ಕಾಂತಾರ ಸಿನಿಮಾಕ್ಕಾಗಿ ಇಡೀ ಥಿಯೇಟರ್‌ ಬುಕ್‌ ಮಾಡಿದ ಪ್ರತಾಪ್‌ ಸಿಂಹ

Public TV
1 Min Read

ಮೈಸೂರು: ಕಾಂತಾರ: ಚಾಪ್ಟರ್‌ 1 (Kantara: Chapter 1) ಸಿನಿಮಾ ವೀಕ್ಷಣೆಗೆ ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಇಡೀ ಥಿಯೇಟರ್‌ ಅನ್ನು ಬುಕ್‌ ಮಾಡಿದ್ದಾರೆ.

ಭಾನುವಾರ 4 ಗಂಟೆಗೆ ಕಾರ್ಯಕರ್ತರೆಲ್ಲ ಒಡಗೂಡಿ ಕಾಂತಾರ-2 ನೋಡೋಣ, ಡಿಆರ್‌ಸಿಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಒಟ್ಟು 197 ಟಿಕೆಟಿಗೆ ಪ್ರತಾಪ್‌ ಸಿಂಹ 68,920 ರೂ. ಪಾವತಿಸಿ ಥಿಯೇಟರ್‌ ಬುಕ್‌ ಮಾಡಿದ್ದಾರೆ. ಇದನ್ನೂ ಓದಿ:  2021ನೇ ಸಾಲಿನ ಪ್ರಶಸ್ತಿ ಘೋಷಣೆ – ಚಾರ್ಲಿ 777 ಚಿತ್ರದ ನಟನೆಗೆ ರಕ್ಷಿತ್ ಶೆಟ್ಟಿಗೆ ಪ್ರಶಸ್ತಿ

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ಭಾರತದಲ್ಲಿ ಒಟ್ಟು 6,500 ಚಿತ್ರ ಮಂದಿರಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದ್ದವು.

ರಿಲೀಸ್‌ಗೂ ಒಂದು ದಿನ ಮೊದಲೇ ಅಂದರೆ ಅ.1ರಂದು ದೇಶದ ವಿವಿಧೆಡೆ ಪ್ರೀಮಿಯರ್ ಶೋಗಳು ನಡೆದಿದ್ದು, ಈ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡಿದ್ದವು. ಇದರಿಂದ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದ್ದು, ಬಿಡುಗಡೆ ದಿನ ಉತ್ತಮ ಪ್ರದರ್ಶನ ಕಂಡಿತ್ತು.

Share This Article