ವಿಶ್ವದೆಲ್ಲೆಡೆ ರಾಮ ನಾಮ ಸ್ಮರಣೆ – ಜಗತ್ತಿನ 60 ಕ್ಕೂ ಹೆಚ್ಚು ದೇಶಗಳಲ್ಲಿ ರಾಮೋತ್ಸವ

Public TV
1 Min Read

– ಎಲ್ಲೆಲ್ಲಿ ಹೇಗಿತ್ತು ಆಚರಣೆ?

ನ್ಯೂಯಾರ್ಕ್: ಜಗತ್ತಿನ 60 ಕ್ಕೂ ಹೆಚ್ಚು ದೇಶಗಳಲ್ಲಿ, ಶ್ರೀರಾಮ ಸ್ಮರಣೆ, ರಾಮೋತ್ಸವ (Ayodhya Ram Mandir Consecration) ಸಂಭ್ರಮ-ಸಡಗರ ಕಂಡು ಬಂತು. ವಿಶ್ವದೆಲ್ಲೆಡೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಲೈವ್ ಆಗಿ ಬಿತ್ತರಿಸಲಾಗಿದೆ. ಎಲ್ಲೆಲ್ಲಿ ಹೇಗಿತ್ತು ರಾಮೋತ್ಸವ ವೈಭವ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಟೈಮ್ಸ್ ಸ್ಕ್ವೇರ್‌, ನ್ಯೂಯಾರ್ಕ್: ಟೈಮ್ಸ್ ಸ್ಕ್ವೇರ್‌ನ ದೊಡ್ಡ ಬಿಲ್‌ಬೋರ್ಡ್‌ನಲ್ಲಿ ಶ್ರೀರಾಮ ರಾರಾಜಿಸಿದ್ದಾನೆ. ಸಾಂಪ್ರದಾಯಿಕ ಧಿರಿಸು ಧರಿಸಿ ಅನಿವಾಸಿ ಭಾರತೀಯರು ರಾಮಧ್ವಜ ಹಿಡಿದು ಹಬ್ಬ ಮಾಡಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

ಕ್ಯಾಲಿಫೋರ್ನಿಯಾ, ಅಮೆರಿಕ: ಕ್ಯಾಲಿಫೋರ್ನಿಯಾದಲ್ಲಂತೂ ಹಿಂದೂ ಧರ್ಮೀಯರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ನೂರಾರು ಮಂದಿ ಒಂದೆಡೆ ಸೇರಿ ರಾಮಮಂತ್ರ ಜಪಿಸುತ್ತಾ ನೃತ್ಯ ಮಾಡುತ್ತಾ ಸಂಭ್ರಮಿಸಿದರು. ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಮಣಕವಾಡದ ನಿವಾಸಿಗಳಾಗಿರುವ ಶಶಿಧರ್ ಚಾಕಲಬ್ಬಿ, ಸಾನ್ವಿ ದಂಪತಿ ಅಮೆರಿದ ಸನ್‌ಡಿಯಾನ್‌ನಲ್ಲಿ ರಾಮೋತ್ಸವ ಮಾಡಿದ್ದಾರೆ. ಅನಿವಾಸಿ ಭಾರತೀಯರಿಗೆ ಅನ್ನಪ್ರಸಾದ ವಿತರಿಸಿದ್ದಾರೆ.

ಐಫೆಲ್ ಟವರ್, ಪ್ಯಾರಿಸ್: ಪ್ಯಾರಿಸ್‌ನ ಐಫೆಲ್ ಟವರ್ ಬಳಿ ಜಮಾಯಿಸಿದ ನೂರಾರು ರಾಮಭಕ್ತರು ಭಾರತದ ಧ್ವಜ, ರಾಮಧ್ವಜ ಪ್ರದರ್ಶಿಸುತ್ತಾ ರಾಮನ ಜಪ ಮಾಡಿದರು. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!

ಖೊರೆಟರೋ, ಮೆಕ್ಸಿಕೋ: ಬಾಲರಾಮನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲೇ ಮೆಕ್ಸಿಕೋ ದೇಶದ ಖೊರೆಟರೋ ನಗರದಲ್ಲಿ ಮೊದಲ ರಾಮಮಂದಿರ ಶಾಸ್ತ್ರೋಕ್ತವಾಗಿ ಲೋಕಾರ್ಪಣೆಗೊಂಡಿದೆ.

ನೈರೂಬಿ, ಕೀನ್ಯಾ: ಕೀನ್ಯಾದ ನೈರೂಬಿಯಲ್ಲಿ ನೆಲೆಸಿರುವ ಭಾರತೀಯರು ನಗರದ ತುಂಬಾ ರಾಮ ಮೆರವಣಿಗೆ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

ಬ್ಯಾಂಕಾಕ್, ಥೈಲ್ಯಾಂಡ್: ಬ್ಯಾಂಕಾಕ್‌ನಲ್ಲಿರುವ ಭಾರತೀಯ ಹಿಂದೂಗಳು ಮಧ್ಯರಾತ್ರಿಯೇ ರಸ್ತೆಗೆ ಇಳಿದು ಕೇಸರಿ ಧ್ವಜ ಹಾರಿಸಿ, ಜೈ ಶ್ರೀರಾಮ್ ಎನ್ನುತ್ತಾ ಸಂಭ್ರಮಿಸಿದರು.

ಮಾರಿಷಸ್: ಹಿಂದೂ ಧರ್ಮ ಮೂಲಗಳು ಇರುವ ಮಾರಿಷಸ್‌ನಲ್ಲಿ ರಾಮಭಕ್ತರು ಬೃಹತ್ ಕಾರ್ ರ‍್ಯಾಲಿ ನಡೆಸಿದರು. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!

Share This Article