ಜ್ಯೂನಿಯರ್ ಚಿತ್ರಕ್ಕೆ ಪ್ರಶಾಂತ್ ನೀಲ್ ಜೈ, ಸದ್ಯಕ್ಕಿಲ್ಲ ಕೆಜಿಎಫ್ 3

Public TV
2 Min Read

ನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ‘ಕೆಜಿಎಫ್ 3’ (KGF 3) ಸಿನಿಮಾದ ಬಗ್ಗೆ ಮೊನ್ನೆಯಷ್ಟೇ ಅಧಿಕೃತವಾಗಿ ಹೇಳಿಕೊಂಡಿತ್ತು. ಸಲಾರ್ ಚಿತ್ರದ ರಿಲೀಸ್ ಡೇಟ್ ಘೋಷಣೆಯ ದಿನ ಕಳುಹಿಸಿದ ಮಾಧ್ಯಮ ಹೇಳಿಕೆಯಲ್ಲಿ ಮುಂದಿನ ಚಿತ್ರಗಳ ಲಿಸ್ಟ್ ನಲ್ಲಿ ‘ಕೆಜಿಎಫ್ 3’ ಸಿನಿಮಾವನ್ನೂ ಘೋಷಣೆ ಮಾಡಿತ್ತು. ಸಲಾರ್ ಸಿನಿಮಾ ಮುಗಿದ ನಂತರ ಕೆಜಿಎಫ್ 3 ಚಿತ್ರವನ್ನು ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿತ್ತು. ಆದರೆ, ಸದ್ಯಕ್ಕೆ ಆ ಸಿನಿಮಾವನ್ನು ಮಾಡುತ್ತಿಲ್ಲ ಎನ್ನುವುದು ನಿನ್ನೆ ಬಹಿರಂಗವಾಗಿದೆ.

ಜ್ಯೂ.ಎನ್‌ಟಿಆರ್ (Jr.Ntr) ನಟನೆಯ 31ನೇ ಚಿತ್ರಕ್ಕೆ ‘ಕೆಜಿಎಫ್’ (KGF) ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ (Prashanth Neel) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬೋದಲ್ಲಿ ಸಿನಿಮಾ ಬರುವ ಬಗ್ಗೆ ಕಳೆದ ವರ್ಷ ಅನೌನ್ಸ್ ಮಾಡಿದ್ದರು. ಇದೀಗ ಶೂಟಿಂಗ್‌ ಶುರುವಾಗುವ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ. ಜೂನ್ 2024ನಲ್ಲಿ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕೆಜಿಎಫ್ 3 ಗಿಂತ ಮುಂಚೆ ಪ್ರಶಾಂತ್ ನೀಲ್ ಜ್ಯೂನಿಯರ್ ಎನ್.ಟಿ.ಆರ್ ಜೊತೆ ಸಿನಿಮಾ ಮಾಡಲಿದ್ದಾರೆ.

ಕೆಜಿಎಫ್, ಕೆಜಿಎಫ್ 2 ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಜ್ಯೂ.ಎನ್‌ಟಿಆರ್ (Jr.Ntr) ಜೊತೆ ಕೈಜೋಡಿಸಿದ್ದು, ಜ್ಯೂ.ಎನ್‌ಟಿಆರ್ 31ನೇ ಸಿನಿಮಾ ಮುಂದಿನ ವರ್ಷ ಶೂಟಿಂಗ್‌ ಶುರು ಮಾಡುವುದಾಗಿ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತಿಳಿಸಿದೆ.

ಸದ್ಯ ಜ್ಯೂ.ಎನ್‌ಟಿಆರ್ ‘ದೇವರ’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಪ್ರಶಾಂತ್ ನೀಲ್ ಅವರು ಪ್ರಭಾಸ್ ಜೊತೆಗಿನ ‘ಸಲಾರ್’ (Salaar) ಚಿತ್ರೀಕರಣದತ್ತ ಗಮನ ನೀಡುತ್ತಿದ್ದಾರೆ. ಈ 2 ಚಿತ್ರಗಳ ಬಳಿಕ ಜ್ಯೂ.ಎನ್‌ಟಿಆರ್-ನೀಲ್ ಕಾಂಬಿನೇಷನ್ ಚಿತ್ರ ಶುರುವಾಗಲಿದೆ. ಸಲಾರ್‌ ಬಳಿಕ ಜ್ಯೂ.ಎನ್‌ಟಿಆರ್‌ ಜೊತೆಗಿನ ಚಿತ್ರವನ್ನ ಕೈಗೆತ್ತಿಕೊಳ್ಳುತ್ತಾರೆ ‌’ಕೆಜಿಎಫ್’ ಡೈರೆಕ್ಟರ್‌. ಇಬ್ಬರು ಪ್ರತಿಭಾವಂತರು ಒಂದೇ ಸಿನಿಮಾದಲ್ಲಿ ಕೆಲಸ ಮಾಡ್ತಿರೋದ್ರಿಂದ ಅಭಿಮಾನಿಗಳಿಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

 

ಕಳೆದ ವರ್ಷ ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ವಿಶೇಷ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹೊಸ ಪ್ರಾಜೆಕ್ಟ್ ಬಗ್ಗೆ ನಿರ್ಮಾಣ ಸಂಸ್ಥೆ ಅನೌನ್ಸ್ ಮಾಡಿತ್ತು. ಜ್ಯೂ.ಎನ್‌ಟಿಆರ್ ಕಪ್ಪು ಬಣ್ಣದ ಶೇಡ್‌ನಲ್ಲಿ ರಾ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್