ಸಿದ್ದರಾಮಯ್ಯ 10 ವರ್ಷ ಸಿಎಂ ಆಗ್ಬಿಟ್ರೆ ತಾಯಿ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ: ಪ್ರತಾಪ್‌ ಸಿಂಹ ಕಿಡಿ

Public TV
2 Min Read

– ಅಭಿವೃದ್ಧಿ ಚರ್ಚೆಗೆ ಸಿದ್ಧ ವೇದಿಗೆ ಸಿದ್ಧಮಾಡಿ ಎಂದ ಮಾಜಿ ಸಂಸದ

ಮೈಸೂರು: ಸಿದ್ದರಾಮಯ್ಯ (Siddaramaiah) ಅವರು ದೇವರಾಜ ಅರಸುಗಿಂತ ದೊಡ್ಡವರು ಅಂತ ಹೇಳ್ತಿದ್ದರು. ಈಗ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವ್ರಿಗಿಂತ ದೊಡ್ಡವರಾಗಿದ್ದಾರೆ. 10 ಸಿಎಂ ಆಗಿಬಿಟ್ರೆ ನಾಡದೇವತೆ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ ಅಂತ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ವಾಗ್ದಾಳಿ ನಡೆಸಿದ್ದಾರೆ.

`ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ’ ಎಂಬ ಮುಖ್ಯಮಂತ್ರಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮಕ್ಕಳಿಗೆ ಆಸ್ತಿಯನ್ನ ಮಾಡಿಕೊಡಬಹುದು ಆದ್ರೆ, ತಲೆಯಲ್ಲಿ ಬುದ್ಧಿ ತುಂಬಿಕೊಡಲು ಸಾಧ್ಯವಿಲ್ಲ ಅನ್ನೋದನ್ನ ಇಂತಹ ಹೇಳಿಯಿಂದ ಅರ್ಥ ಮಾಡಿಕೊಳ್ಳಬಹುದು. ಇದು ಯತೀಂದ್ರ (Yathindra Siddaramaiah) ಅವರ ಮಾತಲ್ಲ, ಇದು ಸಿದ್ದರಾಮಯ್ಯ ಅವರ ಅಂತರಾಳದ ಭಾವನೆ ಕೂಡ ಹೌದು. ಮಹಾರಾಜರ ಕುಟುಂಬದ ಬಗ್ಗೆ ಸಿದ್ದರಾಮಯ್ಯಗೆ ದ್ವೇಷ, ಅಪಥ್ಯಾ ಭಾವನೆ ಇದೆ. ದೇವರಾಜ ಅರಸುಗಿಂತ ದೊಡ್ಡವರು ನಾನು ಅಂತಾ ಸಿದ್ದರಾಮಯ್ಯ ಹೇಳ್ತಿದ್ದರು. ಈಗ ನಾಲ್ವಡಿ ಕೃಷ್ಣರಾಜ ಮಹಾರಾಜರಿಗಿಂತ ದೊಡ್ಡವರಾಗಿದ್ದಾರೆ ಅಂತ ಕುಟುಕಿದರು.

ಯತೀಂದ್ರ ನಿಪ್ಪನ್ನ ಕೊಡುಗೆ ಏನು?
10 ವರ್ಷ ಸಿಎಂ ಆಗಿ ಬಿಟ್ಟರೆ ನಾಡದೇವತೆ ಚಾಮುಂಡಿಗಿಂತಾ ದೊಡ್ಡವರು ಆಗಿ ಬಿಡುತ್ತಾರೆ. ಯತೀಂದ್ರ ಅವ್ರೇ ನಿಮ್ಮಪ್ಪನ ಕೊಡುಗೆ ಏನು ಹೇಳಿ? ಕೆ.ಆರ್‌ ಆಸ್ಪತ್ರೆಗೆ ಸುಣ್ಣ ಹೊಡೆಸಲು ನಿಮ್ಮಪ್ಪನ ಕೈಯಲ್ಲಿ ಆಗಿಲ್ಲ. ಮೈಸೂರಿಗೆ ನಿಮ್ಮಪ್ಪನ ಕೊಡುಗೆ ಏನು ಹೇಳಿ? ನಿಮ್ಮ ಅಮ್ಮ-ಅಪ್ಪ ಸೇರಿ ಮುಡಾದಲ್ಲಿ ಸೈಟು ಹೊಡೆದರು ಅದೇನಾ ನಿಮ್ಮ ಅಪ್ಪನ ಕೊಡುಗೆ ಯತೀಂದ್ರ? ಅಂತ ವ್ಯಂಗ್ಯವಾಗಿ ಪ್ರಶ್ನಿಸಿದರು.

ಒಳ್ಳೆ ಕಮಾಯಿ ಮಾಡ್ಕೊಂಡು ಆರಾಮಾಗಿದ್ದೀರಿ
ನಾಲ್ವಡಿ ಮಹಾರಾಜರು ನಾಡ ಬೆಳಗಿದವರು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಜಲಾಶಯ ಕಟ್ಟಿದ ರೀತಿ ಫೋಸ್ ಕೊಡುವುದು ಬಿಡಿ. ವರ್ಗಾವಣೆಯಲ್ಲಿ ಒಳ್ಳೆ ಕಮಾಯಿ ಮಾಡಿಕೊಂಡು ಅರಾಮಾಗಿ ಇದ್ದೀರಿ. ಯತೀಂದ್ರ ಅವರೇ ನಿಮ್ಮ ಅಪ್ಪನ ಕೊಡುಗೆ ಏನು ಅಂತ ಹೇಳಿ ನೋಡೋಣ. ಉಡಾಫೆ ಮಾತಾಡಿಕೊಂಡು ಓಡಾಡಿದ್ದೆ ಸಿಎಂ ಸಾಧನೆ ಅಂತ ಲೇವಡಿ ಮಾಡಿದರು.

ಇನ್ನೂ ಅಭಿವೃದ್ಧಿ ಬಗ್ಗೆ ಚರ್ಚೆಗೆ ಸಿಎಂ ಪಂಥಾಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಅವರೇ ವೇದಿಕೆ ಸಿದ್ಧ ಮಾಡಿ. ನಾವು ಬರ್ತಿವಿ. ಚರ್ಚೆ ಮಾಡಿಯೆ ಬಿಡೋಣ. ಕಲಘಟಗಿ ಲಾಡು, ಮರಿ ಖರ್ಗೆ, ನಿಮ್ಮ ಮಗ ಯತೀಂದ್ರ ಎಲ್ಲರನ್ನೂ ಕರೆದು ಕೊಂಡು ಬನ್ನಿ ಅಂತ ಸವಾಲೆಸೆದರು.

Share This Article