ವಿಜಯ್‌ TVK ಕಾರ್ಯಕ್ರಮ| #GetOutModi, #GetOutStalin ಫಲಕಕ್ಕೆ ಸಹಿ ಹಾಕದ ಪ್ರಶಾಂತ್‌ ಕಿಶೋರ್‌

Public TV
2 Min Read

ಚೆನ್ನೈ: ನಟ ವಿಜಯ್‌ (Vijay) ಹುಟ್ಟು ಹಾಕಿರುವ ತಮಿಳಗ ವೆಟ್ರಿ ಕಳಗಂ (TVK) ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ (Prashanth Kishore) ಕಾಣಿಸಿಕೊಂಡಿದ್ದಾರೆ.

ಇಂದು ಮಹಾಬಲಿಪುರಂನಲ್ಲಿ ಟಿವಿಕೆ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. 2026ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಎಂದೇ ಕರೆಯಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಜನ ಸೂರಜ್‌ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Narendra Modi) ಮತ್ತು ತಮಿಳುನಾಡು ಸಿಎಂ ಸ್ಟಾಲಿನ್‌ (CM Stalin) ಗುರಿಯಾಗಿಸಿ #GetOut, #GetOutModi ಹಾಗೂ #GetOutStalin ಹೆಸರಿನ ಫಲಕಗಳಿಗೆ ವಿಜಯ್‌ ಸಹಿ ಹಾಕಿದರು. ಆದರೆ ಪ್ರಶಾಂತ್‌ ಕಿಶೋರ್‌ ಈ ಫಲಕಗಳಿಗೆ ಸಹಿ ಹಾಕಿಲ್ಲ. ಸಹಿ ಹಾಕಲು ನಿರಾಕರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೇಂದ್ರ ಮತ್ತು ತಮಿಳುನಾಡು ನಡುವೆ ಹಿಂದಿ ಹೇರಿಕೆ ಸಂಘರ್ಷ ಸಂಘರ್ಷವನ್ನು ಎಲ್‌ಕೆಜಿ ಮಕ್ಕಳ ಗಲಾಟೆಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.

ಎನ್‌ಇಪಿ, ತ್ರಿಭಾಷಾ ಸೂತ್ರ ಜಾರಿ ವಿಚಾರದಲ್ಲಿ ಎರಡು ಪಕ್ಷಗಳ ಮಧ್ಯೆ ಯುದ್ಧ ನಡೀತಿದೆ. ತಮಿಳುನಾಡನ್ನು (Tamil Nadu) ರಣರಂಗ ಮಾಡುತ್ತಿದ್ದಾರೆ. ಎರಡೂ ಪಕ್ಷಗಳು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಷ್‌ಟ್ಯಾಗ್ ಗೇಮ್ ಆಡುತ್ತಿವೆ. ಜನರನ್ನು ಹಾದಿತಪ್ಪಿಸುವ ಪ್ರಯತ್ನ ನಡೆಸಿವೆ. ಅವರ ನಡುವಿನ ಸಂಘರ್ಷ ಚಿಕ್ಕಮಕ್ಕಳ ಗಲಾಟೆಯಂತಿದೆ ಎಂದಿದ್ದಾರೆ.

ಡಿಎಂಕೆ ಮಾದರಿಯಲ್ಲೇ ತ್ರಿಭಾಷಾ ವಿಧಾನವನ್ನು ಖಂಡಿಸಿದ ಅವರು, 2400 ಕೋಟಿ ರೂ. ನೀಡುವುದಿಲ್ಲ ಎಂದು ಹೇಳಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಾತನ್ನು ಟೀಕಿಸಿದ್ದಾರೆ. ಇದು ಒಕ್ಕೂಟ ಸ್ಪೂರ್ತಿಗೆ ವಿರುದ್ಧ ಎಂದು ವ್ಯಾಖ್ಯಾನಿಸಿದ್ದಾರೆ.

Share This Article