ಜಮೀರ್ ಸುಮ್ಮನಿದ್ರೆ ಅದೇ ದೊಡ್ಡ ಸೇವೆ: ಜೋಶಿ

Public TV
1 Min Read

-ಬಾಂಬ್‌ ಕಟ್ಟಿಕೊಂಡು ಯುದ್ಧಕ್ಕೆ ಪಾಕ್‌ ಗಡಿಗೆ ಹೋಗ್ತೀನಿ ಅಂದಿದ್ದ ಜಮೀರ್‌ಗೆ ಟಾಂಗ್‌ 

ವಿಜಯಪುರ: ಬಾಂಬ್ ಕಟ್ಟಿಕೊಂಡು ಪಾಕ್ (Pakistan) ಗಡಿಗೆ ಹೋಗುತ್ತೇನೆ ಎಂದ ಸಚಿವ ಜಮೀರ್ ಅಹ್ಮದ್ (Zameer Ahmed) ಶಾಂತವಾಗಿದ್ದರೆ ಸಾಕು. ನೀವೇನೂ ಮಾಡೋದು ಬೇಡ. ಸುಮ್ಮನಿದ್ದರೆ ಸಾಕು. ಮಿಲಿಟರಿಯನ್ನು ನಂಬಿ ಸುಮ್ಮನಿರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಜಮೀರ್‌ಗೆ ಟಾಂಗ್ ಕೊಟ್ಟಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮ್ಮ ಭಾಷಣ ಬೇಡ, ನೀವು ಹೋಗುವುದೂ ಬೇಡ. ಸೈನ್ಯದ ಶಕ್ತಿ, ಸೈನಿಕರು, ಇಂಟಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ. ಹೇಳಿಕೆಗಳನ್ನ ಕೊಡದೇ ಬಾಯಿ ಮುಚ್ಚಿಕೊಂಡಿದ್ದರೆ ಸಾಕು. ಜಮೀರ್ ಶಾಂತವಾಗಿರೋದೇ ದೇಶಕ್ಕೆ ಮಾಡುವ ದೊಡ್ಡ ಸೇವೆ. ಜಮೀರ್ ದೊಡ್ಡ ತ್ಯಾಗಕ್ಕೆ ಹೊರಟಿದ್ದಾರೆ, ಅವರಂತಹ ದೊಡ್ಡ ತ್ಯಾಗದವರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಶಿವಾನಂದ ಪಾಟೀಲ್ ಅವರೇ ನನಗೆ ಹೇಳೋಕೆ ನೀವ್ಯಾರು? – ಎಂ.ಬಿ ಪಾಟೀಲ್ ಗರಂ

ನೀವು ನಿಮ್ಮ ಪಕ್ಷದವರು ಶಾಂತಿಯಿಂದ ಇರಿ. ಜಮೀರ್, ಸಂತೋಷ್ ಲಾಡ್, ಖರ್ಗೆ, ಸಿದ್ದರಾಮಯ್ಯ ಸುಮ್ಮನಿದ್ದರೆ ಸಾಕು. ಡಿಕೆ ಶಿವಕುಮಾರ್ ಟೆರೆರಿಸ್ಟ್‌ಗಳನ್ನು ಬ್ರದರ್ ಎನ್ನದಿದ್ದರೆ ಸಾಕು. ಸೇನೆ ಎಲ್ಲವನ್ನೂ ನಿಭಾಯಿಸುತ್ತದೆ. ಸೈನ್ಯದ, ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸದೇ ಸುಮ್ಮನಿದ್ದರೆ ಸಾಕು ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಪಾಕ್‌ನಿಂದ ಆಮದಾಗುವ ಎಲ್ಲಾ ವಸ್ತುಗಳಿಗೆ ನಿರ್ಬಂಧ ವಿಧಿಸಿದ ಭಾರತ

Share This Article