ಗರ್ಭಿಣಿಯಾಗುವ ಆಸೆಗೆ ಶಿಶುವಿನ ಹೊಕ್ಕಳ ಬಳ್ಳಿ ಸೇವಿಸಿದ ಯುವತಿ

Public TV
1 Min Read
PREGNANT 1

ಅಮರಾವತಿ: ಗರ್ಭಿಣಿಯಾಗಲು ಬಯಸಿದ್ದ ಯುವತಿ ಹಸುಗುಸಿನ ಹೊಕ್ಕಳ ಬಳ್ಳಿ ಸೇವಿಸಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾದೆಂಡ್ಲದ ತುಬಡು ಗ್ರಾಮದಲ್ಲಿ ನಡೆದಿದೆ.

pregnancy 1

19 ವರ್ಷದ ಯುವತಿ ಮೃತಳಾಗಿದ್ದಾಳೆ. ಈಕೆ ದಾಚೆಪಲ್ಲಿ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ತುಬಡು ಗ್ರಾಮದ ರವಿ ಜೊತೆಗೆ ಮೂರು ವರ್ಷದ ಹಿಂದೆ ಮದುವೆಯಾಗಿದ್ದಳು. ಗರ್ಭಿಣಿಯಾಗಲು ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದಳು. ಇದಕ್ಕಾಗಿ ನಾಟಿ ಔಷಧಗಳನ್ನೆಲ್ಲಾ ಪಡೆದಿದ್ದರು. ಗರ್ಭಿಣಿಯಾಗಲು ಹೊಕ್ಕಳ ಬಳ್ಳಿ ಸೇವಿಸಿ ಆಕೆ ಸಾವನ್ನಪ್ಪಿರುವುದಾಗಿ ಕೆಲ ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ:  ಈ ಬದುಕು ಶಾಶ್ವತವಲ್ಲ, ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ: ಸಿಎಂ ಭಾವುಕ

PREGNANT

ಆಕೆ ನವಜಾತ ಶಿಶುವಿನ ಹೊಕ್ಕಳ ಬಳ್ಳಿಯನ್ನು ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದು, ಕೂಡಲೇ ನರಸರಾವ್ ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಆಕೆ ತಾಯಿ ನಾಂದೆಡ್ಲದ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನರಸರಾವ್ ಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ನಂತರ ಕ್ರಮ ಕೈಗೊಳ್ಳುವುದಾಗಿ ನಾಂದೆಡ್ಲದ ಸಿಐ ಸತೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

PREGNANT

ಸ್ತ್ರಿ ರೋಗ ತಜ್ಞೆ ಡಾ. ಕವಿತಾ ಈ ಕುರಿತಾಗಿ ಮಾತನಾಡಿ, ಗರ್ಭಿಣಿಯಾಗಲು ಹೊಕ್ಕಳು ಬಳ್ಳಿ ಸೇವನೆ ಅವೈಜ್ಞಾನಿಕ. ಈ ಕುರಿತಾಗಿ ಮಹಿಳೆಯರಲ್ಲಿ ಅರಿವಿನ ಕೊರತೆಯಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತಿವೆ. ನಂಬಿಕೆ ಮತ್ತು ಮೂಢನಂಬಿಕೆ ಪದ್ಧತಿಗಳಲ್ಲಿ ನಂಬಿಕೆ ಅವೈಜ್ಞಾನಿಕವಾಗಿದೆ ಎಂದಿದ್ದಾರೆ.

Share This Article