ಜೈಲಲ್ಲಿರೋ ಪ್ರಜ್ವಲ್ ಹುಟ್ಟುಹಬ್ಬ – ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ರೇವಣ್ಣ

Public TV
1 Min Read

ಚಿಕ್ಕಮಗಳೂರು: ರೇಪ್ ಕೇಸ್‍ನಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹುಟ್ಟು ಹಬ್ಬದ ಹಿನ್ನೆಲೆ, ಶೃಂಗೇರಿ ಶಾರದಾಂಬೆಗೆ (Sringeri Sharadamba Temple) ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸೋಮವಾರ ರಾತ್ರಿಯೇ ಬಂದು ಶೃಂಗೇರಿಯಲ್ಲಿ ವಾಸ್ತವ್ಯ ರೇವಣ್ಣ ಹೂಡಿದ್ದ ಹೂಡಿದ್ದರು. ಶೃಂಗೇರಿ ಗುರುಗಳ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇಂದು (ಆ.5) ಬೆಳ್ಳಂ ಬೆಳಗ್ಗೆಯೇ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಬೆಂಗಳೂರಿಗೆ ಹೊರಟಿದ್ದಾರೆ. ದೇವೇಗೌಡರ ಕುಟುಂಬ ಸುಮಾರು 50 ವರ್ಷಗಳಿಂದ ಶಾರದಾಂಬೆಯ ಭಕ್ತರಾಗಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಬಿಜೆಪಿ ಸರ್ಕಾರ 2023ರಲ್ಲೇ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ: ರಾಮಲಿಂಗ ರೆಡ್ಡಿ

ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಸರ್ಕಾರ ಉಳಿಸಿಕೊಳ್ಳಲು ರೇವಣ್ಣ ದೇವರ ಮೊರೆ ಹೋಗಿದ್ದರು. ಶೃಂಗೇರಿ ದೇವಾಲಯಕ್ಕೆ ಹೋಗಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲದೇ ಕೃತ್ತಿಮಿ ಶಕ್ತಿ ದೋಷ ಪರಿಹಾರಾರ್ಥ ಸುದರ್ಶನ ಹೋಮ ನಡೆಸಿದ್ದರು. ಅಲ್ಲದೇ ದೇವೇಗೌಡರು ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ನಂತರ ಸರ್ಕಾರಕ್ಕೆ ಸಂಚಕಾರ ಬಂದಾಗ ದೇವೇಗೌಡರು ಒಂದೊಂದು ಯಾಗ ನಡೆಸಿದ್ದರು. ಇದನ್ನೂ ಓದಿ: ಖಜಾನೆ ತುಂಬಿರೋ ಸರ್ಕಾರಕ್ಕೆ ಸಾರಿಗೆ ನೌಕರರ ಸಮಸ್ಯೆ ಪರಿಹರಿಸಲು ಕಷ್ಟ ಯಾಕೆ? ಆರಗ ಜ್ಞಾನೇಂದ್ರ

Share This Article