‘ಸಲಾರ್‌ʼ ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್

Public TV
1 Min Read

‘ಕೆಜಿಎಫ್ 2′ (KGF 2) ಸಿನಿಮಾದ ಸೂಪರ್ ಸಕ್ಸಸ್ ನಂತರ ‘ಸಲಾರ್’ (Saalar) ಸಿನಿಮಾ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಬರುತ್ತಿದ್ದಾರೆ. ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದನ್ನ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ ರಂಗದ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಸದ್ಯ ತೆಲುಗಿನತ್ತ ಮುಖ ಮಾಡಿದ್ದಾರೆ. ‘ಕೆಜಿಎಫ್ 2’ ಬಳಿಕ ಸಲಾರ್ ಕೈಗೆತ್ತಿಕೊಂಡಿದ್ದಾರೆ. ‘ಸಲಾರ್’ ಇದೊಂದು ಡಿಫರೆಂಟ್ ಕಂಟೆಂಟ್ ಇರುವ ಸಿನಿಮಾ ಆಗಿದ್ದು, ಪ್ರಭಾಸ್‌ಗೆ ಮೊದಲ ಬಾರಿಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣದ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ಹಾಸನ್ (Shruti Haasan) ನಟಿಸಿದ್ದಾರೆ. ಇಷ್ಟು ಪೋಸ್ಟರ್ ಲುಕ್‌ನಿಂದಲೇ ಸದ್ದು ಮಾಡ್ತಿದ್ದ ‘ಸಲಾರ್’ ಸಿನಿಮಾ ಮೊದಲ ಝಲಕ್ ತೋರಿಸಲು ಚಿತ್ರತಂಡ ನಿರ್ಧರಿಸಿದೆ. ಹೌದು.. ಇದೇ ಜುಲೈ 6ಕ್ಕೆ ಸಲಾರ್ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಲಿದೆ. ಬೆಳಿಗ್ಗೆ 5:12ಕ್ಕೆ ಟೀಸರ್ ರಿವೀಲ್ ಮಾಡುವುದಾಗಿ ಚಿತ್ರತಂಡ ಬಿಗ್ ಅಪ್‌ಡೇಟ್ ನೀಡಿದೆ. ಈ ಮೂಲಕ ಅಭಿಮಾನಿಗಳಿಗೆ ಸಿಗಲಿದೆ ಸೂಪರ್‌ ಸರ್ಪ್ರೈಸ್. ಸಲಾರ್‌ಗಾಗಿ ಕಾಯುತ್ತಿದ್ದ ಫ್ಯಾನ್ಸ್ ಟೀಮ್ ಸಿಹಿಸುದ್ದಿ ನೀಡಿದೆ. ಜೊತೆಗೆ ಇದೇ ಸೆ.28ಕ್ಕೆ ತೆರೆಗೆ ಬರಲು ಸಲಾರ್‌ ಸಿದ್ಧವಾಗಿದೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೆಸತ್ತಿರುವ ಪ್ರಭಾಸ್‌ಗೆ(Prabhas) ‘ಸಲಾರ್’ ಸಿನಿಮಾ ಮೂಲಕ ಗೆಲುವು ಸಿಗುತ್ತಾ? ವೃತ್ತಿರಂಗದಲ್ಲಿ ಬಾಹುಬಲಿ ಹೀರೋಗೆ ಈ ಸಿನಿಮಾ ತಿರುವು ನೀಡುತ್ತಾ ಕಾಯಬೇಕಿದೆ. ಈ ಬಾರಿ ಪ್ರಭಾಸ್- ಪ್ರಶಾಂತ್ ನೀಲ್ ಕಾಂಬೋ ಅದೆಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತಿದೆ ಕಾದು ನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್