ದೇವರಾಜೇಗೌಡ, ಪ್ರೀತಂ ಗೌಡ ಆಪ್ತರ ಮನೆ ಸೇರಿದಂತೆ ಹಾಸನದ 6 ಕಡೆ ಎಸ್‌ಐಟಿ ದಾಳಿ

Public TV
1 Min Read

ಹಾಸನ/ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna) ವಿಡಿಯೋವನ್ನು ಹಂಚಿಕೆ ಮಾಡಿದ ಪ್ರಕರಣ ಸಂಬಂಧ ಹಾಸನದ ವಿವಿಧೆಡೆ ಇಂದು ವಿಶೇಷ ತನಿಖಾ ತಂಡ (SIT) ದಾಳಿ ನಡೆಸಿದೆ.

ದೇವರಾಜೇಗೌಡ (Devarajegowda) ನಿವಾಸ, ಕಚೇರಿ, ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಆಪ್ತ ಶರತ್ ಒಡೆತನದ ಬಾರ್ ಮತ್ತು ನಿವಾಸ, ಕಿರಣ್ ಒಡೆತನದ ಹೋಟೆಲ್, ನಿವಾಸ ಮತ್ತು ಪುನೀತ್ ನಿವಾಸ ಸೇರಿ ಒಟ್ಟು ಆರು ಕಡೆ ಮೇಲೆ ಎಸ್‌ಐಟಿ ದಾಳಿ ನಡೆಸಿದೆ. ಇದನ್ನೂ ಓದಿ: 3.02 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ – ಮೋದಿ ಬಳಿಯಿದೆ 52,920 ರೂ. ನಗದು

 

ಪೆನ್‌ಡ್ರೈವ್‌ (Pen Drive) ಹಂಚಿಕೆ ಮಾಡಿದವರ ವಿರುದ್ಧ ದೂರು ದಾಖಲಿಸಲು ಹೊಳೆನರಸೀಪುರ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ಎಸ್‌ಐಟಿ ತನಿಖೆ ನಡೆಸುತ್ತಿದ್ದು ಈ ಹಂತದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದಿದೆ. ಇದನ್ನೂ ಓದಿ: ಪಿಒಕೆಯಲ್ಲಿ ಹಿಂಸಾಚಾರ, ಗುಂಡಿನ ದಾಳಿಗೆ ಮೂವರು ಬಲಿ – ಮದರಸಾದ ಒಳಗಡೆ ಟಿಯರ್‌ ಗ್ಯಾಸ್‌ ಸಿಡಿಸಿದ ಸೇನೆ

ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಅರೆಸ್ಟ್ ಆಗಿರುವ ಲಿಖಿತ್‌ಗೌಡ, ಚೇತನ್ ಜಾಮೀನು ಅರ್ಜಿಯನ್ನು ಹಾಸನ ಕೋರ್ಟ್ ವಜಾ ಮಾಡಿದೆ.

ಸಂತ್ರಸ್ತೆ ಕಿಡ್ನಾಪ್ ಕೇಸಲ್ಲಿ ಮತ್ತೋರ್ವ ಆರೋಪಿ ಹೊಸೂರು ಕೀರ್ತಿಯನ್ನು ಪೊಲೀಸರು ಬಂಧಿಸಿ 4 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹೊಸೂರು ಕೀರ್ತಿ ವಿರುದ್ಧ ಸಂತ್ರಸ್ತೆಯನ್ನು ಅಪಹರಿಸಿ ಕರೆದೊಯ್ದ ಆರೋಪವಿದೆ.

ಅರೆಸ್ಟ್ ಆಗಿರುವ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಪೊಲೀಸರು ಇಂದು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.

Share This Article