ಅತ್ಯಾಚಾರ ಆರೋಪಿಗೆ ಈಗ ಬೇಕಿದೆ ಹನುಮನ ಶ್ರೀರಕ್ಷೆ – ನಿತ್ಯ ಹನುಮಾನ್ ಚಾಲಿಸ ಪಠಿಸುತ್ತಿರೋ ಪ್ರಜ್ವಲ್ ರೇವಣ್ಣ

Public TV
1 Min Read

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಪ್ರತಿದಿನ ಹನುಮಾನ್‌ ಚಾಲೀಸ ಪಠಿಸುತ್ತಿದ್ದಾರೆ.

ಪ್ರಜ್ವಲ್‌ ರೇವಣ್ಣ ಜೈಲು ಸೇರಿ ಒಂದು ವರ್ಷ ಸಮೀಪಿಸುತ್ತಿದೆ. ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಮಾಜಿ ಸಂಸದನಿಗೆ ಈಗ ದೇವರ ಭಯ ಶುರುವಾಗಿದೆ. ಇದನ್ನೂ ಓದಿ: ಪ್ರಜ್ವಲ್‌ ಇನ್ನೊಂದು ತಿಂಗಳಲ್ಲಿ ಹೊರಗೆ ಬರ್ತಾರೆ, ಯಾರು ತಲೆಕೆಡಿಸಿಕೊಳ್ಬೇಡಿ: ಸೂರಜ್‌ ರೇವಣ್ಣ

ತನಗೆ ಎದುರಾಗಿರುವ ಸಂಕಷ್ಟ ನಿವಾರಣೆ ಮತ್ತು ಧೈರ್ಯ ಪ್ರಾಪ್ತಿಗೆ ದಿನವೆಲ್ಲಾ ಹನುಮಾನ್ ಚಾಲಿಸ ಪಠಿಸುತ್ತಾ ಇದ್ದಾರೆ. ಜೈಲಿನಲ್ಲೂ ದಿನಂಪ್ರತಿ ದೇವರ ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಪ್ರಜ್ವಲ್ ಪ್ರತಿ ಬಾರಿಯೂ ಕೋರ್ಟ್‌ಗೆ ಬಂದಾಗ ಕೈಯಲ್ಲಿ ಒಂದು ಹನುಮಾನ್ ಚಾಲಿಸ ಪುಸ್ತಕ ಹಿಡಿದುಕೊಂಡು ಮಂತ್ರ ಪಠಣೆ ಮಾಡ್ತಾರೆ. ನ್ಯಾಯಾಧೀಶರ ಮುಂದೆ ಹಾಜರಾದಗಲೂ, ಸಂಕಷ್ಟ ನಿವಾರಣೆ ಆಗಲಿ ಅಂತ ಮನಸ್ಸಿನಲ್ಲೇ ಮಂತ್ರ ಪಠಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ವಜಾ – ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ಪ್ರಜ್ವಲ್ ರೇವಣ್ಣ

Share This Article