ಗೌಡರ ಮನೆಗೆ ಕಪ್ಪು ಚುಕ್ಕಿ ತರಲು ದೂರು: ಸಂತ್ರಸ್ತೆಯ ವಿರುದ್ಧವೇ ಕುಟುಂಬಸ್ಥರಿಂದ ಆರೋಪ

Public TV
1 Min Read

ಹಾಸನ: ಗೌಡರ (Devegowda) ಮನೆಗೆ ಕಪ್ಪು ಚುಕ್ಕಿ ತರಲು ದೂರು ನೀಡಿದ್ದಾಳೆ ಎಂದು ಸಂತ್ರಸ್ತೆಯ ಅತ್ತೆ ಮತ್ತು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇವರು, ನಮ್ಮ ಕಷ್ಟ-ಸುಖವನ್ನ ಭವಾನಿ (Bhavni Revanna) ಅಮ್ಮ ನೋಡಿದ್ದಾರೆ. ದೂರುದಾರರ ನಡತೆ ಕೂಡ ಸರಿ ಇರಲಿಲ್ಲ. ಅವರಿಗೆ ಯಾವ ದೌರ್ಜನ್ಯ ನಡೆದಿಲ್ಲ. ಐದು ವರ್ಷದಿಂದ ಏನು ಮಾಡುತ್ತಿದ್ದರು? ಈಗ ದೂರು ನೀಡಿದ್ದು ಯಾಕೆ ಎಂದು ಪ್ರಶ್ನಿಸಿದರು.  ಇದನ್ನೂ ಓದಿ: ನಾಲ್ಕೈದು ವರ್ಷಗಳ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ? – ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಹೆಚ್.ಡಿ ರೇವಣ್ಣ ಫಸ್ಟ್ ರಿಯಾಕ್ಷನ್

ನಮ್ಮನ್ನು ರೇವಣ್ಣ (Revanna) ಕುಟುಂಬಸ್ಥರು ಚೆನ್ನಾಗಿ ನೋಡಿಕೊಂಡಿದ್ದಾರೆ. ಇಷ್ಟು ವರ್ಷ ರಾಜಕೀಯ ಮಾಡಿದ್ದಾರೆ? ಯಾವುದೇ ಕಪ್ಪು ಚುಕ್ಕಿ ಇಲ್ಲ. ದೂರು ನೀಡಿದವರದ್ದೇ ತಪ್ಪು ಎಂದು ದೂರಿದರು.

ಭವಾನಿ ಅಕ್ಕ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ. ಮೇಡಂ, ಸಾಹೇಬರು ನಮಗೆ ದೇವರಿದ್ದಂತೆ. ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಿರಬಹುದು. ಆಕೆ ಐದು ವರ್ಷದ ಹಿಂದೆಯೇ ಮನೆ ಬಿಟ್ಟಿದ್ದಾಳೆ. ಹೆಣ್ಣಾದವಳು ಐದು ವರ್ಷದ ಹಿಂದೆಯೇ ಹೇಳಬಹುದಿತ್ತು. ಇಂದು ಯಾಕೆ ಅವರ ವಿರುದ್ಧ ಮಾತನಾಡುತ್ತಿದ್ದಾಳೆ? ವಿಡಿಯೋ ಸತ್ಯದ ಬಗ್ಗೆ ಪ್ರಶ್ನಿಸಿ ದೂರುದಾರರ ವಿರುದ್ಧವೇ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Share This Article