ಡಿಕೆಶಿ ರಕ್ಷಣೆಗೆ ಸಿಎಂ, ಸರ್ಕಾರ ನಿಂತಿದೆ: ಹೆಚ್‍ಡಿಕೆ ಆರೋಪ

Public TV
2 Min Read

-ಇದು ಎಸ್‍ಐಟಿ ತಂಡ ಅಲ್ಲ ದಂಡ

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ರಕ್ಷಣೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಸರ್ಕಾರ ನಿಂತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ರಕ್ಷಣೆಗೆ ಸಿಎಂ ಹಾಗೂ ಸರ್ಕಾರ ನಿಂತಿದೆ. ಆಡಿಯೋ ರಿಲೀಸ್ ಆದಾಗಿನಿಂದ ಡಿಕೆಶಿವಕುಮಾರ್ ಮಾತಾಡ್ತಿಲ್ಲ. ಅದಕ್ಕೆ ನಾನು ತನಿಖೆ ಯಾವ ರೀತಿ ನಡೆಯುತ್ತಿದೆ ಎಂದಿದ್ದು. ಈ ಬಗ್ಗೆ ನಾವು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ನಡೆಸುತ್ತೇವೆ ಎಂದರು.

ನಾನು ಮೊದಲಿನಿಂದ ಹೇಳಿದ್ದೇನೆ ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಬೇಕು. ತಪ್ಪಿತಸ್ಥರನ್ನು ರಕ್ಷಣೆ ಮಾಡಲು ನಾವು ಹೋಗಲ್ಲ. ಈ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳೋದು ನೋಡುತ್ತಿದ್ದಾರೆ. ಈ ಕುಟುಂಬವನ್ನು ನಿರ್ಣಾಮ ಮಾಡಬೇಕು ಎಂಬಂತಿದೆ. ಈ ಪ್ರಕರಣ ಸೃಷ್ಟಿ ಮಾಡಿ ಹೊರಗೆ ತಂದು ಇವರೇ ಅಮಿತ್ ಶಾ ಅವರಿಗೆ ಪ್ರಶ್ನೆ ಮಾಡ್ತಾರೆ. ಜೆಡಿಎಸ್ ಹೊಂದಾಣಿಕೆ ಯಾವಾಗ ಮುರಿದುಕೊಳ್ತೀರಾ? ಜೆಡಿಎಸ್‍ನ್ನು ಯಾವಾಗ ದೂರ ಇಡ್ತೀರಾ ಎಂದು ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ ಉದ್ದೇಶ ಮತ್ತು ಈ ಪ್ರಕರಣವನ್ನ ಇಷ್ಟು ದೊಡ್ಡ ಮಟ್ಟದಲ್ಲಿ ಸೃಷ್ಟಿ ಮಾಡಿರೋದೇ ಜೆಡಿಎಸ್- ಬಿಜೆಪಿ ಸಂಬಂಧಿಂದ. ಇವರು 20 ಸೀಟು ಗೆಲ್ಲುವ ಭ್ರಮೆಯಲ್ಲಿ ಇದ್ದರು. ಅ ಕನಸು ನುಚ್ಚು ನೂರಾಗಿದೆ ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್ ಲೀಕ್ ಪ್ರಕರಣದಲ್ಲಿ ಡಿಕೆಶಿ ರಾಜೀನಾಮೆ ಕೊಡಬೇಕು: ಹೆಚ್‌ಡಿಕೆ

ಲೋಕಸಭಾ ಚುನಾವಣೆ ಫಲಿತಾಂಶ ಏನಾಗುತ್ತೆ ಎಂದು ಗೊತ್ತಿದೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡ ದಿನವೇ ಅವರಿಗೆ ನಮ್ಮ ಓಟಕ್ಕೆ ಕಡಿವಾಣ ಹಾಕ್ತಾರೆ ಎಂದು ಅರ್ಥವಾಗಿದೆ. ಇವರಿಗೆ ಕಡಿವಾಣ ಹಾಕಿದ್ದೇವೆ ಎಂದು ಆತಂಕಕ್ಕೆ ಒಳಗಾಗಿ ಈ ರೀತಿಯ ಪ್ರಕರಣವನ್ನು ರಾಜ್ಯವೇ ತಲೆ ತಗ್ಗಿಸೋ ಪ್ರಕರಣವನ್ನು ಸೃಷ್ಟಿ ಮಾಡಿದ್ದು ಇದೇ ಡಿ.ಕೆ ಶಿವಕುಮಾರ್ ಮತ್ತು ಇವರ ಪಟಾಲಂಗಳು ಇದನ್ನ ಮಾಡಿರೋದು ಎಂದು ಆರೋಪಿಸಿದ್ದಾರೆ.

ಯಾರು ಈ ಪೆನ್ ಡ್ರೈವ್ ಸೃಷ್ಟಿ ಮಾಡಿ ಇವರ ಕೈಗೆ ತೆಗೆದುಕೊಂಡು ಕೊಟ್ಟಿದ್ದಾನೆ. ಇವತ್ತಿನವರೆಗೂ ಆ ವ್ಯಕ್ತಿಯನ್ನ ಬಂಧಿಸಿದ್ದೀರಾ? ಇವತ್ತಿನವರೆಗೂ ಆತನನ್ನ ಕೋರ್ಟ್ ಮುಂದೆ ಹಾಜರುಪಡಿಸಿಲ್ಲ. ಇದರಲ್ಲಿ ಏನು ಹುನ್ನಾರವಿದೆ. ಸಿಎಂ ಅವರು ಇಷ್ಟು ಲಘುವಾಗಿ ಮಾತಾಡೋದು ಬೇಡ. ಸಿಎಂ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೇ ನುಣಿಚಿಕೊಳ್ತಿದ್ದಾರೆ. ಈ ಪ್ರಕರಣವನ್ನ ಇವರು ಪ್ರಚಾರಕ್ಕಾಗಿ ಇಟ್ಟುಕೊಂಡಿದ್ದೀರಾ. ಯಾರಿಗೂ ಇದರಲ್ಲಿ ನ್ಯಾಯದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ತನಿಖೆ ಆಗ್ತಿಲ್ಲ. ಇದು ಎಸ್‍ಐಟಿ ತಂಡ ಅಲ್ಲ, ಇದು ಎಸ್‍ಐಟಿ ದಂಡ ಇದು. ಈ ದಂಡವನ್ನು ಯಾರ ಮೇಲೆ ಪ್ರಯೋಗ ಮಾಡಬೇಕು ಎಂದು ಇಟ್ಟುಕೊಂಡಿದ್ದೀರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೈಸೂರು: ಕಲುಷಿತ ನೀರು ಸೇವಿಸಿ ಯುವಕ ಸಾವು – 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Share This Article