ಪ್ರಜ್ವಲ್ ಕೇಳಿದಂತೆ ಸಮಯವಕಾಶ ಕೊಡಲು ಆಗಲ್ಲ: ಪರಮೇಶ್ವರ್

Public TV
1 Min Read

ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಕೇಳಿದಂತೆ ಸಮಯ ಕೊಡಲು ಆಗಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ವಕೀಲರ ಮೂಲಕ ಒಂದು ವಾರ ಸಮಯ ಕೇಳಿದ್ದಾರೆ. ಆದರೆ ಹಾಗೆ ಸಮಯವನ್ನ ತೆಗೆದುಕೊಳ್ಳಲು ಆಗಲ್ಲ. ಸೆಕ್ಷನ್ 41 (ಎ) ನಲ್ಲಿ ಸಮಯವನ್ನ ಕೊಡಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಎಸ್‍ಐಟಿ ನೋಟಿಸ್ ನೀಡಿದ್ದಾರೆ. ರೇವಣ್ಣ ಇಂದು ವಿಚಾರಣೆಗೆ ಹಾಜಾರಾಗುವುದಾಗಿ ಹೇಳಿದ್ದಾರೆ. ಇನ್ನು ಸಿಎಂ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಘಟನೆಯ ಬಗ್ಗೆ ವಿವರಿಸಿ, ಡಿಪ್ಲಾಮೆಟಿಕ್ ಪಾಸ್ ಪೋರ್ಟ್ ರದ್ದು ಮಾಡಿ ಆದಷ್ಟು ಬೇಗ ಕರೆದುಕೊಂಡು ಬರೋದಕ್ಕೆ ಸಹಕರಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡಿ – ಪ್ರಜ್ವಲ್‌ ರೇವಣ್ಣ ಮನವಿ

ಇದೇ ವೇಳೆ ಬಿಜೆಪಿಯವರ ವಿರುದ್ಧವೂ ಕಿಡಿಕಾರಿದ ಪರಂ, ಬಿಜೆಪಿಯವರು ಕನ್ಫ್ಯೂಷಿಯಸ್ ಕ್ರಿಯೆಟ್ ಮಾಡುತ್ತಿರುತ್ತಾರೆ. ಎಸ್‍ಐಟಿ ಅಧಿಕಾರಿಗಳು, ಕಾನೂನು ಸಲಹೆಗಾರರ ಜೊತೆ ಲೀಗಲ್ ಅಭಿಪ್ರಾಯ ಪಡೆದು ಮುಂದುವರಿಯುವುದಾಗಿ ತಿಳಿಸಿದ್ದಾರೆ.

Share This Article