ಸಿದ್ದರಾಮಯ್ಯಗೆ ದೇವಸ್ಥಾನದ ಮೇಲೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಆಚರಿಸುತ್ತಿರಲಿಲ್ಲ: ಪ್ರತಾಪ್ ಸಿಂಹ

Public TV
2 Min Read

ಮೈಸೂರು: ಸಿದ್ದರಾಮಯ್ಯ ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನು ತಮ್ಮ ಆಡಳಿತದಲ್ಲಿ ಮಾಡಲಿಲ್ಲ. ದೇವಸ್ಥಾನದ ಮೇಲೆ ಸಿದ್ದರಾಮಯ್ಯನವರಿಗೆ ಪ್ರೀತಿಯಿದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಬಿಜೆಪಿ ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದರು.  ಇದನ್ನೂ ಓದಿ: ಹಟ್ಟಿ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರನ ಗುಂಡಾಗಿರಿ, ಎಫ್‍ಐಆರ್ ದಾಖಲು

ಸಿದ್ದರಾಮಯ್ಯನವರಿಗೆ ಹಿಂದೂ ದೇವಸ್ಥಾನಗಳ ಮೇಲೆ ಪ್ರೀತಿಯಿದ್ದಿದ್ದರೆ ಅವರ ಆಡಳಿತದಲ್ಲಿ ಈ ತಪ್ಪು ಆದೇಶವನ್ನು ತಿದ್ದಬಹುದಿತ್ತು. ಸಿದ್ದರಾಮಯ್ಯ ಅವರು ಆಡಳಿತವಾಧಿಯಲ್ಲಿ ಕೋರ್ಟ್ ಗೆ ವರದಿ ಕೊಡಬೇಕಿತ್ತು. 8 ವಾರದಲ್ಲಿ ವರದಿ ನೀಡಲು ಕೋರ್ಟ್ ಗಡುವು ನೀಡಿತ್ತು. ಆದರೆ ಅವರು ಆ ಕೆಲಸ ಮಾಡಿರಲಿಲ್ಲ ಎಂದು ದೂರಿದರು.

2018ರ ಫೆಬ್ರವರಿ 6ರಂದು ದೇವಸ್ಥಾನ ತೆರವು ವಿಚಾರದಲ್ಲಿ ಅಂತಿಮ ಆದೇಶ ಕೊಟ್ಟಿದೆ. ಈ ಆದೇಶವನ್ನು ನಿಮಗೂ ಐಎಎಸ್ ಅಧಿಕಾರಿಗಳು ಸರಿಯಾಗಿ ವಿವರಿಸಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ತಪ್ಪು ಮಾಡಿದರು. ನಿಮ್ಮ ಆಡಳಿತದಲ್ಲಿ ಆ ತಪ್ಪು ಮುಂದುವರೆಯಿತು. ಐಎಎಸ್ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ವಿವರಣೆಯನ್ನು ಕೊಡುತ್ತಿಲ್ಲ. ಇದು ಅಧಿಕಾರಿಗಳು ಮಾಡಿರುವ ತಪ್ಪು. ಇದನ್ನು ಸುಮ್ಮನೆ ರಾಜಕಾರಣಿಗಳು ತಮ್ಮ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದರು. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್

ಎರಡು ಸರ್ಕಾರದಿಂದಲೂ ತಪ್ಪಾಗಿದೆ. ಅಧಿಕಾರಿಗಳು ಮಾಡಿರುವ ತಪ್ಪನ್ನು ಸರಿಯಾಗಿ ಯಾವ ಸರ್ಕಾರವು ಗಮನಿಸಿಲ್ಲ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಗಮನಿಸಿ ಸರಿಪಡಿಸಬಹುದಿತ್ತು. ಅವರು ಕೂಡ ಆ ಕೆಲಸವನ್ನು ಮಾಡಲಿಲ್ಲ. ಈಗ ದೇವಸ್ಥಾನದ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ. ಹಿಂದೂಗಳು ಹಾಗೂ ದೇವಸ್ಥಾನಗಳ ಮೇಲೆ ಅವರಿಗೆ ಪ್ರೀತಿಯಿದ್ದರೆ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ. ರಾಜಕೀಯ ಲಾಭಕ್ಕಾಗಿ, ವೋಟಿಗಾಗಿ ವೀರಶೈವ ಲಿಂಗಾಯತ ಜಾತಿ ಒಡೆಯುವ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ನಾನು ಯಾರ ಮೇಲು ಗೂಬೆ ಕೂರಿಸಲು ಬಂದಿಲ್ಲ. ಅಧಿಕಾರಿಗಳು ಮಾಡುವ ಲೋಪಗಳಿಗೆ ಜನಪ್ರತಿನಿಧಿಗಳು ಹೊಡೆದಾಡುವುದು ಸರಿಯಲ್ಲ. ಧರ್ಮದ ಮೇಲೆ ಯಾರಿಗೆ ಎಷ್ಟು ಪ್ರೀತಿ ಎನ್ನುವುದು ಎಲ್ಲರಿಗೂ ಗೊತ್ತು. ಆಗಿರುವ ಲೋಪಗಳನ್ನು ಸರ್ಕಾರ ಹೊಸ ಆದೇಶ ಹೊರಡಿಸಿ ಸರಿಮಾಡಬೇಕು ಎಲ್ಲಾ ಧರ್ಮಗಳ ಜಾತಿಗಳ ಹಿತ ಕಾಯುವ ಕೆಲಸವಾಗಬೇಕು ಅದನ್ನು ಬಿಟ್ಟು ಈ ರೀತಿ ರಾಜಕಾರಣ ಸರಿಯಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *