ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದತಿ ಕೇಂದ್ರದ ಕರ್ತವ್ಯ: ಜಿ.ಪರಮೇಶ್ವರ್

Public TV
2 Min Read

ಬೆಂಗಳೂರು: ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದು ಮಾಡುವುದು ಕೇಂದ್ರದ ಕರ್ತವ್ಯ. ಆದರೆ ಹೆಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಯೊಂದು ಹೀಗೆ ಆಗಬೇಕು ಎನ್ನುತ್ತಿದ್ದಾರೆ ಎಂದು ಗೃಹ ಸಚಿವ ಡಾ‌.ಜಿ.ಪರಮೇಶ್ವರ್ (G.Parameshwara) ಕಿಡಿಕಾರಿದರು.

ಬೆಂಗಳೂರಿನಲ್ಲಿ ಮಾತಾಡಿದ ಸಚಿವ ಪರಮೇಶ್ವರ್, ಪ್ರಜ್ವಲ್ (Prajwal Revanna) ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಸಹಕಾರ ಕೊಡಬೇಕು. ಬರೀ ಟೀಕೆ ಟಿಪ್ಪಣಿ ಮಾಡಿದರೆ ಪ್ರಯೋಜನ ಇಲ್ಲ. ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸಹಾಯ, ಸಹಕಾರ ಮಾಡಬೇಕು. ಇದು ಪ್ರಜ್ವಲ್ ರೇವಣ್ಣ ಅನ್ನೋ ಪ್ರಶ್ನೆ ಅಲ್ಲ. ಇದು ಕಾನೂನಿಗೆ ಸಂಬಂಧಿಸಿದ ವಿಚಾರ. ಇಂಥ ಸಂದರ್ಭದಲ್ಲಿ ಕಾನೂನು ರಕ್ಷಣೆ ಮಾಡೋದು ಕೇಂದ್ರದ ಜವಾಬ್ದಾರಿ‌ ಕೂಡಾ. ಇದನ್ನ ಕೇಂದ್ರ ಸರ್ಕಾರ ತಿಳಿದುಕೊಳ್ಳಲಿ. ಅರೆಸ್ಟ್ ವಾರಂಟ್ ಜಾರಿಯಾಗಿರೋದು ಕೋರ್ಟ್‌ನಿಂದ. ಇದನ್ನ ಈಗಾಗಲೇ ಎಸ್ಐಟಿಯವರು ಕೇಂದ್ರಕ್ಕೆ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಫೋನ್ ಟ್ಯಾಪ್‌ನಂತಹ ನೀಚ ಕೆಲಸ ಮಾಡಲ್ಲ: ಸಿದ್ದರಾಮಯ್ಯ ತಿರುಗೇಟು

ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡೋದು ಕೇಂದ್ರದ ಕರ್ತವ್ಯ. ಈಗಾಗಲೇ ಪಾಸ್‌ಪೋರ್ಟ್ ರದ್ದತಿಗೆ ಸಿಎಂ ಪತ್ರ ಬರೆದಿದ್ದಾರೆ. ಸಿಎಂ ಪತ್ರಕ್ಕೆ ಕೇಂದ್ರ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ಈಗ ಕೋರ್ಟ್‌ನಿಂದ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ. ಇದು ಅಧಿಕೃತ. ಇದರ ಆಧಾರದಲ್ಲಾದರೂ ಕೇಂದ್ರ ಪಾಸ್‌ಪೋರ್ಟ್ ರದ್ದು ಮಾಡಲಿ ಎಂದು ಆಗ್ರಹಿಸಿದರು.

ದೇವರಾಜೇಗೌಡ ರಿಲೀಸ್ ಮಾಡಿದ ಆಡಿಯೋದಲ್ಲಿ ಡಿಕೆಶಿ ದನಿ ಇರೋದೇ ದೊಡ್ಡ ಸಾಕ್ಷಿ ಅಲ್ವಾ ಅನ್ನೋ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಪರಮೇಶ್ವರ್, ಕುಮಾರಸ್ವಾಮಿ ಅವರು ಪ್ರತಿಯೊಂದಕ್ಕೂ ಮಾತಾಡ್ತಿದ್ದಾರೆ. ಪ್ರತಿಯೊಂದನ್ನೂ ಮಾತಾಡ್ತಿದ್ದಾರೆ. ಆದ್ರೆ ಕಾನೂನು ಚೌಕಟ್ಟು ಮತ್ತು ಎಸ್ಐಟಿ‌ ನಿಯಮದನ್ವಯ ನಡೆಯುತ್ತೆ. ಸರ್ಕಾರ ಕೂಡಾ ಇದನ್ನು ಗಮನಿಸಿಯೇ ಕೆಲಸ ಮಾಡುತ್ತೆ. ಪ್ರತಿಯೊಂದಕ್ಕೂ ಟೀಕೆ ಟಿಪ್ಪಣಿ ಮಾಡ್ತಿದ್ದಾರೆ ಹೆಚ್ಡಿಕೆ. ಹಾಗೇ ಆಗಬೇಕು ಹೀಗೇ ಆಗಬೇಕು ಅನ್ನೋ ಥರ ಹೆಚ್ಡಿಕೆ ಮಾತಾಡ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ರೇಸ್‌ನಲ್ಲಿ ನಾನಿಲ್ಲ, ಸಾಮರ್ಥ್ಯ ಇರುವವರಿಗೆ ಕೊಡಲಿ: ಸತೀಶ್ ಜಾರಕಿಹೊಳಿ

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಕ್ಕೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿಲ್ಲ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಯಾರ ಕಾಲದಲ್ಲಿ ಕೊಲೆ, ಅಪರಾಧ ಜಾಸ್ತಿ ಇತ್ತು ಅಂತ ದಾಖಲೆ ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಮೊದಲು ಬಿಜೆಪಿಯವ್ರು ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.

Share This Article