ಪ್ರಶಾಂತ್ ಹತ್ಯೆ ಕೇಸ್ – ಆರೋಪಿಗಳು ತಂಗಿದ್ದ ಲಾಡ್ಜ್ ಸೀಜ್

Public TV
1 Min Read

ಹಾಸನ: ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಹಾಗೂ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಆರೋಪಿಗಳು ತಂಗಿದ್ದ ಲಾಡ್ಜ್ ಸೀಜ್ ಮಾಡಲಾಗಿದೆ.

ನಗರದ ಡಬಲ್ ಟ್ಯಾಂಕ್ ರಸ್ತೆಯ ಹಳೇ ಮಟನ್ ಮಾರ್ಕೆಟ್ ಬಳಿ ಇರುವ ಖಾಸಗಿ ಲಾಡ್ಜ್‌ಗೆ ಕಳೆದ ರಾತ್ರಿ ಡಿವೈಎಸ್ಪಿ ಉದಯಬಾಸ್ಕರ್ ನೇತೃತ್ವದಲ್ಲಿ ದಾಳಿ ಮಾಡಿ ಸೀಝ್ ಮಾಡಲಾಗಿದೆ. ಹಂತಕರು ಕೊಲೆಗೂ ಮುನ್ನ ಲಾಡ್ಜ್‌ನಲ್ಲಿ ಸೇರಿ ಪ್ಲಾನ್ ಮಾಡಿದ್ದರು. ಅಲ್ಲಿಯೇ ಪಾರ್ಟಿ ಕೂಡಾ ಮಾಡಿದ್ದರು ಎಂಬ ವಿಚಾರವನ್ನು ಬಂಧಿಯಾಗಿರುವ ವಿಶ್ವ ಹಾಗೂ ಸಂತೋಷ್ ಬಾಯ್ಬಿಟ್ಟಿದ್ದರು. ಆರೋಪಿಗಳ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಹಾಸನ ಡಿವೈಎಸ್ಪಿ ಉದಯಬಾಸ್ಕರ್ ನೇತೃತ್ವದ ತಂಡ ದಾಳಿ ಮಾಡಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಂಪೂರ್ಣ ಪಠ್ಯ ಪುಸ್ತಕ ಪರಿಷ್ಕರಣೆ ಕೈ ಬಿಡೋಲ್ಲ: ಬಿ.ಸಿ.ನಾಗೇಶ್

ಲಾಡ್ಜ್‌ನ ಸಿಸಿಟಿವಿ ಪರಿಶೀಲನೆ ನಡೆಸಿ, ಲಾಡ್ಜ್‌ನಲ್ಲಿದ್ದ ಎಲ್ಲರನ್ನೂ ಖಾಲಿ ಮಾಡಿಸಿ ಬೀಗ ಜಡಿಯಲಾಗಿದೆ. ದಾಳಿ ವೇಳೆ ಲಾಡ್ಜ್‌ನಲ್ಲಿ ಸರಿಯಾಗಿ ದಾಖಲೆ ಇಡದೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತವಾಗ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರಕರಣವನ್ನ ಸಿಐಡಿಗೆ ವಹಿಸಿದ್ದು, ಸಿಐಡಿ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ತನಿಖೆಯನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ

ಹತ್ಯೆ ಕೇಸ್‍ನ ಪ್ರಮುಖ ಆರೋಪಿ ಹಾಗೂ ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಪ್ರಮುಖ ಆರೋಪಿ ಸಿಕ್ಕಿದ ಬಳಿಕ ಹತ್ಯೆಗೆ ನಿಖರ ಕಾರಣ ತಿಳಿಯಲಿದೆ. ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಹಾಸನ ನಗರಸಭೆ ಸದಸ್ಯ, ಜೆಡಿಎಸ್ ಮುಖಂಡ ಪ್ರಶಾಂತ್ ನಾಗರಾಜ್‍ರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *