ಕಾಂಗ್ರೆಸ್ ನಪುಂಸಕ ಪಕ್ಷ, ನೆಹರು ನಪುಂಸಕ- ಪ್ರತಾಪ್ ಸಿಂಹ ವಾಗ್ದಾಳಿ

Public TV
2 Min Read

ಮೈಸೂರು: ಆರ್‌ಎಸ್‍ಎಸ್ ಅನ್ನು ನಪುಂಸಕ ಎಂದ ಕಾಂಗ್ರೆಸ್ ಟ್ವೀಟ್‍ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೆಹರುವನ್ನು ಪ್ರಧಾನಿ ಮಾಡಲು ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದ ನಪುಂಸಕ ಪಕ್ಷ ಯಾವುದು? 1962ರಲ್ಲಿ ಚೀನಾ ಯುದ್ಧದ ಸಂದರ್ಭದಲ್ಲಿ ನಮ್ಮ ಸೈನಿಕರು ಕೈಕಟ್ಟಿ ಕುಳಿತು ಕೊಳ್ಳುವಂತೆ ಮಾಡಿದ ನಂಪುಸಕ ಯಾರು? ಲಡಾಖ್‍ನ್ನು ಚೀನಾ ಅಕ್ರಮಿಸಿ ಕೊಂಡಾಗ ಅಲ್ಲಿ ಹುಲ್ಲು ಕಡಿಯು ಬೆಳೆಯಲ್ಲ ಅಂತಾ ಬೊಳ ತಲೆ ಸವರಿಕೊಂಡ ನಪುಂಸಕ ಯಾರು? ಪಾಕ್ ಅಕ್ರಮಿತ ಕಾಶ್ಮಿರ ವಾಪಸ್ ಪಡೆಯದ ಸರ್ಕಾರ ಯಾರದು? ವಾಸಿಮ್ ಮಲ್ಲಿಕ್‌ನಂತಹ ಭಯೋತ್ಪಾದಕನನ್ನು ಪ್ರಧಾನಿ ಕಾರ್ಯಾಲಯಕ್ಕೆ ಕರೆಸಿಕೊಂಡ ಸರ್ಕಾರ ಯಾವುದು ಎಂದು ಪ್ರಶ್ನಿಸಿದರು.

Siddaramaiah

ಸೋನಿಯಾ ಗಾಂಧಿ ಮೂಲ ಯಾವುದು? ಸಿದ್ದರಾಮಯ್ಯ ಅವರ ಅಧಿನಾಯಕಿ ಅವರು ಆರ್ಯನ್ ಅವರಾ ದ್ರಾವಿಡ್‍ದವರಾ ಎಂದು ಪ್ರಶ್ನಿಸಿದ ಅವರು, ನೆಹರು ಏನೂ ಘನಂಧಾರಿ ಕೆಲಸ ಮಾಡಿದ್ದಾರೆ. ರಷ್ಯಾದ ಕಳಪೆ ಯುದ್ಧ ಉಪಕರಣ ತಂದಿದ್ದು ನೆಹರು ಕೊಡುಗೆ ಅಷ್ಟೆ ಆಗಿದೆ. ನೆಹರು ಪ್ರಧಾನಿ ಆಗುವ ಮುನ್ನವೆ ಮೈಸೂರು ಅರಸರು ಹಲವು ಅಭಿವೃದ್ಧಿ ಕಾರ್ಯ ಮಾಡಿದರು. ಐಐಟಿ ಕೂಡ ನೆಹರು ಅವರ ಸ್ವತ ಚಿಂತನೆ ಅಲ್ಲ. ಅದು ಕೂಡ ಬೇರೆ ದೇಶದಿಂದ ಎರವಲು ಪಡೆದಿದ್ದು ಎಂದು ತಿರುಗೇಟು ನೀಡಿದರು.

ಲಾಲ್ ಚೌಕ್‍ನಲ್ಲಿ ಪಾಕಿಸ್ತಾನ ಧ್ವಜ ಹಾರಿಸಲು ಬಿಟ್ಟವರು ನಪುಂಸಕರು. ಅದನ್ನು ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ ನಮ್ಮ ಸಿದ್ದರಾಮಯ್ಯಗೆ ಸಾಹಿತ್ಯ ಜ್ಞಾನ ಇಲ್ಲ ವಿಚಾರಕ್ಕಿಂತ ಉಗುಳೆ ಜಾಸ್ತಿ. ಚೀನಾದಲ್ಲಿ ಮಂಡಿಯೂರಿ ಕೂತವರು ಯಾರು ಎಂದು ಸಿದ್ದರಾಮಯ್ಯ ಇತಿಹಾಸ ಓದಲಿ. ಸಿದ್ದರಾಮಯ್ಯಗೆ ಅರ್ಥವಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇನ್ಮುಂದೆ ಕೇದಾರನಾಥ ರಸ್ತೆ ಮಾರ್ಗದಲ್ಲೂ ಮೊಬೈಲ್, ಇಂಟರ್‌ನೆಟ್ ಸೇವೆ ಲಭ್ಯ

ಆರ್‌ಎಸ್‍ಎಸ್‍ನ ರಾಜಕೀಯ ವ್ಹಿಂಗ್ ಬಿಜೆಪಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮುಸ್ಲಿಂರ ವಿಚಾರದಲ್ಲಿ ಮಾತಾಡಿದರೆ ಸಿದ್ದರಾಮಯ್ಯ ಯಾಕೆ ಉತ್ತರ ಕೊಡಬೇಕು? ಮುಸ್ಲಿಂರಿಗೂ ಸಿದ್ದರಾಮಯ್ಯಗೂ ಏನೂ ಸಂಬಂಧ ಎಂದು ಕಿಡಿಕಾರಿದರು.

ಇಟಲಿ ಮೂಲದ ಸೋನಿಯಾ ಗಾಂಧಿಯ ಕಾಂಗ್ರೆಸ್ ಬಿಟ್ಟು ದ್ರಾವಿಡ್‍ಯನ್ ಮೂಲದ ದೇವೇಗೌಡರ ಪಕ್ಷವನ್ನು ವಾಪಸ್ ಸೇರಲಿ. ಸಿದ್ದರಾಮಯ್ಯಗೆ ಪ್ರಚಾರಬೇಕು. ಅದಕ್ಕಾಗಿ ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವರು ಇನ್ನೂ ಯಾವತ್ತೂ ಸಿಎಂ ಆಗಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ- ಜೆಡಿಎಸ್ ಅಭ್ಯರ್ಥಿಯಾಗಿ ಕುಪ್ಪೇಂದ್ರ ರೆಡ್ಡಿ ಫೈನಲ್

Share This Article
Leave a Comment

Leave a Reply

Your email address will not be published. Required fields are marked *