ದೇವರಾಜೇಗೌಡಗೆ ಬಿಟ್ರೆ ʼಕೈʼ ಮುಖಂಡರಿಗೆ ನಾನು ವೀಡಿಯೋ ಕೊಟ್ಟಿಲ್ಲ: ಪ್ರಜ್ವಲ್ ಮಾಜಿ ಡ್ರೈವರ್ ‌

Public TV
4 Min Read

– ದೇವರಾಜೇಗೌಡ ಹೇಳುತ್ತಿರೋದೆಲ್ಲ ಸುಳ್ಳು

ಬೆಂಗಳೂರು: ರಾಜ್ಯದಲ್ಲಿ ಪೆನ್‌ ಡ್ರೈವ್‌ ಪಾಲಿಟಿಕ್ಸ್‌ ಜೋರಾಗುತ್ತಿದೆ. ಪ್ರಜ್ವಲ್‌ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಇಂದು ಎಸ್‌ಐಟಿ ಅಧಿಕಾರಿಗಳು ತನಿಖೆಗೆ ಇಳಿದಿದ್ದಾರೆ. ಈ ನಡುವೆ ಪ್ರಜ್ವಲ್‌ ರೇವಣ್ಣ ಮಾಜಿ ಡ್ರೈವರ್‌ ಕಾರ್ತಿಕ್ ({rajwal Driver Karthik) ಹೇಳಿಕೆಯ ವೀಡಿಯೋವೊಂದು ಬಿಡುಗಡೆ ಮಾಡಿದ್ದಾರೆ.

ನಾನು ಯಾರಿಗೂ ಫೋಟೋ ಹಾಗೂ ವೀಡಿಯೋಗಳನ್ನು ನೀಡಿಲ್ಲ. ಬಿಜೆಪಿ ಮುಖಂಡ ಹಾಗೂ ವಕೀಲರಾಗಿರುವ ದೇವರಾಜೇ ಗೌಡ (Devaraje Gowda) ಅವರು ನ್ಯಾಯ ಕೊಡಿಸುತ್ತಾರೆ ಎಂದು ನಂಬಿ ಅವರಲ್ಲಿ ಎಲ್ಲಾ ವಿಚಾರಗಳನ್ನು ಶೇರ್‌ ಮಾಡಿಕೊಂಡಿದ್ದೇನೆ. ಆದರೆ ಈಗ ಅವರು ನನ್ನ ಮೇಲೆಯೇ ಸುಳ್ಳು ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ತಿಕ್‌ ಹೇಳಿದ್ದೇನು..?: ಪ್ರಜ್ವಲ್‌ ರೇವಣ್ಣ ಅವರ ಕುಟುಂಬಕ್ಕೆ 15 ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ವರ್ಷದ ಹಿಂದೆ ಅಲ್ಲಿ ಕೆಲಸ ಬಿಟ್ಟಿದ್ದೇನೆ. ನನ್ನ ಜಮೀನು ಬರೆಸಿಕೊಂಡು, ಪತ್ನಿಗೆ ಹೊಡೆದಿದ್ದಾರೆ. ನನಗೂ ನನ್ನ ಪತ್ನಿಗೂ ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಹೀಗಾಗಿ ನಾನು ಅವರ ಮನೆಯಿಂದ ಹೊರಗೆ ಬಂದೆ. ಹೀಗೆ ಹೊರಗಡೆ ಬಂದ ಬಳಿಕ ಕೇಸ್‌ ಹಾಕಬೇಕು ಎಂದು ಹೋರಾಟ ಮಾಡುತ್ತಿದ್ದೆ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೇವರಾಜೇ ಗೌಡರ ಪರಿಚಯವಾಗುತ್ತೆ. ಅವರು ಕೂಡ ಪ್ರಜ್ವಲ್‌ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದರು. ಹೀಗಾಗಿ ನನಗೆ ಬೇರೆ ಯಾರಿಂದಲೂ ನ್ಯಾಯ ಸಿಗಲ್ಲ ಎಂದು ಗೊತ್ತಾಗಿ ದೇವರಾಜೇಗೌಡರ ಬಳಿ ಹೋದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಜ್ವಲ್‍ಗೆ ಟಿಕೆಟ್ ಕೊಡಬೇಡಿ ಅಂತಾ ಮೊದಲೇ ಹೇಳಿದ್ದೆ- ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ನನ್ನ ಕಷ್ಟ ಎಲ್ಲವನ್ನೂ ಅವರ ಮುಂದೆ ಹೇಳಿಕೊಂಡೆ. ಆಗ ಅವರು ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು. ಬಳಿಕ ನಾನು ಬೇರೆ ಲಾಯರ್‌ ಮುಖಾಂತರ ಕೇಸ್‌ ಹಾಕ್ತೀನಿ. ಆಗ ಇವರು ಮತ್ತೆ ನನ್ನ ಕರೆದು ನಿನಗೆ ಕೋರ್ಟ್‌ ನಲ್ಲಿ ಹೋರಾಟ ಮಾಡಿದರೆ ನ್ಯಾಯ ಸಿಗಲ್ಲ. ಜನರಿಗೆ ತಿಳಿಸಬೇಕು ಎಂದು ಹೇಳಿ ಮೀಡಿಯಾ ಮುಂದೆ ಹೇಳಿಕೆಗಳನ್ನು ಕೊಡಿಸಿದ್ರು. ಅಲ್ಲದೇ ನನ್ನ ಜೊತೆ ನಿಂತುಕೊಂಡು ಅವರು ಕೂಡ ಒಂದಷ್ಟು ಹೇಳಿಕೆಗಳನ್ನು ಕೊಡುತ್ತಾರೆ. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಪ್ರಜ್ವಲ್‌ ರೇವಣ್ಣ ಅವರೇ ನನ್ನ ಮೇಲೆ ಸ್ಟೇ ಆರ್ಡರ್‌ ತಂದರು. ಈ ಮೂಲಕ ಯಾವುದೇ ರೀತಿಯ ಅಶ್ಲೀಲವಾಗಿರುವ ಫೋಟೋ ಹಾಗೂ ವೀಡಿಯೋಗಳನ್ನು ರಿಲೀಸ್‌ ಮಾಡದಂತೆ ತಡೆಯುತ್ತಾರೆ ಎಂದರು.

ಇತ್ತ ಸ್ಟೇ ಕಾಪಿ ತೆಗೆದುಕೊಂಡು ದೇವರಾಜೇಗೌಡರಿಗೆ ಕೊಟ್ಟಿದ್ದೇನೆ. ಆಗ ಅವರು ನನಗೆ ಸ್ಟೇ ಕಾಪಿಯಲ್ಲಿರುವ ವಿಷಯಗಳ ಬಗ್ಗೆ ತಿಳಿಸಿದ್ದಾರೆ. ನಾನು ಮುಂದೆ ಏನು ಮಾಡ್ಲಿ ಅಂತ ಕೇಳಿದೆ. ಆಗ ದೇವರಾಜೇ ಗೌಡರು ನಿನ್ನಲ್ಲಿರುವ ಫೋಟೋ ಹಾಗೂ ವೀಡಿಯೋಗಳು ಏನಿವೆ ಅವುಗಳನ್ನು ನನಗೆ ಕೊಡು ಅದನ್ನು ನಾನು ಜಡ್ಜ್‌ ಮುಂದೆ ಸಬ್‌ಮಿಟ್‌ ಮಾಡ್ತೀನಿ. ಬಳಿಕ ನಾನು ನೋಡಿಕೋಳ್ಳುತ್ತೇನೆ. ನೀನಗೇನು ತೊಂದರೆ ಆಗಲ್ಲ ಅಂದ್ರು. ದೇವೇರಾಜೇಗೌಡರನ್ನು ನಂಬಿ ನನ್ನಲ್ಲಿದ್ದ ಒಂದು ಕಾಪಿಯನ್ನು ಕೊಟ್ಟು ಕೇಸ್‌ ಮೂವ್‌ ಮಾಡುವಂತೆ ಹೇಳಿ ಬಂದಿದ್ದೇನೆ. ಅವರು ಅದನ್ನು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರೋ ಗೊತ್ತಿಲ್ಲ. ಆದರೆ ಅವರು ಕೇಸ್‌ ಮೂವ್‌ ಮಾಡಿರಲಿಲ್ಲ. ಹೀಗಾಗಿ ತಿಂಗಳ ಬಳಿಕ ಮತ್ತೆ ಹೋಗಿ ಕೇಳಿದ್ದೀನಿ. ಆಗ ಅವರು ಸ್ವಲ್ಪ ದಿನ ಇರು ಅಂತ ಹೇಳಿದರು. ಹೀಗಾಗಿ ನಾನು ಸುಮ್ಮನಿದ್ದೆ ಎಂದು ಕಾರ್ತಿಕ್‌ ತಿಳಿಸಿದರು. ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯ ಸಹಿಸಲ್ಲ- ಪ್ರಜ್ವಲ್‌ ಬಗ್ಗೆ ಅಮಿತ್‌ ಶಾ ಫಸ್ಟ್‌ ರಿಯಾಕ್ಷನ್‌

ಇದೀಗ ಸುಮಾರು 6 ತಿಂಗಳ ಬಳಿಕ ಅವರೇ ಸುದ್ದಿಗೋಷ್ಠಿಯನ್ನು ಕರೆದು, ಅಲ್ಲಿ ರೇವಣ್ಣ ಫ್ಯಾಮಿಲಿಗೆ ಎಲ್‌ಇಡಿ ಟಿವಿಯಲ್ಲಿ ನಿಮ್ಮದೆಲ್ಲ ಎಕ್ಸ್‌ ಪೋಸ್‌ ಮಾಡುವುದಾಗಿ ಹೇಳುತ್ತಾರೆ. ಕೂಡಲೇ ನಾನು ದೇವರಾಜೇಗೌರ ಬಳಿ, ಯಾಕೆ ಅಣ್ಣ ನೀವು ಹೀಗೆ ಮಾಡ್ತೀರಿ ಅಂತಾ ಕೇಳಿದೆ. ಆಗ ಅವರು, ನೀನು ಸುಮ್ಮನಿರು. ನಿನಗೂ ಅದಕ್ಕೂ ಏನು ಸಂಬಂಧವಿಲ್ಲ ಅಂತ ಹೇಳಿದ್ದಾರೆ. ಇದಾದ ಬಳಿಕ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ಕೊಡಬಾರದು ಎಂದು ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆಯುತ್ತಾರೆ. ಅಲ್ಲದೇ ಅದರ ಕಾಪಿ ಕೂಡ ನನಗೆ ಕಳಿಸಿದ್ದಾರೆ. ಹೆಂಗಾದರೂ ಸರಿ ನನಗೆ ನದಯಾ ಸಿಕ್ಕರೆ ಸಾಕು ಎಂದು ಹೇಳಿ ಅವಾಗ್ಲೂ ನಾನು ಸುಮ್ಮನಾದೆ ಎಂದು ಹೇಳಿದರು.

ಇತ್ತ ಪೆನ್‌ಡ್ರೈವ್‌ ವಿಚಾರ ಸುದ್ದಿಯಾಗ್ತಿದ್ದಂತೆಯೇ ಮತ್ತೆ ಪ್ರೆಸ್‌ಮೀಟ್‌ ಮಾಡಿ, ಈ ಪೆನ್‌ಡ್ರೈವ್‌ ಕಾರ್ತಿಕ್‌ ಕೊಟ್ಟಿರುವುದಾಗಿ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಮುಖಂಡರಿಗೆಲ್ಲ ಕೊಟ್ಟಿರುವುದಾಗಿ ಸುಳ್ಳು ಆಪಾದನೆಗಳನ್ನು ಮಾಡಿದ್ದಾರೆ. ಆದರೆ ನಾನು ದೇವೇರಾಜೇ ಗೌಡ ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಪೆನ್‌ಡ್ರೈವ್‌ ಕೊಟ್ಟಿಲ್ಲ ಎಂದು ಕಾರ್ತಿಕ್‌ ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ಈಗ ಅವರು ಬಚಾವ್‌ ಆಗೋಕೆ ನನ್ನ ಮೇಲೆ ಆಪಾದನೆ ಹೊರಿಸುತ್ತಾರೆ. ಕಳೆ 15 ವರ್ಷಗಳಿಂದ ಪ್ರಜ್ವಲ್‌ ಅವರ ಮನೆಗೆ ಯಾರೆಲ್ಲ ಬಂದಿದ್ದಾರೆ, ಹೋಗಿದ್ದಾರೆ ಎಂಬುದನ್ನು ನೋಡಿದ್ದೀನಿ. ಒಳ್ಳೆಯದು ಹಾಗೂ ಕೆಟ್ಟದ್ದು ಎರಡನ್ನೂ ಕಣ್ಣಾರೆ ನೋಡಿದ್ದೇನೆ. ಹೀಗಾಗಿ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲು ನಾನು ಪ್ರೆಸ್‌ ಮೀಟ್‌ ಮಾಡಿದ್ದೇನೆ. ನನ್ನ ಜೊತೆ ಕೆಲಸ ಮಾಡುತ್ತಿದ್ದರು ಕೂಡ ಬಂದು ಮಾತನಾಡಿದ್ದಾರೆ. ಹೀಗಾಗಿ ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅವರೆಲ್ಲ ಬಂದು ಮಾತಾಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಇಂದು ನಾನು ಎಸ್‌ಐಟಿ ಮುಂದೆ ಹಾಜರಾಗಿ ನನ್ನ ಜೊತೆ ಇರುವ ದಾಖಲೆಗಳು ಎಲ್ಲವನ್ನೂ ನೀಡುತ್ತೇನೆ. ಅಲ್ಲದೇ ಅವರು ಏನೇನು ಪ್ರಶ್ನೆಗಳನ್ನು ಕೇಳುತ್ತಾರೋ ಅಅವುಗಳಿಗೆ ಉತ್ತರ ನೀಡುವುದಾಗಿ ಕಾರ್ತಿಕ್‌ ತಿಳಿಸಿದ್ದಾರೆ.

Share This Article