ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

Public TV
2 Min Read

– ಭಗವದ್ಗೀತೆ ಧರ್ಮ ಅಧರ್ಮ ಬಗ್ಗೆ ಬೋಧಿಸುತ್ತದೆ

ಮೈಸೂರು: ಬೈಬಲ್, ಕುರಾನ್ ಹಾಗೂ ಭಗವದ್ಗೀತೆಗೂ ವ್ಯತ್ಯಾಸವಿದೆ. ಭಗವದ್ಗೀತೆ ಹಿಂದೂಗಳ ಧರ್ಮಗ್ರಂಥ ಮಾತ್ರವಲ್ಲ, ಅದರಲ್ಲಿ ಜೀವನದ ನೀತಿ ಪಾಠವಿದೆ ಎಂದು ಸಂಸದ ಪ್ರತಾಪ್‍ಸಿಂಹ ಹೇಳಿದ್ದಾರೆ.

ಪಠ್ಯ ಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರ ಮಾತನಾಡಿದ ಅವರು, ಕ್ರಿಶ್ಚಿಯನ್, ಇಸ್ಲಾಂ ರೀತಿ ಅಲ್ಲ, ಅದು ಒಂದೇ ದೇವರು ಮಾತ್ರ ಪೂಜಿಸಿ ಎಂದು ಹೇಳುವುದಿಲ್ಲ. ಮಹಾಭಾರತ ಧರ್ಮ, ಅಧರ್ಮದ ನಡುವೆ ನಡೆದ ಯುದ್ಧವಾಗಿದೆ. ಅದೇ ಸಮಯದಲ್ಲಿ ಕೃಷ್ಣ ಭಗವದ್ಗೀತೆ ಭೋದನೆ ಮಾಡಿ ಧರ್ಮದ ದಾರಿಯಲ್ಲಿ ನಡೆಯುವಂತೆ ಹೇಳಲಾಗಿದೆ. ಧರ್ಮ ಎಂದರೆ ಅದು ಸತ್ಯ. ಇದು ಒಂದು ಧರ್ಮಕ್ಕೆ ಸಿಮೀತವಾಗಿಲ್ಲ. ಹಿಂದೂ ಧರ್ಮವೇ ಜೀವನ ಶೈಲಿಯಾಗಿದೆ. ಇದನ್ನು ಶಾಲೆಯ ಹಂತದಲ್ಲಿ ತಿಳಿಸಬೇಕಾಗಿರುವುದು ಅಗತ್ಯವಿದೆ. ಕುರಾನ್, ಬೈಬಲ್ ಕಲಿಸಿದರೆ ಒಬ್ಬ ವ್ಯಕ್ತಿ ದೇವರು ಅಂತಾ ಕಲಿಸಲಾಗುತ್ತದೆ. ಆದರೆ ಭಗವದ್ಗೀತೆ ಧರ್ಮ ಅಧರ್ಮ ಬಗ್ಗೆ ಬೋಧಿಸುತ್ತದೆ. ಇದನ್ನು ಪಠ್ಯವಾಗಿ ತರಬೇಕು ಅಂತಾ ಸಿಎಂ ಸಚಿವರು ತರಲು ಹೊರಟಿರುವುದು ಸ್ವಾಗತಾರ್ಹವಾಗಿದೆ. ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಕುಮಾರಸ್ವಾಮಿ ಅವರ ಮಾತನ್ನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ. ಕುಟುಂಬ ರಾಜಕಾರಣ ಮಾಡಬಾರದು. ನನಗೆ ಎಲ್ಲಾ ಅಧಿಕಾರ ಬೇಕು ಅನ್ನೋ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಈ ಕಾರಣಕ್ಕೆ ಮಕ್ಕಳಿಗೆ ಭಗವದ್ಗೀತೆ ಅವಶ್ಯಕತೆ ಇದೆ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

ದಿ ಕಾಶ್ಮಿರ್‌ ಫೈಲ್ಸ್ ಚಿತ್ರವನ್ನು ಕಾಂಗ್ರೆಸ್ ನಾಯಕರು ನೋಡದ ವಿಚಾರ ಮಾತನಾಡಿ, ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಅವರೇ ಮಾಡಿದ ಅಪರಾಧವನ್ನು ಅವರೇ ನೋಡಲು ಹೇಗೆ ಸಾಧ್ಯ? ಆದರೆ ಜನರು ನೋಡುತ್ತಿದ್ದಾರೆ. ಅವರಿಗೆ ಸತ್ಯದ ಅರಿವಾಗಿದೆ. ಕಾಶ್ಮಿರ ಫೈಲ್ಸ್‍ನಲ್ಲಿರುವ ಒಂದೊಂದು ದೃಶ್ಯವು ಸತ್ಯವಾಗಿದೆ. ಅವರೇ ಮಾಡಿದ ಕರ್ಮ ಅವರೇ ಹೇಗೆ ನೋಡಲು ಸಾಧ್ಯವಾಗುತ್ತದೆ. ಜೈ ಭೀಮ್ ಬಿಡುಗಡೆಯಾಗಿದ್ದು ಓಟಿಟಿಯಲ್ಲಿ, ಓಟಿಟಿಯಲ್ಲಿ ತೆರಿಗೆ ವಿನಾಯತಿ ಕೊಡಲು ಹೇಗೆ ಸಾಧ್ಯ? ಕಾಂಗ್ರೆಸ್ ನಾಯಕರು ಪೆದ್ದು ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದ್ದಾರೆ

Share This Article
Leave a Comment

Leave a Reply

Your email address will not be published. Required fields are marked *