ಶ್ರೀರಾಮನ ಬಗ್ಗೆ ಕೆ.ಎಸ್ ಭಗವಾನ್ ಹೇಳಿಕೆಗೆ ಮುತಾಲಿಕ್ ಹೀಗಂದ್ರು

Public TV
1 Min Read

ಬೆಳಗಾವಿ: ಮೈಸೂರಿನಲ್ಲಿ ಸಾಹಿತಿ ಭಗವಾನ್ ರಾಮನ ಕುರಿತು ನೀಡಿರುವ ಹೇಳಿಕೆ ರಾಮಾಯಣವನ್ನು ಬರೆದಿರುವ ವಾಲ್ಮೀಕಿ ಅವರಿಗೆ ಮಾಡಿರುವ ಅಪಮಾನ. ಭಗವಾನ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಗ್ರಹಿಸಿದ್ದಾರೆ.

ಭಗವಾನ್ ಹೇಳಿಕೆ ಕುರಿತು ಇಂದು ಪ್ರತಿಕ್ರಿಯಿಸಿದ ಮುತಾಲಿಕ್, ರಾಮನ ಬಗ್ಗೆ ಕೀಳಾಗಿ ಮಾತನಾಡಿರುವ ಭಗವಾನ್ ರಾಮಾಯಣವನ್ನು ಬರೆದಿರುವ ವಾಲ್ಮೀಕಿಗೆ ಅಪಮಾನವನ್ನು ಮಾಡಿದ್ದಾರೆ. ವಾಲ್ಮೀಕಿ ಜನಾಂಗದವರು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು. ದಲಿತ ಜನಾಂಗಕ್ಕೆ ಅಪಮಾನ ಮಾಡಿದ್ದು ಸರಿಯಲ್ಲ. ಭಗವಾನ್ ಭಗವಾನ ಅಲ್ಲ ಅವನೊಬ್ಬ ಸೈತಾನ್ ಎಂದು ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ಮಹಿಷ ದಸರಾ ಆಚರಣೆ ಮಾಡುವವರು ರಕ್ಷಸ ಕುಲದವರು, ರಾವಣನ ವಂಶಸ್ಥರು. ಮಹಿಷ ದಸರಾವನ್ನು ಆಚರಣೆ ಮಾಡುವುದಕ್ಕೆ ಶ್ರೀರಾಮಸೇನೆಯ ವಿರೋಧವಿದೆ ಎಂದು ಹೇಳಿದರು. ರೋಹಿಂಗ್ಯಾ ಮುಸ್ಮಿಮರಿಗೆ ಭಾರತದಲ್ಲಿ ಆಶ್ರಯವನ್ನು ನೀಡುವುದಕ್ಕೆ ಭಾರತದ ಮುಸ್ಮಿಮರು ಒತ್ತಾಯ ಮಾಡುವುದು ಮೂರ್ಖತನ ಅಂದ್ರು.

ಎರಡು ದಿನಗಳ ಹಿಂದೆ ಮೈಸೂರಿನ ದಸರಾ ಪ್ರಯುಕ್ತ ನಡೆದ ವಿಶಿಷ್ಟ ಕವಿ ಗೋಷ್ಠಿಯಲ್ಲಿ ಪ್ರೋ. ಕೆಎಸ್ ಭಗವಾನ್ ಮಾತನಾಡಿ, ರಾಮನ ನಿಜ ಬಣ್ಣ ವಾಲ್ಮೀಕಿ ಬರೆದಿರುವ ರಾಮಾಯಾಣದಲ್ಲಿ ತಿಳಿದು ಬಂದಿದೆ. ವಾಲ್ಮೀಕಿ ಎಲ್ಲಿಯೂ ರಾಮನನ್ನು ದೇವರು ಎಂದು ಕರೆದಿಲ್ಲ. ಬ್ರಾಹ್ಮಣರ ಮಾತು ಕೇಳಿ ರಾಮ ಶಂಭೂಕನ ತಲೆಯನ್ನು ಕತ್ತರಿಸಿದ. ತುಂಬು ಗರ್ಭಿಣಿಯನ್ನು ಕಾಡಿಗೆ ಕಳುಹಿಸಿದ. ಇಂತಹ ವ್ಯಕ್ತಿಗೆ ರಾಮಮಂದಿರ ನಿರ್ಮಿಸುವ ಮೊದಲು ಯೋಚಿಸಿ ಎಂದು ಹೇಳಿ ವಿವಾದದ ಕಿಡಿ ಹಬ್ಬಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *