ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಎಂಬಂತಿದೆ ಬಜೆಟ್ – ಪ್ರಜ್ವಲ್ ರೇವಣ್ಣ

Public TV
1 Min Read

ಬೆಂಗಳೂರು: ನಾನು ಪೂರ್ತಿ ಬಜೆಟ್ ನೋಡಿದೆ. ಇದೊಂದು ಸ್ಲೋಗನ್ ಬಜೆಟ್ ಆಗಿದೆ. ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಎಂಬಂತಿದೆ ಎಂದು ಬಜೆಟ್ ಬಗ್ಗೆ ನೂತನ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಜ್ವಲ್, ನಾನು ಪೂರ್ತಿ ಪ್ರಮಾಣವಾಗಿ ಬಜೆಟ್ ವೀಕ್ಷಣೆ ಮಾಡಿದೆ. ಇದೊಂದು ಸ್ಲೋಗನ್ ಬಜೆಟ್ ಎಂದು ಹೇಳಬಹುದು. ಯಾವುದೇ ರೀತಿ ಅಧಿಕೃತ ನಂಬರ್ ಕೊಡಲಿಲ್ಲ. ಓಲ್ಡ್ ವೈನ್ ಇನ್ ನ್ಯೂ ಬಾಟಲ್ (it is a old wine in new bottle) ಎಂಬಂತಿದೆ. ಹಳೆಯ ಯೋಜನೆಗಳಿಗೆ ಮತ್ತೆ ಚಾಲನೆ ಕೊಟ್ಟಿದ್ದೇವೆ ಎಂಬ ಭಾವನೆಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿದರು.

ನಿರೀಕ್ಷೆ ಮಾಡಿದ ಬಜೆಟ್ ಇದಲ್ಲ. ಇಂದಿನ ಬಜೆಟ್ ಮಂಡನೆಯಲ್ಲಿ ಕಾರ್ಪೋರೇಟರ್ ಟ್ಯಾಕ್ಸ್, ಟಿಡಿಎಸ್ ಬಗ್ಗೆ ಮಾತನಾಡಿದ್ದಾರೆ. ಕೃಷಿ ವಿಷಯದಲ್ಲಿ ನಿರೀಕ್ಷೆಗಳಿಗೆ ತಕ್ಕಂತಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಬಗ್ಗೆ ಏನನ್ನೂ ಹೇಳಿಲ್ಲ. 45 ವರ್ಷಗಳಲ್ಲೇ ಅತಿಹೆಚ್ಚು ನಿರುದ್ಯೋಗ ಸಮಸ್ಯೆ ಇದೆ. ಅದನ್ನು ಹೇಗೆ ಪರಿಹರಿಸುವುದು ಎಂಬುದರ ಬಗ್ಗೆಯೂ ಮಾತನಾಡಿಲ್ಲ ಎಂದರು.

ಕಂಪನಿಗಳು ಭಾರತಕ್ಕೆ ಬರುವ ರೀತಿಯಲ್ಲಿ ಕಾರ್ಪೋರೇಟ್ ತೆರಿಗೆ ಹಾಕಿಲ್ಲ. ಕಾರ್ಪೋರೇಟ್ ಟ್ಯಾಕ್ಸ್ ಬಗ್ಗೆ ನನಗೆ ಸಮಾಧಾನವಾಗಿಲ್ಲ. ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ದುಬಾರಿ ಆಗುತ್ತಿರುವ ಜನಜೀವನ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಬಜೆಟ್‍ನಲ್ಲಿ ಅಂತಹ ಸುಧಾರಣಾ ಕ್ರಮಗಳು ಕಾಣಿಸುತ್ತಿಲ್ಲ ಎಂದು ಹೇಳಿದರು.

ಟಿಡಿಎಸ್ ವ್ಯಸಸ್ಥೆ ತಂದಿರುವುದು ಒಳ್ಳೆಯದು. ಆದರೆ ಹಂತಹಂತವಾಗಿ ಈ ಕ್ರಮ ಅನುಷ್ಠಾನಕ್ಕೆ ತರಬೇಕಾಗಿತ್ತು. ಇದು ತುಂಬಾ ನಿರಾಸೆ ಮೂಡಿಸಿದ ಬಜೆಟ್ ಆಗಿದೆ. ನಾನು ವಿರೋಧ ಮಾಡುವುದಿಲ್ಲ, ಪರನೂ ನಿಲ್ಲುವುದಿಲ್ಲ. ಪೂರ್ತಿ ಓದಿ ಸಂಸತ್ತಿನಲ್ಲಿ ಬಜೆಟ್ ಬಗ್ಗೆ ಮಾತನಾಡುತ್ತೇನೆ ಎಂದು ಪ್ರಜ್ವಲ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *