ಚಿಟ್ಟೆಯಂತೆ ಮಿಂಚಿದ ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್

Public TV
2 Min Read

ನ್ನಡತಿ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಹಸಿರು ಬಣ್ಣದ ಗೌನ್ ಧರಿಸಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಚಿಟ್ಟೆಯಂತೆ ಪೊರ್ಕಿ ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

ಎಂ.ಡಿ ಶ್ರೀಧರ್ ನಿರ್ದೇಶನದ ‘ಪೊರ್ಕಿ’ (Porki) ಸಿನಿಮಾ ಮೂಲಕ ಪ್ರಣಿತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡರು. ಇದಾದ ಬಳಿಕ ಟಾಲಿವುಡ್‌ಗೆ ಹಾರಿದ್ರು. ತೆಲುಗು ಸೇರಿದಂತೆ ಹಿಂದಿ ಚಿತ್ರದಲ್ಲೂ ನಟಿಸಿ ಬಂದರು. ಎಂದೂ ಕನ್ನಡದ ಮೇಲೆ ಕನ್ನಡ ಸಿನಿಮಾದ ಮೇಲಿನ ಪ್ರೀತಿ ಪ್ರಣಿತಾಗೆ ಕಮ್ಮಿಯಾಗಿಲ್ಲ.

ಸೌತ್‌ನಲ್ಲಿ ಮಹೇಶ್ ಬಾಬು, ಸೂರ್ಯ, ಕಾರ್ತಿ, ಸಿದ್ಧಾರ್ಥ್, ಜ್ಯೂ.ಎನ್‌ಟಿಆರ್ ಜೊತೆ ಪ್ರಣಿತಾ ತೆರೆಹಂಚಿಕೊಂಡರು. ಬಾಲಿವುಡ್‌ನಲ್ಲಿ ಶಿಲ್ಪಾ ಶೆಟ್ಟಿ ಜೊತೆ ಪ್ರಣಿತಾ ಮುಖ್ಯಭೂಮಿಕೆಯಲ್ಲಿ ನಟಿಸಿದರು. ಮದುವೆಯ ಬಳಿಕ ನಟನೆಗೆ ವಿರಾಮ ಹೇಳಿದ್ದ ನಟಿ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.

2021ರಲ್ಲಿ ಉದ್ಯಮಿ ನಿತಿನ್(Nithin)  ಜೊತೆ ಪ್ರಣಿತಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಮುದ್ದಾದ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ರು. ಪುತ್ರಿ ಅರ್ನಾ (Arna) ಪಾಲನೆಯಲ್ಲಿ ಬ್ಯುಸಿಯಾದರು. ನಟನೆಯಿಂದ ಅಂತರ ಕಾಯ್ದುಕೊಂಡರು. ಈಗ ಸಿನಿಮಾ- ವೈಯಕ್ತಿಕ ಜೀವನ ಎರಡನ್ನ ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ.

ಮಲಯಾಳಂ ಖ್ಯಾತ ನಟ ದಿಲೀಪ್‌ಗೆ (Dileep) ನಾಯಕಿಯಾಗಿ ಪ್ರಣಿತಾ ಮಾಲಿವುಡ್‌ಗೆ (Mollywood) ಲಗ್ಗೆ ಇಟ್ಟಿದ್ದಾರೆ. ದಿಲೀಪ್‌ಗೆ ಪ್ರಣಿತಾ- ತಮನ್ನಾ ಭಾಟಿಯಾ ಜೊತೆಯಾಗಿದ್ದಾರೆ. ಈಗಾಗಲೇ ಕೇರಳದಲ್ಲಿ ಪ್ರಣಿತಾ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ಮದುವೆಯಾಗಿ ಮಕ್ಕಳಾದ್ಮೇಲೆ ಸಿನಿಮಾರಂಗಲ್ಲಿ ನಾಯಕಿಯರು ಆಕ್ಟೀವ್ ಆಗೋದು ತುಂಬಾ ಕಮ್ಮಿ. ಆದರೆ ಪ್ರಣಿತಾ ಮಗುವಾದ್ಮೇಲೆ ಮತ್ತಷ್ಟು ಬೋಲ್ಡ್ & ಹಾಟ್ ಆಗಿದ್ದಾರೆ. ಫಿಟ್‌ನೆಸ್ ಕಡೆ ಗ್ಲಾಮರ್ ಕಡೆ ಮತ್ತಷ್ಟು ಗಮನ ವಹಿಸುತ್ತಿದ್ದಾರೆ. ಮಗಳ ಆರೈಕೆ, ಸಿನಿಮಾ ಕೆಲಸ ನಡುವೆ ನಟಿ ಪ್ರಣಿತಾ ನ್ಯೂ ಫೋಟೋಶೂಟ್ ಮಾಡಿಸಿದ್ದಾರೆ. ಹಸಿರು ಬಣ್ಣದ ಡ್ರೆಸ್ ಧರಿಸಿ, ಚಿಟ್ಟೆಯಂತೆ ಮಿಂಚಿದ್ದಾರೆ. ಈ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

Share This Article