ನಾಲ್ವರ ಕೊಲೆ ಆರೋಪಿ ಪ್ರವೀಣ್ ಚೌಗುಲೆಗೆ ನ್ಯಾಯಾಂಗ ಬಂಧನ

By
1 Min Read

ಉಡುಪಿ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ವಿಚಾರಣೆ ಬಹುತೇಕ ಮುಕ್ತಾಯಗೊಂಡಂತಿದೆ. ಆರೋಪಿ ಪ್ರವೀಣ್ ಚೌಗುಲೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಡುಪಿಯ ಸಂತೆಕಟ್ಟೆ ನೇಜಾರು (Nejaru Family) ನೂರ್ ಮೊಹಮ್ಮದ್ ಕುಟುಂಬದ ನಾಲ್ವರ ಬರ್ಬರ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸರ ತನಿಖೆ ನಡೆಯುತ್ತಿದೆ. ಈ ನಡುವೆ ಆರೋಪಿ ಪ್ರವೀಣ್ ಚೌಗುಲೆ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಇಂದು ಕೋರ್ಟಿಗೆ ಆರೋಪಿಯನ್ನು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೀಪಾ ಮುಂದೆ ಮಲ್ಪೆ ಪೊಲೀಸರು ಹಾಜರುಗೊಳಿಸಿದರು. ಆರೋಪಿಗೆ ಡಿಸೆಂಬರ್ 5 ರ ವರೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಪ್ರವೀಣ್ ಚೌಗುಲೆಯನ್ನು (Praveen Chowgule) ಹಿರಿಯಡ್ಕ ಸಬ್ ಜೈಲ್ ಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ನಟ ವಿಜಯಕಾಂತ್ ಆರೋಗ್ಯದಲ್ಲಿ ಅಲ್ಪ ಚೇತರಿಕೆ: ಐಸಿಯುವಿನಲ್ಲೇ ಚಿಕಿತ್ಸೆ

Share This Article