ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಪ್ರಥಮ್

Public TV
1 Min Read

ಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್ ಪ್ರಥಮ್ (Pratham) ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯದ ಭಾನುಶ್ರೀ (Bhanushree) ಜೊತೆ ಅವರು ಸರಳವಾಗಿ ಮದುವೆಯಾಗಿದ್ದಾರೆ (Marriage). ಈ ಜೋಡಿಯನ್ನು ಶುಭ ಹಾರೈಸುವುದಕ್ಕಾಗಿ ಲವ್ಲಿ ಸ್ಟಾರ್ ಪ್ರೇಮ್, ಧ್ರುವ ಸರ್ಜಾ, ಗಾಯಕಿ ಇಶಾನಿ, ರಕ್ಷಕ್ ಬುಲೆಟ್ ಸೇರಿದಂತೆ ಹಲವಾರು ತಾರೆಯರು ಆಗಮಿಸಿದ್ದರು.

ಎಲ್ಲರನ್ನೂ ಮದುವೆಗೆ ಕರೆಯಲಾರೆ ಎಂದು ಮೊದಲೇ ಪ್ರಥಮ್ ತಿಳಿಸಿದ್ದರು. ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರ ಮುಂದೆ ಸರಳವಾಗಿ ಮದುವೆ ಆಗುವುದಾಗಿ ಅವರು ತಿಳಿಸಿದ್ದರು. ಹಾಗೆಯೇ ಪ್ರಥಮ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ವಾರವಷ್ಟೇ ಇವರು ಸೋಷಿಯಲ್ ಮೀಡಿಯಾದಲ್ಲಿ, ‘ಮುಂದಿನ ವಾರ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೆಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ. ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

Share This Article