ನಟ ಹುಚ್ಚ ವೆಂಕಟ್ ಮೇಲಿನ ಹಲ್ಲೆಗೆ ಪ್ರಥಮ್ ಹೀಗಂದ್ರು

Public TV
2 Min Read

ಬೆಂಗಳೂರು: ಸ್ಯಾಂಡಲ್ ವುಡ್ ಫೈರಿಂಗ್ ಸ್ಟಾರ್, ನಟ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆದಿರುವುದು ಅಕ್ಷಮ್ಯ ಅಪರಾಧ ಅಂತ ಬಿಗ್ ಬಾಸ್ ಸೀಸನ್-4ರ ವಿನ್ನರ್ ಪ್ರಥಮ್ ಹೇಳಿದ್ದಾರೆ.

ನಟ ವೆಂಕಟ್ ಮೇಲಿನ ಹಲ್ಲೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಥಮ್, ವೆಂಕಟ್ ಅಣ್ಣ ಅವರ ಮೇಲೆ ಹಲ್ಲೆ ನಡೆದಿರುವುದು ಖೇದಕರವಾಗಿದೆ. ಒಬ್ಬರ ಮೇಲೆ ಹಲ್ಲೆ ಮಾಡುವುದನ್ನು ಬಿಟ್ಟು ಯಾವುದು ಬೇಕಾದ್ರೂ ಕ್ಷಮೆಗೆ ಅರ್ಹ. ಹಲ್ಲೆ ಮಾಡುವ ವಿಚಾರವನ್ನು ನಾನು ಯಾವತ್ತೂ ವಿರೋಧಿಸುತ್ತೇನೆ ಅಂತ ಹೇಳಿದ್ರು.

ಬಿಗ್ ಬಾಸ್ ಮನೆಯಲ್ಲಿದ್ದಾಗ ಮನಸ್ತಾಪ ಮಾಡಿಕೊಂಡು ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ಆದ್ರೆ ಹೊರಗಡೆ ಪ್ರಪಂಚಕ್ಕೆ ಬಂದಾಗ ಸತ್ಯ ಹೇಳಿಕೊಳ್ಳಲು ಆಗದ ಸಂದರ್ಭದಲ್ಲಿ ಮಾತಾಡಲು ಆಗಲ್ಲ ಅಷ್ಟೆ ಅಂತ ಹೇಳಿದ್ರು.

ವೆಂಕಟ್ ಅವರು ತಾವಾಗಿ ತಾವೇ ಊಟ ಮುಗಿಸಿಕೊಂಡು ಹೋಗುತ್ತಿರೋ ಸಂದರ್ಭದಲ್ಲಿ ಹಲ್ಲೆ ಮಾಡಿರುವುದು ಸರಿಯಲ್ಲ. ಹೀಗಾಗಿ ಅವರು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆಯಿತ್ತರು.

ಮಾಧ್ಯಮಕ್ಕೆ ಬರೋ ಅವಶ್ಯಕತೆ ಇರಲಿಲ್ಲ: ವೆಂಕಟ್ ಅವರು ತನ್ನ ಮೇಲಿನ ಹಲ್ಲೆ ಕುರಿತು ಪೊಲೀಸ್ ಮೆಟ್ಟಿಲು ಹತ್ತಲ್ಲ ಅಂದ್ಮೇಲೆ ಮಾಧ್ಯಮದ ಮುಂದೆ ಬರುವ ಅವಶ್ಯಕತೆ ಇರಲಿಲ್ಲ ಅಂದ್ರು. ಇದಕ್ಕುತ್ತರಿಸಿದ ವೆಂಕಟ್, ನನ್ನ ಮೇಲೆ ಹಲ್ಲೆ ನಡೆದ್ರೆ ಕೆಲವೊಂದು ಬಾರಿ ನಾನು ಕೂಡ ಹಲ್ಲೆಗಳನ್ನು ಮಾಡುತ್ತೇನೆ. ಅಂತಹ ಸಂದರ್ಭಗಳಲ್ಲಿ ನಾನು ಸುಮ್ಮನಿರಲ್ಲ. ಹೀಗಾಗಿ ಕೇಸ್ ಹಾಕಲ್ಲ ಅಂದ್ರು.

ವೆಂಕಟ್ ಹೇಳಿಕೆಗೆ ಉತ್ತರಿಸಿದ ಪ್ರಥಮ್, ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬೇಡಿ. ದ್ವೇಷವಿದ್ದರೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ. ಅದು ಬಿಟ್ಟು ಹಲ್ಲೆ ಅನ್ನೋ ಲೆವೆಲ್ ಗೆ ದಯವಿಟ್ಟು ಹೋಗಬೇಡಿ. ಹೀಗಾಗಿ ಯಾರ ಮೇಲೂ ಹಲ್ಲೆಗೆ ಮುಂದಾಗಬೇಡಿ. ಏನಾದ್ರೂ ವಿಚಾರಗಳಿದ್ದರೆ ಕೂತು ಬಗೆಹರಿಸಿಕೊಳ್ಳಿ ಅಂತ ಹೇಳಿದ್ರು. ಒಟ್ಟಿನಲ್ಲಿ ವೆಂಕಟ್ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ, ತಾಳ್ಮೆ ಕಳೆದುಕೊಳ್ಳಬೇಡಿ ಅಂತ ಪ್ರಥಮ್ ಧೈರ್ಯ ತುಂಬಿದ್ರು.

ಪ್ರಥಮ್ ರಾಜಕೀಯ: ಇದೇ ಸಂದರ್ಭದಲ್ಲಿ ಮೊದಲು ಟಿಕೆಟ್ ತೆಗೆದುಕೊಂಡು ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲಿ ಜನರ ಸಮಸ್ಯೆಗಳ ಯಾವ ವಿಚಾರದಲ್ಲಿ ಧ್ವನಿಯೆತ್ತಬೇಕು ಅಂತ ಯೋಚನೆ ಮಾಡುತ್ತೇನೆ ಅಂದ್ರು.

ಯಾಕಂದ್ರೆ ಎಲ್ಲಾ ಕ್ಷೇತ್ರಗಳಲ್ಲೂ ಒಂದೇ ಸಮಸ್ಯೆಗಳಿಲ್ಲ. ನಾನು ಆಯ್ಕೆ ಮಾಡಿಕೊಂಡಿರುವ ಮೂರು ಕ್ಷೇತ್ರಗಳಲ್ಲೂ ಬೇರೆ ಬೇರೆ ಸಮಸ್ಯೆಗಳಿವೆ. ಆ ವಿಚಾರಕ್ಕೆ ವೆಂಕಟ್ ಸೂಟೆಬಲ್ ಅಂತ ನನಗೆ ಅನಿಸಿದ್ರೆ ನಾನು ಇವರನ್ನು ಕರೆತೀನಿ ಅಂತ ಪ್ರಥಮ್ ಹೇಳಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *