– ಡಿಕೆಶಿಗೆ ಸಲ್ಲಬೇಕಾದ ಕುರ್ಚಿ ಬಿಟ್ಟು ಕೊಡದಿರೋದೇ ನಿಮ್ಮ ಸಾಧನೆ – ಸಿಎಂ ವಿರುದ್ಧ ಲೇವಡಿ
ಮೈಸೂರು: ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ವಿಶ್ವವಿಖ್ಯಾತ ಆರ್ಥಿಕ ತಜ್ಞ ಹಾಗೂ ಮೈನಿಂಗ್ ದೊರೆ ಸಂತೋಷ್ ಲಾಡ್‌ಗೆ ಮುಂದಿನ ವಾರ ಬಡ್ಡಿ ಸಮೇತ ಎಲ್ಲದನ್ನ ಚುಕ್ತಾ ಮಾಡ್ತಿನಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಗುಡುಗಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಸಿಲಬಸ್ ಬಿಟ್ಟು ಬರೀ ಔಟ್ ಆಫ್ ಸಿಲಬಸ್ ಮಾತಾಡುತ್ತಾರೆ. ತಮ್ಮ ಖಾತೆ ಬಗ್ಗೆ ಒಂದು ಸುದ್ದಿಗೋಷ್ಠಿ ಮಾಡಿ ಅಂತ ಕೇಳಿದರೆ ಬೇರೆ ಏನೇನೋ ಮಾತಾಡುತ್ತಾರೆ. ಪ್ರಿಯಾಂಕ್ ಖರ್ಗೆ, ವಿಶ್ವವಿಖ್ಯಾತ ಆರ್ಥಿಕ ತಜ್ಞ ಹಾಗೂ ಮೈನಿಂಗ್ ದೊರೆ ಸಂತೋಷ್ ಲಾಡ್‌ಗೆ (Santosh Lad) ಮುಂದಿನ ವಾರ ಬಡ್ಡಿ ಸಮೇತ ಎಲ್ಲದನ್ನ ಚುಕ್ತಾ ಮಾಡ್ತಿನಿ, ಇಬ್ಬರನ್ನು ಎಕ್ಸ್‌ಪೋಸ್ ಮಾಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ದುರಂತಕ್ಕೆ ಪೈಲಟ್ ಕಾರಣನಾ? – ಅಮೆರಿಕ ವರದಿಯಿಂದ ಗೊಂದಲ; ಪ್ರತಿಕ್ರಿಯೆಗೆ ಕೇಂದ್ರ ನಕಾರ
ಬೀಗರ ಊಟಕ್ಕೆ ಬರ್ತಿರಲ್ಲ, ಸೇತುವೆ ಉದ್ಘಾಟನೆಗೆ ಯಾಕೆ ಹೋಗಲಿಲ್ಲ?
ಸಿಂಗದೂರು ಸೇತುವೆಗೆ ಸಿಎಂಗೆ ಆಹ್ವಾನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಶಿಷ್ಟಾಚಾರ ಅಂದರೆ ಏನು ಸಿಎಂ? ಅವ್ರೇ ಕೇಂದ್ರವೂ ಸಿಎಂ ನನ್ನು ಕರೆದಿದೆ, ಸಂಸದ ರಾಘವೇಂದ್ರ ಅವರು ಸಿಎಂ ರನ್ನ ಕರೆದಿದ್ದಾರೆ. ಇನ್ಯಾವ ರೀತಿ ನಿಮ್ಮನ್ನ ಕರೆಯಬೇಕಿತ್ತು ಮುಖ್ಯಮಂತ್ರಿಗಳೇ? ಬೆಂಗಳೂರುನಿಂದ ಮೈಸೂರಿಗೆ (Mysuru) ಬರಲು, ಮೈಸೂರಿನಿಂದ ತಾಲೂಕು ಕೇಂದ್ರಕ್ಕೆ ಹೋಗಲು ಹೆಲಿಕಾಪ್ಟರ್ ಬಳಕೆ ಮಾಡುತ್ತೀರಿ. ಇಂಡಿಗೆ ಹೋಗಿ ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ಹೋಗಬಹುದಿತ್ತಲ್ಲ. ಬಿ.ಎಸ್. ಯಡಿಯೂರಪ್ಪ ಅವರ ಸತತ ಪ್ರಯತ್ನ, ಸಂಸದ ರಾಘವೇಂದ್ರ ಅವರ ಪರಿಶ್ರಮ ದಿಂದ ಸೇತುವೆ ಆಗಿದೆ. ಜನರ ಖುಷಿ ನೋಡಲು ಸಿಎಂ ಅಲ್ಲಿಗೆ ಹೋಗಬೇಕಿತ್ತು. ಬೀಗರ ಊಟಕ್ಕೆ ಬರ್ತಿರಲ್ಲ, ಸೇತುವೆ ಉದ್ಘಾಟನೆಗೆ ಯಾಕೆ ಹೋಗಲಿಲ್ಲ? ಸಿಎಂ ಅವರೇ ನೀವು ಯಾವ ಶಿಷ್ಟಾಚಾರ ಪಾಲಿಸುತ್ತಿದ್ದಿರಿ? ಸಚಿವ ಮಹದೇವಪ್ಪಗೆ ಶಿಷ್ಟಾಚಾರ ದ ಬಗ್ಗೆ ಮಾತಾಡುವ ಕನಿಷ್ಟ ಸೌಜನ್ಯವೂ ಇಲ್ಲ ಅಂತ ಲೇವಡಿ ಮಾಡಿದ್ದಾರೆ.
ಮಂಗಳಾರತಿ ತೆಗದುಕೊಳ್ಳದ ಮಹದೇವಪ್ಪ
ಆಷಾಢ ಶುಕ್ರವಾರಕ್ಕೆ ಬೆಟ್ಟಕ್ಕೆ ಬಂದ ಸಚಿವ ಮಹದೇವಪ್ಪ (HC Mahadevappa) ಮಂಗಳಾರತಿ ಕೊಟ್ಟರೆ ಮಂಗಳರಾತಿ ತೆಗೆದು ಕೊಳ್ಳುವುದಿಲ್ಲ. ನಂಬಿಕೆ ಇಲ್ಲ ಅಂದ್ರೆ ನೀವು ಯಾಕೆ ದೇವಸ್ಥಾನಕ್ಕೆ ಬರ್ತಿರಾ? ಶಾಸಕ ತನ್ವೀರ್ ಸೇಠ್ ಬೆಟ್ಟಕ್ಕೆ ಬಂದರೆ ಪೂಜೆ ಮಾಡುತ್ತಾರೆ, ಕುಂಕುಮ ಹಚ್ಚುತ್ತಾರೆ. ನೀವು ಮಾತ್ರ ಹಂಗೆ ಹೋಗ್ತಿರಿ? ಈ ಸಂಪತ್ತಿಗೆ ಬೆಟ್ಟಕ್ಕೆ ಯಾಕೆ ಬರ್ತಿರಿ? ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದ ನಂತರ 15,000 ಎನ್‌ಕೌಂಟರ್ – 238 ಮಂದಿ ಹತ್ಯೆ
ಸಿಂಗಧೂರ್ ಸೇತುವೆ ಡಿಪಿಆರ್ ಮಾಡಿಸಿದ್ದು ನಾನೇ ಅಂತ ಮಹದೇವಪ್ಪ ಹೇಳಿದ್ದಾರೆ. ಯಾರೋ ಗೊತ್ತಿಲ್ಲದವರಿಗೆ ಈ ಕಥೆ ಹೇಳಿ ಮಹದೇವಪ್ಪ ಅವರೇ? ಡಿಪಿಆರ್ ಕೂಡ ಮಾಡಿಸೋದು ಕೇಂದ್ರ ಸರ್ಕಾರ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಮೈಸೂರಿಗೆ ಬಂದಾಗ ಮಹದೇವಪ್ಪ ಮೈಸೂರಿಗೆ ಬರುತ್ತಾರೆ. ಅಮೇಲೆ ಕೈಗೆ ಸಿಗಲ್ಲ. ಎಷ್ಟು ಕೆಡಿಪಿ ಸಭೆ ಮಾಡಿದ್ದೀರಾ ಹೇಳಿ? ಹಿರಿಯ ಪತ್ರಕರ್ತ ಕೆ.ಬಿ ಗಣಪತಿ ಅವರಿಗೆ ಪೊಲೀಸ್ ಗೌರವ ಕೊಡುವ ಸೌಜನ್ಯವೂ ಸಿಎಂಗೆ ಮಹದೇವಪ್ಪ ಅವರಿಗೆ ಇಲ್ಲ. ಕೆಬಿ ಗಣಪತಿ ಅವರಿಗೆ ಪೊಲೀಸ್ ಗೌರವ ಯಾಕೆ ಕೊಡಲಿಲ್ಲ? 50 ವರ್ಷ ನಿರಂತರವಾಗಿ ಪತ್ರಿಕೋದ್ಯಮ ಮಾಡಿದ ಕೆಬಿ ಗಣಪತಿ ಅವರಿಗೆ ಪೊಲೀಸ್ ಗೌರವ ಕೊಡಬೇಕಿತ್ತು ತಾನೇ? ಹಿರಿಯ ಪತ್ರಕರ್ತರಾದ ರಾಜಶೇಖರ ಕೋಟಿ, ದಲಿತ ಹೋರಾಟದ ಮುಖಂಡ ನಿಧನರಾದಗ ಪೊಲೀಸ್ ಗೌರವ ಕೊಡಲಾಗಿತ್ತು. ಈಗ ಕೆ.ಬಿ ಗಣಪತಿ ಅವರಿಗೆ ಯಾಕೆ ಕೊಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹೆಚ್‍ಡಿಕೆ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆಗೆ ಸುಪ್ರೀಂ ತಡೆ
ಡಿಕೆಶಿನ ಹದ್ದು ಬಸ್ತಿನಲ್ಲಿ ಇಡೋಕೆ ತಂತ್ರ ಮಾಡಿದ್ದೇ ಸಾಧನೆನಾ?
ಇನ್ನೂ ಮೈಸೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶದ ಬಗ್ಗೆ ಮಾತನಾಡಿ, ಸಿಎಂಗೆ ಹ್ಯಾಟ್ಸ್ ಆಫ್. ಎರಡು ಕಾಲು ವರ್ಷದಿಂದ ಏನೇನೂ ಸಾಧನೆ ಮಾಡದೆ ಸಾಧನಾ ಸಮಾವೇಶ ಮಾಡುತ್ತಿರುವ ಇವರ ಭಂಢತನಕ್ಕೆ ಹ್ಯಾಟ್ಸ್ ಆಫ್. ಮೈಸೂರಿಗೆ ಸಿಎಂ ಏನೂ ಕೊಟ್ಟಿದ್ದಾರೆ? ಏನ್ ಸಾಧನೆ ಹೇಳಿ? ಎರಡು ಕಾಲು ವರ್ಷದಲ್ಲಿ ನಿಮ್ಮ ಕೆಲಸ ಏನೂ ಹೇಳಿ ಸಿಎಂ? ಮದುವೆಗೆ ಬಂದೆ ಮುಂಜಿ ಮೈಸೂರಿಗೆ ಬಂದಿದ್ದೇ ಸಿಎಂ ಸಾಧನೆನಾ? ಏಳು ಕಾಲು ವರ್ಷ ಸಿಎಂ ಆದರು ಮೈಸೂರಿಗೆ ಒಂದು ಸರಿಯಾದ ದಿಕ್ಕು ತೋರಿಸಿಲ್ಲ ನೀವು. ಫಿಲಂ ಸಿಟಿ ಮಾಡಿದ್ರಾ? ಪ್ರವಾಸೋದ್ಯಮ ಸರ್ಕ್ಯೂಟ್ ಆಯ್ತಾ? ಎಲ್ಲದರ ದರ ಜಾಸ್ತಿ ಮಾಡಿದ್ದೆ ನಿಮ್ಮ ಸಾಧನೆ. ಯಾವ ಕೆಲಸವೂ ಮಾಡಿಲ್ಲ. ಬರೀ ಉಡಾಫೆ ಮಾತಾಡುತ್ತಾ? ಡಿಕೆ ಶಿವಕುಮಾರನ್ನ ಹದ್ದು ಬಸ್ತಿನಲ್ಲಿ ಇಡೋಕೆ ತಂತ್ರ ಮಾಡಿದ್ದೇ ನಿಮ್ಮ ಸಾಧನೆ. ಕುರ್ಚಿ ಉಳಿಸಿಕೊಳ್ಳೋದಕ್ಕಾಗಿ ಹೋರಾಟ ಮಾಡುತ್ತಾ, ರಾಜಣ್ಣ, ಜಾರಕಿಹೊಳಿ, ಶಾಮನೂರು, ಮಹದೇವಪ್ಪ ಅವರನ್ನ ಡಿಕೆ ಶಿವಕುಮಾರ್ ವಿರುದ್ಧ ಎತ್ತಿ ಕಟ್ಟಿದ್ದೇ ಸಿಎಂ ಸಾಧನೆ ಡಿಕೆ ಶಿವಕುಮಾರ್‌ಗೆ ನ್ಯಾಯಯುತವಾಗಿ ಸಲ್ಲಬೇಕಾದ ಕುರ್ಚಿ ಬಿಟ್ಟು ಕೊಡದೇ ಇರುವುದೇ ನಿಮ್ಮ ಸಾಧನೆ ಅಂತ ಕೆಂಡಕಾರಿದ್ದಾರೆ.