ ಆಡ್ತಿಲ್ಲʼ – ಕಾಮೆಂಟ್‌ ಮಾಡಿದ ನೆಟ್ಟಿಗನಿಗೆ ಪ್ರೀತಿ ಝಿಂಟಾ ಕ್ಲಾಸ್‌

Public TV
2 Min Read

ಪಂಜಾಬ್ ಕಿಂಗ್ಸ್ (Punjab Kings) ತಂಡದ ಸಹ ಮಾಲೀಕರೂ ಆಗಿರುವ ಬಾಲಿವುಡ್ ನಟಿ ಪ್ರೀತಿ ಝಿಂಟಾ (Preity G Zinta) ವೈಯಕ್ತಿಕ ಬದುಕಿನ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.

ಪ್ರೀತಿ ಝಿಂಟಾ ತಮ್ಮ ಎಕ್ಸ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಸೆಷನ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಪಂಜಾಬ್‌ ಕಿಂಗ್ಸ್‌ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಬಗ್ಗೆ ಮಾಡಿದ ಕಾಮೆಂಟ್ ಸಂಚಲನ ಸೃಷ್ಟಿಸಿದೆ. ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಯಿಂದ ಬೇಸರಗೊಂಡ ನಟಿ ಎಕ್ಸ್‌ ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್ ಬಣ್ಣದ ಬದುಕಿಗೆ 12 ವರ್ಷ- ಶುಭಕೋರಿದ ದರ್ಶನ್

ಪ್ರಶ್ನೆ ಕೇಳುವ ಸೆಷನ್‌ ವೇಳೆ ನೆಟ್ಟಿಗರೊಬ್ಬರು, ʻಸತತ ಕಳಪೆ ಪ್ರದರ್ಶನದಿಂದಾಗಿ ಪ್ರೀತಿ, ಮ್ಯಾಕ್ಸ್‌ವೆಲ್‌ರನ್ನ ಮದುವೆಯಾಗುತ್ತಿಲ್ಲʼ ಎಂದು ಕಾಲೆಳೆದಿದ್ದರು. ಮತ್ತೊಬ್ಬರು ʻಮೇಡಂ ನೀವು ಮ್ಯಾಕ್ಸ್‌ವೆಲ್‌ ಅವರನ್ನ ಮದುವೆಯಾಗ್ಲಿಲ್ಲ (Marriage), ಅದಕ್ಕಾಗಿ ಅವರು ನಿಮ್ಮ ತಂಡದಲ್ಲಿ ಚೆನ್ನಾಗಿ ಆಡ್ತಿಲ್ಲʼ ಎಂದು ಕಾಮೆಂಟ್‌ ಮಾಡಿದ್ದರು. ಇದರಿಂದ ಕೆರಳಿದ ನೆಟ್ಟಿಗರನ್ನ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ತಮಿಳಿನತ್ತ ಕೋಮಲ್- ರಗಡ್ ಲುಕ್‌ನಲ್ಲಿ ಕನ್ನಡದ ನಟ

ʻನೀವು ಎಲ್ಲಾ ಫ್ರಾಂಚೈಸಿಗಳ ಮಾಲೀಕರಿಗೂ ಇದೇ ರೀತಿ ಕೇಳ್ತೀರಾ? ಅಥವಾ ಮಹಿಳೆಯರಿಗೆ ಮಾತ್ರ ಮಾಡುತ್ತಿರುವ ತಾರತಮ್ಯವಾ? ನಾನು ಕ್ರಿಕೆಟ್‌ ಫ್ರಾಂಚೈಸಿಗೆ ಬರುವವರೆಗೂ ಕಾರ್ಪೋರೇಟ್‌ ವ್ಯವಸ್ಥೆಗಳಲ್ಲಿ ಮಹಿಳೆಯರು ಬದುಕುವುದು ಎಷ್ಟು ಕಷ್ಟ ಅಂತ ಗೊತ್ತಿರಲಿಲ್ಲ. ನೀವು ಹಾಸ್ಯದಿಂದ ಈ ಪ್ರಶ್ನೆ ಕೇಳಿದ್ದೀರಿ ಅಂದುಕೊಳ್ತೀನಿ.. ಆದ್ರೆ, ಒಮ್ಮೆ ಅದನ್ನ ನೀವೇ ನೋಡಿ, ಏನು ಕೇಳ್ತಾ ಇದ್ದೀರಿ ಅನ್ನೋದು ಅರ್ಥವಾಗುತ್ತೆ, ಇದೆಲ್ಲ ಒಳ್ಳೆಯದಲ್ಲ. ಕಳೆದ 18 ವರ್ಷಗಳಿಂದಲೂ ಬಹಳ ಕಷ್ಟಪಟ್ಟು ಒಂದೊಂದೇ ಹಂತಗಳನ್ನು ದಾಟಿ ಇಲ್ಲಿಗೆ ಬಂದಿದ್ದೇನೆ. ಈ ರೀತಿ ತಾರತಮ್ಯ ಮಾಡುವುದು ಹಾಗೂ ಅಗೌರವ ತೋರಿಸುವ ಹೇಳಿಕೆ ನೀಡೋದನ್ನ ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

Preity Zinta

ಮದುವೆ ಬಳಿಕ ವಿದೇಶದಲ್ಲಿ ನೆಲೆಸಿರುವ ಪ್ರೀತಿ ಝಿಂಟಾ ಐಪಿಎಲ್ ಸಂದರ್ಭದಲ್ಲಿ ಮಾತ್ರ ಭಾರತದಲ್ಲಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸೆಲ್ಫಿ- ಡೇಟಿಂಗ್ ಬಗ್ಗೆ ಹಿಂಟ್ ಕೊಟ್ರಾ ಈ ಜೋಡಿ?

2012ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಪದಾರ್ಪಣೆ ಮಾಡಿದ ಆಸ್ಟ್ರೇಲಿಯಾ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈವರೆಗೆ ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ, ಪಂಜಾಬ್‌ ಕಿಂಗ್ಸ್‌ ತಂಡಗಳಲ್ಲಿ ಆಡಿದ್ದಾರೆ. 2013 ರಿಂದ 2016ರ ಆವೃತ್ತಿಯಲ್ಲಿ ಮ್ಯಾಕ್ಸಿ ಪಂಜಾಬ್‌ ಕಿಂಗ್ಸ್‌ ಪರ ಭರ್ಜರಿ ಪ್ರದರ್ಶನ ನೀಡಿದ್ದರು. ಆದ್ರೆ 2017ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಫ್ರಾಂಚೈಸಿ ಅವರನ್ನು ಕೈಬಿಟ್ಟಿತ್ತು. 2021ರಿಂದ ಆರ್‌ಸಿಬಿ ಪರ ಆಡ್ತಿದ್ದ ಮ್ಯಾಕ್ಸ್‌ವೆಲ್‌ ಅವರ ಅದ್ಭುತ ಪ್ರದರ್ಶನ ಕಂಡು ಪಂಜಾಬ್‌ 2025ರ ಆವೃತ್ತಿಗೆ ಮತ್ತೆ ಅವರನ್ನ ಖರೀದಿ ಮಾಡಿತ್ತು. ಇದೀಗ ಈ ಆವೃತ್ತಿಯಲ್ಲಿ ಅವರ ಕಳಪೆ ಪ್ರದರ್ಶನದಿಂದ ಫ್ರಾಂಚೈಸಿ ಪ್ಲೇಯಿಂಗ್‌ -11 ನಿಂದಲೇ ಕೈಬಿಟ್ಟಿದೆ.

Share This Article