– ಹಿಂದೂರಾಷ್ಟ್ರ ಕಟ್ಟಲು ಹೊರಟ ಬಿಜೆಪಿಯವರು ಮುತಾಲಿಕ್ ಗೆ ಬ್ಯಾನ್ ಮಾಡ್ತಾರೆ
– ತೇಜಸ್ವಿ ಸೂರ್ಯ ಯಾಕೆ ಪ್ರವೀಣ್ ಮನೆಗೆ ಬರ್ಬೇಕು..?
ಮಂಗಳೂರು: ವಿಶ್ವಗುರು ಅಲ್ಲ, ವಿಶ್ವನಾಶ ಆಗುತ್ತೆ, ಇಡೀ ಬಿಜೆಪಿ ಪಕ್ಷ ಹಾಳಾಗಿ ಹೋಗುತ್ತೆ, ಅಣ್ಣಪ್ಪನ ಶಾಪ ಇದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ತಿಮರೋಡಿ ಮಹೇಶ್ ಶೆಟ್ಟಿ ಕಿಡಿಕಾರಿದ್ದಾರೆ.
ಇಂದು ಮೃತ ಪ್ರವೀಣ್ ಕುಮಾರ್ ನೆಟ್ಟಾರು ಮನೆಗೆ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆ ಮಾಮೂಲಿ ಅಗಿದೆ, ಚುನಾವಣೆಗೆ ಎಂಟು ತಿಂಗಳು ಇದೆ. ವೋಟ್ ಹಾಕ್ಬೇಕಲ್ಲ ಅದಕ್ಕಂತಲೇ ಕೊಲೆ ಆಗುತ್ತದೆ. ಇದುವೇ ಕರಾವಳಿಯ ವೋಟ್ ಬ್ಯಾಂಕ್ ರಾಜಕೀಯ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ NIA ಹೆಗಲಿಗೆ
ನಮ್ಮನ್ನು ಒಡೆದು ಹಾಳುಮಾಡಿ ಆಡಳಿತ ಮಾಡ್ತಾರೆ. ಈ ಕೊಲೆಯಿಂದ ರಾಜಕೀಯದವರ ನಾಟಕ ಬಯಲಾಯ್ತು. ಯುವಕರು ಈ ಹೋರಾಟ ನಿಲ್ಲಿಸಬೇಡಿ, ರಾಜಕಾರಣಿಗಳಿಗೆ ಚಪ್ಪಲಿಯಲ್ಲಿ ಹೊಡೀರಿ. ಇವರನ್ನು ಮನೆ ಒಳಗೆ ಬಿಡಬೇಡಿ. ಅಮಾಯಕರು ಬಲಿಯಾಗ್ತಿದ್ದಾರೆ. ಹಿಜಬ್ ಪ್ರಾರಂಭದಲ್ಲೇ ಹೇಳಿದ್ದೆ ಮರ್ಡರ್ ಆಗುತ್ತೆ ಅಂತ. ಹರ್ಷ ಕೊಲೆ ಆಯ್ತು, ಅರೋಪಿಗಳು ಬಿರಿಯಾನಿ ತಿಂತಾರೆ. ಹರ್ಷ ಮನೆ ಹೆಣ್ಣುಮಕ್ಕಳು ಹೋಂ ಮಿನಿಸ್ಟರ್ ಹತ್ರ ಹೋದ್ರೆ ಹೊರಗೆ ಹಾಕ್ತಾರೆ ಎಂದು ಗರಂ ಆದರು.
ಮಸೂದ್ ಹತ್ಯೆ ಗಾಂಜಾ ವಹಿವಾಟಿನಿಂದ ಆಗಿದೆ. ಪೊಲೀಸರ ತಪ್ಪಿಲ್ಲ, ರಾಜ್ಯ ಸರ್ಕಾರ ಸತ್ತು ಹೋಗಿದೆ. ಇದು ಚೌ ಚೌ ಸರ್ಕಾರ. ಪ್ರತೀಕಾರದ ಹತ್ಯೆ ಮಾಡಿದ್ರೆ ಎಚ್ಚರ. ನಾವು ಹಿಂದೂಗಳು 80% ಇದ್ದೇವೆ. ಸೌಜನ್ಯ ಹತ್ಯೆ ಪ್ರಕರಣವನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕಿದೆ. ಸೌಜನ್ಯಗೂ ನ್ಯಾಯ ಸಿಗಲಿಲ್ಲ, ಯಾರ ಬಳಿ ಕೇಳೋದು..? ಹಿಂದೂರಾಷ್ಟ್ರ ಕಟ್ಟಲು ಹೊರಟ ಬಿಜೆಪಿಯವರು ಮುತಾಲಿಕ್ ಗೆ ಬ್ಯಾನ್ ಮಾಡ್ತಾರೆ. ಭಯೋತ್ಪಾದಕರು ರಾಜ್ಯಾದ್ಯಂತ ತಿರುಗಾಡ್ತಾರೆ, ಮುತಾಲಿಕ್ ನ್ನು ಬಂಧಿಸ್ತಾರೆ. ಏನು ದ್ರೋಹ ಮಾಡಿದ್ರು ಮುತಾಲಿಕ್ ಎಂದು ತಿಮರೋಡಿ ಪ್ರಶ್ನಿಸಿದರು.
ಒಂದು ಕೋಟಿ ಪರಿಹಾರ ಕೊಡಿ ಅಂದ್ರೆ, 50 ಪರ್ಸೆಂಟ್ ನುಂಗಿ 50 ಲಕ್ಷ ಪರಿಹಾರ ಕೊಡ್ತಾರೆ. ನಳಿನ್ ಕುಮಾರ್ ವಾಹನ ಅಡ್ಡಗಟ್ಟಿದ್ದಲ್ಲ ತಲೆ ಒಡೆಯಬೇಕಿತ್ತು. ಎಲ್ಲರಿಗೂ ಭದ್ರತೆ ಆಗಲ್ಲ ಎಂದಿರುವ ತೇಜಸ್ವಿ ಸೂರ್ಯ ಯಾಕೆ ಪ್ರವೀಣ್ ಮನೆಗೆ ಬರ್ಬೇಕು ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಬೆಳ್ಳಾರೆ, ಸುಬ್ರಹ್ಮಣ್ಯ ಠಾಣಾ ಎಸ್‍ಐಗಳ ಎತ್ತಂಗಡಿ