ನಾನು ಹಿಂಗೆಲ್ಲ ಬದುಕಿಲ್ಲ, ಮಲಗಲು ಒಳ್ಳೆ ರೂಮ್ ಕೊಡಿ: ಅಧಿಕಾರಿಗಳೊಂದಿಗೆ ಪ್ರಜ್ವಲ್ ಕಿರಿಕ್!

Public TV
2 Min Read

ಬೆಂಗಳೂರು: ಪೆನ್‌ಡ್ರೈವ್‌ ಕೇಸಲ್ಲಿ ಅರೆಸ್ಟ್ ಆಗಿರೋ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನ (Prajwal Revanna) ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ನೋಡ್ತಿದೆ. ಆದ್ರೆ, ಅಧಿಕಾರಿಗಳ ಯಾವುದೇ ಪ್ರಶ್ನೆಗೆ ಪ್ರಜ್ವಲ್ ರೇವಣ್ಣ ಉತ್ತರಿಸದೇ ಅಸಹಕಾರ ತೋರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆತ್ಯಾಚಾರ ಆರೋಪ ಪ್ರಕರಣದಲ್ಲಿ ಎಸ್‌ಐಟಿ (SIT) ಅಧಿಕಾರಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡದ ಪ್ರಜ್ವಲ್, ಕಿರಿಕ್‌ ತೆಗೆಯುತ್ತಿದ್ದಾರೆ. ವಾಶ್‌ರೂಮ್‌ಗಾಗಿ ಕಿರಿಕ್ ತೆಗೆಯುತ್ತಿದ್ದಾರೆ. ನಾನು ಹಿಂಗೆಲ್ಲ ಬದುಕಿಲ್ಲ ನನಗೆ ಸರಿಯಾದ ಟಾಯ್ಲೆಟ್ ಹಾಗೂ ಮಲಗಲು ರೂಮ್ ಕೊಡಿ ಅಂತಾ ಕಿರಿಕ್ ಮಾಡ್ತಿರೋದಾಗಿ ತಿಳಿದುಬಂದಿದೆ. ಈ ವೇಳೆ ಎಸ್‌ಐಟಿ ಅಧಿಕಾರಿಗಳು ಯಾವುದೇ ಆರೋಪಿಗಳಿಗೂ ರೂಮ್ ಅದೇ ಆಗಿರುತ್ತೆ. ನಿಮ್ಮ ತಂದೆಗೂ ಇದೇ ರೂಮ್ ಕೊಡಲಾಗಿತ್ತು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಮುಂದುವರಿದು, ಯಾರೋ ಆಗದೇ ಇರೋರು ಮಾಡಿದ್ದಾರೆ. ಇದರಲ್ಲಿ ನನ್ನದು ಏನು ತಪ್ಪಿಲ್ಲ. ನನ್ನ ರಾಜಕೀಯವಾಗಿ ಬೆಳೆಯಬಾರದು ಅಂತ ಸಂಚು ಮಾಡಿದ್ದಾರೆ. ರಾಜಕೀಯವಾಗಿ ಮುಗಿಸಲು ಪ್ಲಾನ್ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ ಎನ್ನುತ್ತಾ ಪ್ರಜ್ವಲ್‌ ಒಂದೇ ಉತ್ತರ ಕೊಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂ. ಗ್ರಾಮಾಂತರದಲ್ಲಿ ಹೆಚ್ಚಿನ ಭದ್ರತೆ ಒದಗಿಸಿ: ಆಯೋಗಕ್ಕೆ ಡಾ.ಮಂಜುನಾಥ್ ಪತ್ರ

ಸ್ಥಳ ಮಹಜರಿಗೆ ಸಿದ್ಧತೆ:
ಕಳೆದ ಎರಡು ದಿನಗಳಿಂದಲೂ ಎಸ್ಪಿ ಸುಮನ ಡಿ. ಪನ್ನೇಕರ್ ನೇತೃತ್ವದಲ್ಲಿ ಎಸ್‌ಐಟಿ ವಿಚಾರಣೆ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ, ಎಸ್‌ಐಟಿಯ ಯಾವುದೇ ಪ್ರಶ್ನೆಗೂ ಸರಿಯಾಗಿ ಉತ್ತರ ನೀಡದೇ ಇರುವ ಕಾರಣ ಸ್ಥಳ ಮಹಜರು ನಡೆಸಲು ಎಸ್‌ಐಟಿ ಅಧಿಕಾರಿಗಳು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಅಶ್ಲೀಲ ವೀಡಿಯೋ ಚಿತ್ರೀಕರಣ ನಡೆದಿತ್ತು ಎನ್ನಲಾದ ಎಂ.ಪಿ ನಿವಾಸದಲ್ಲಿ ಸ್ಥಳಮಹಜರು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಮೊದಲು ಬಳಸ್ತಿದ್ದ ಮೊಬೈಲ್ ಬಗ್ಗೆ ಗುಟ್ಟು ಬಿಟ್ಟುಕೊಡದ ಪ್ರಜ್ವಲ್, ವರ್ಷದ ಹಿಂದೆಯೇ ಮೊಬೈಲ್ ಕಳೆದುಹೋಗಿದೆ. ಈ ಬಗ್ಗೆ ದೂರು ಕೂಡ ಕೊಟ್ಟಿದ್ದೆ, ಈಗ ನನ್ನ ಬಳಿಯಿದ್ದ ಮೊಬೈಲ್‌ನ್ನು ಏರ್‌ಪೊರ್ಟ್‌ನಲ್ಲಿಯೇ ವಶಕ್ಕೆ ತಗೊಂಡ್ರಿ ಅಲ್ವಾ, ನನ್ನ ಬಳಿ ಬೇರೆ ಮೊಬೈಲ್ ಇಲ್ಲ ಅಂತ ವಿಚಾರಣೆಯಲ್ಲಿ ಹೇಳುತ್ತಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ:  ವಿಧಾನ ಪರಿಷತ್ ಚುನಾವಣೆ – ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿ 8 ಮಂದಿಗೆ ಟಿಕೆಟ್‌

Share This Article