ಕಾಂಗ್ರೆಸ್‍ಗೆ ಅರ್ಜಿ ಹಾಕಿರೋದನ್ನ ತೋರಿಸಿದ್ರೆ ಮನೆ ಮುಂದೆ ವಾಚ್‍ಮನ್ ಕೆಲಸ ಮಾಡ್ತೇನೆ: ಪ್ರೀತಂಗೌಡ

Public TV
1 Min Read

ಹಾಸನ: ನಾನು ಕಾಂಗ್ರೆಸ್‍ಗೆ ಅರ್ಜಿ ಹಾಕಿರುವುದನ್ನು ತೋರಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ. ಅಷ್ಟೇ ಅಲ್ಲದೇ ನನ್ನ ಮೇಲೆ ಆರೋಪ ಮಾಡಿರುವವರ ಮನೆ ಮುಂದೆ ವಾಚ್‍ಮನ್ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಶಾಸಕ ಪ್ರೀತಂಗೌಡ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್ ಅವರು, ಹಾಸನದಿಂದ ಪ್ರೀತಂಗೌಡ ಹೆಸರಿನಲ್ಲಿ ಕಾಂಗ್ರೆಸ್ ಸೇರಲು ಅರ್ಜಿ ಬಂದಿದೆ. ಅದು ಶಾಸಕ ಪ್ರೀತಂಗೌಡ ಅವರೇ ಇರಬಹುದು ಎಂಬ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಪ್ರೀತಂಗೌಡ ಅವರು, ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತೇನೆ ಅಂತ ಯೋಚನೆ ಮಾಡಿದ್ದರೆ, ಅಂದೇ ನನ್ನ ರಾಜಕಾರಣದ ಅಂತಿಮ ದಿನ ಆಗಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್

ಮಹೇಶ್ ಜೆಡಿಎಸ್ ಪಕ್ಷದ ಏಜೆಂಟ್ ಆಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ. ನಾನು ಕಾಂಗ್ರೆಸ್‍ಗೆ ಅರ್ಜಿ ಹಾಕಿರುವುದನ್ನು ತೋರಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಆಗುತ್ತೇನೆ. ಅವರು ಕೆಲಸ ಕೊಡದಿದ್ದರೂ ಅವರ ಮನೆಯಲ್ಲಿ ವಾಚ್‍ಮೆನ್ ಆಗಿ ಕೆಲಸ ಮಾಡುತ್ತೇನೆ. ಇಲ್ಲವಾದಲ್ಲಿ ನಾನು ಆಗಾಗ ಬೊಗಳೆ ಬಿಡುತ್ತಿರುತ್ತೇನೆ. ನಾನು ಹೀಗೆ ಅಬ್ಬೇಪಾರಿ ತರಾ ಮಾತನಾಡುತ್ತಿರುತ್ತೇನೆ ಎಂದು ಮಹೇಶ್ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಅವರು ಬೆಳಗ್ಗೆ ವಾಕಿಂಗ್ ಮಾಡಬೇಕಾದರೆ ಹೊಳೆನರಸೀಪುರದಿಂದ ಫೋನ್ ಮಾಡಿ ಇವತ್ತಿನ ಚಟುವಟಿಕೆ ಏನು ಮಾಡಬೇಕು ಅಂಥಾ ಹೇಳುತ್ತಾರೆ. ಹೊಳೆನರಸೀಪುರದವರು ನೀಡುವ ಸಲಹೆ ಪ್ರಕಾರ, ಕಾಂಗ್ರೆಸ್‍ನಲ್ಲಿರುವ ಅವರು ಒಬ್ಬ ಜೆಡಿಎಸ್ ಏಜೆಂಟ್ ರೀತಿ ನಡೆದುಕೊಳ್ಳುತ್ತಾರೆ. ಅವರು ಜೆಡಿಎಸ್‍ಗೆ ಅರ್ಜಿ ಹಾಕಿಕೊಂಡಿರಬಹುದು. ನಾನು ಯಾವ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಯಾಗದೇ ಸಾಮಾನ್ಯ ಜನರ ವಿಶ್ವಾಸಗಳಿಸಿ ಶಾಸಕನಾದೆ. ಈ ತರಾ ಸುಳ್ಳು ಹೇಳುತ್ತಾರೆ ಅಂಥ ಅವರಿಗೆ ನಗರಸಭೆ ಸದಸ್ಯನಿಂದ ಮುಂದೆ ಹೋಗಲ್ಲ ಜನ ಬಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೈ ನಾಯಕರಿಗೊಂದು ಉದ್ಯೋಗ ಬೇಕಿದೆ, ಅದಕ್ಕೆ ಇಲ್ಲಸಲ್ಲದ ಮಾತುಗಳನ್ನಾಡ್ತಿದ್ದಾರೆ: ಮುನಿರತ್ನ

Share This Article
Leave a Comment

Leave a Reply

Your email address will not be published. Required fields are marked *