ಪಾಟ್ನಾ: ಸಿಎಂ ನಿತೀಶ್ ಕುಮಾರ್ (Nitish Kumar) ನೇತೃತ್ವದ ಸರ್ಕಾರವು ವಿಶ್ವಬ್ಯಾಂಕ್‌ನ 14,000 ಕೋಟಿ ರೂ. ಸಾಲದ ಹಣವನ್ನು ಬಿಹಾರ ಚುನಾವಣೆಗಾಗಿ ಬಳಸಿಕೊಂಡಿದೆ ಎಂದು ಪ್ರಶಾಂತ್ ಕಿಶೋರ್ (Prashant Kishor) ಪಕ್ಷವು ಆರೋಪಿಸಿದೆ.
ಜನ ಸುರಾಜ್ ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದೆ. ಈ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನ ಸುರಾಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್, ವಿಶ್ವಬ್ಯಾಂಕ್ ಸಾಲವಾಗಿ ಕೊಟ್ಟಿದ್ದ ಹಣವನ್ನು ಸರ್ಕಾರ ಉಚಿತ ಕೊಡುಗೆಗಳಿಗೆ ಬಳಸಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನ.19ಕ್ಕೆ ನಿತೀಶ್ ಪ್ರಮಾಣ ವಚನ ಸಾಧ್ಯತೆ
ಎರಡು ಹಂತದ ಚುನಾವಣೆಗೆ ಮುನ್ನ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ಹಣವನ್ನು ವರ್ಗಾಯಿಸಿದ ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ’ಯನ್ನು ಉದಯ್ ಸಿಂಗ್ ಉಲ್ಲೇಖಿಸಿದ್ದಾರೆ. ‘ಮಾದರಿ ನೀತಿ ಸಂಹಿತೆ ಇದ್ದರೂ, ಮತದಾನ ನಡೆಯುವ ಒಂದು ದಿನದ ಮೊದಲು ಜನರು ಹಣವನ್ನು ಪಡೆದಿರುವುದು ಇದ್ದದ್ದು ಇದೇ ಮೊದಲು. ಮಹಿಳೆಯರನ್ನು ಓಲೈಸಲು ಇದು ಸಾಕಾಗಿತ್ತು ಎಂದು ಟೀಕಿಸಿದ್ದಾರೆ.
ಸಾರ್ವಜನಿಕ ಹಣವನ್ನು ವೋಟ್‌ಗಾಗಿ ದುಂದುವೆಚ್ಚ ಮಾಡದೇ ಇದ್ದಿದ್ದರೆ, ಬಿಹಾರದಲ್ಲಿ ಎನ್‌ಡಿಎ ನಾಶವಾಗುತ್ತಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿತೀಶ್ ಸರ್ಕಾರ ವಿಶ್ವಬ್ಯಾಂಕ್‌ನ 14,000 ಕೋಟಿ ಸಾಲದ ಹಣ ಸೇರಿ 40,000 ಕೋಟಿ ಖರ್ಚು ಮಾಡಿದೆ: ಜನ್ ಸುರಾಜ್

