ಕೊಡವರಂತೆ ತಮ್ಮ ಸಮುದಾಯದವರ ನರಮೇಧ ಮಾಡಿದ್ರೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡ್ತಿದ್ರಾ? ಪ್ರತಾಪ ಸಿಂಹ

Public TV
1 Min Read

ಮೈಸೂರು: ಟಿಪ್ಪು (Tippu Sultan) ಕೊಡವರ ನರಮೇಧ ಮಾಡಿದಂತೆ ತಮ್ಮ ಸಮುದಾಯದವರ ನರಮೇಧ ಮಾಡಿದ್ದರೆ ಸಿದ್ದರಾಮಯ್ಯ (Siddaramaiah) ಅವರು ಟಿಪ್ಪು ಜಯಂತಿ (Tippu Jayanti) ಮಾಡುತ್ತಿದ್ರಾ ಎಂದು ಸಂಸದ ಪ್ರತಾಪ ಸಿಂಹ (Pratap Simha) ಪ್ರಶ್ನಿಸಿದರು.

ʼಟಿಪ್ಪು ನಿಜ ಕನಸುಗಳುʼ ನಾಟಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತನ್ವೀರ್ ಸೇಠ್ (Tanveer Sait) ಅವರು ಸಾಬ್ರು. ಟಿಪ್ಪು ಕೂಡ ಸಾಬ್ರು. ಹೀಗಾಗಿ ಅನಿವಾರ್ಯವಾಗಿ ಟಿಪ್ಪುನ ಸಮರ್ಥಿಸುತ್ತಾರೆ. ನಮ್ಮ ವಿಶ್ವನಾಥ್‌ ಅವರಿಗೆ ಏನೂ ಅನಿವಾರ್ಯವೋ ಗೊತ್ತಾಗುತ್ತಿಲ್ಲ ಎಂದು ಚಾಟಿ ಬೀಸಿದರು. ಇದನ್ನೂ ಓದಿ: ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್

tippu

ಟಿಪ್ಪುನನ್ನು ಮೈಸೂರು (Mysuru) ಹುಲಿ ಎನ್ನುವ ಮುಸ್ಲಿಮರು, ಯಾಕೆ ಗುಂಪಿನೊಳಗೆ ಬಂದು ಕಲ್ಲು ಎಸೆಯುವ ಪ್ರವೃತ್ತಿ ಬೆಳೆಸಿ ಕೊಂಡಿದ್ದಿರಿ? ಮುಸ್ಲಿಂ ರಾಜರಲ್ಲಿ ಕ್ರೌರ್ಯವಿದೆಯೇ ಹೊರತು ಶೌರ್ಯವಿರಲಿಲ್ಲ. ಮುಸ್ಲಿಮರಲ್ಲಿ ಯಾವೊಬ್ಬ ರಾಜನೂ ಶೌರ್ಯ ಪುರುಷರಿಲ್ಲ. ಟಿಪ್ಪು ಅವರ ಅಪ್ಪ ಹೈದರಾಲಿ ಯಾವತ್ತೂ ಖಡ್ಗ ಹಿಡಿದು ಹೋರಾಡಿಲ್ಲ. ಟಿಪ್ಪು ಯಾವತ್ತು ಹುಲಿ ಕೊಂದ ಅಂತಾ ಹೇಳ್ರಪ್ಪ. ಹುಲಿ ಕೊಂದವನು ಯಾಕೆ ನಮ್ಮ ರಾಜರನ್ನು ಮೋಸದಿಂದ ಕೊಂದ ಹೇಳಿ ಎಂದು ಪ್ರಶ್ನಿಸಿದರು.

ಟಿಪ್ಪು ಯಾವ ಕಾರಣಕ್ಕೆ ತನ್ನ ಮಕ್ಕಳನ್ನು ಅಡವಿಟ್ಟ ತಿಳಿದುಕೊಳ್ಳಿ. ಹುಲಿ ರಣರಂಗಕ್ಕೆ ಬಾರದೆ ಕೋಟೆಯೊಳಗಿನ ಬೋನಲ್ಲಿ ಸಾಯ್ತು. ಕೋಟೆಯೊಳಗೆ ಸತ್ತ ಟಿಪ್ಪು ಯಾವ ಹುಲಿ ರೀ? ಟಿಪ್ಪು ಸಾಯದೆ ಇದ್ದಿದ್ದರೆ ಮೈಸೂರು ಪ್ರಾಂತ್ಯ ಇಸ್ಲಾಂ ಪ್ರಾಂತ್ಯವಾಗುತ್ತಿತ್ತು. ಕನ್ನಡ ಹೋರಾಟಗಾರರೇ, ದಿವಾನ್ ಎಂಬುದೇ ಪರ್ಷಿಯನ್ ಶಬ್ಧ. ಕಂದಾಯ ದಾಖಲೆಯ ಶಬ್ಧಗಳು ಪರ್ಷಿಯನ್ ಪದಗಳು. ಇವು ಎಲ್ಲಿಂದ ಬಂದವೂ ಮೊದಲು ಗಮನಿಸಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಹಳೇ ಮೈಸೂರಿನ ಭದ್ರಕೋಟೆ ಗಟ್ಟಿ ಮಾಡಲು ಎಚ್‌ಡಿಕೆ ಪ್ಲಾನ್‌

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *